Advertisement

ಶ್ರೇಯಾ ಸೇನ್‌ ಗುಪ್ತಾಗೆ ಡೈರಿಡೇ ಗೋಲ್ಡನ್‌ ಸ್ಪೂನ್‌

11:17 AM Mar 09, 2018 | Team Udayavani |

ಮಂಗಳೂರು : ಡೈರಿ ಡೇ ಐಸ್‌ಕ್ರೀಂ ತಯಾರಕರಾದ ಡೈರಿ ಕ್ಲಾಸಿಕ್‌ ಐಸ್‌ಕ್ರೀಮ್ಸ್‌ ಪ್ರೈ. ಲಿ. ಸಂಸ್ಥೆಯವರು ಏರ್ಪಡಿಸಿದ್ದ ಡೈರಿಡೇ ಸಿಲ್ವರ್‌ ಸ್ಪೂನ್‌ ಸ್ಪರ್ಧೆ 400 ವಿಜೇತರ ಪೈಕಿ ಬೆಂಗಳೂರಿನ ಶ್ರೇಯಾ ಸೇನ್‌ ಗುಪ್ತ ಅವರು 35,000 ರೂ. ಮೌಲ್ಯದ ಗೋಲ್ಡನ್‌ ಸ್ಪೂನ್‌ ಬಂಪರ್‌ ಬಹುಮಾನ ವಿಜೇತರಾಗಿದ್ದಾರೆ.

Advertisement

ಯಕ್ಷಧ್ರುವ ಪಟ್ಲ ಪ್ರತಿಷ್ಠಾನ ಟ್ರಸ್ಟ್‌ನ ಮಂಗಳೂರು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್‌ ಶೆಟ್ಟಿ ಅವರು ಮಾ. 7ರಂದು ಲಕ್ಕಿ ಡ್ರಾ ನೆರವೇರಿಸಿದರು. ಡೈರಿಡೇಯ ನೂತನ ಪಾನ್‌ ಟ್ವಿಸ್ಟ್‌ ಐಸ್‌ಕ್ರೀಂ ಅನ್ನು ಈ ಸಂದರ್ಭದಲ್ಲಿ 1,500 ಮಂದಿಗೆ ಕೊಡುಗೆಯಾಗಿ ವಿತರಿಸಲಾಯಿತು.

ಡೈರಿ ಡೇಯ ಪರವಾಗಿ ಪಬ್ಲಿಕ್‌ ರಿಲೇಶನ್ಸ್‌ ಕೋಆರ್ಡಿನೇಟರ್‌ ಪ್ರವೀಣ್‌ ನಾೖಕ್‌ ಪಿ. ಅವರು ಯಕ್ಷಗಾನಕ್ಕೆ ಪ್ರೋತ್ಸಾಹಕವಾಗಿ ಒಂದು ಲಕ್ಷ ರೂ. ಮೊತ್ತವನ್ನು ಪಟ್ಲ ಸತೀಶ್‌ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next