Advertisement
ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ದಡ್ಡುವಿನ ಪ್ರಗತಿಪರ ಕೃಷಿಕ ಲಕ್ಷ್ಮೀನಾರಾಯಣ ಕಿಣಿಯವರ ಕೃಷಿ ಬದುಕಿನ ಯಶೋಗಾಥೆ ಇತರರಿಗೆ ಮಾದರಿಯಾಗಿದೆ. ಮುಂಡ್ಕೂರು ದಡ್ಡು ಪ್ರದೇಶದಲ್ಲಿ ಸುಮಾರು 35 ಎಕರೆ ಪ್ರದೇಶ ಹಚ್ಚ ಹಸಿರಾಗಿದ್ದು ಪರಿಸರ ಪ್ರೇಮಿಗಳನ್ನು ಕೈ ಬೀಸಿ ಕರೆಯುತ್ತಿದೆ. ಅಲ್ಲದೆ ಸ್ವಾವಲಂಬಿ ಬದುಕು ಕಟ್ಟಲು ಹೊರಟಿರುವ ಮಂದಿಗೆ ಪ್ರೇರಣೆ ನೀಡ ಹೊರಟಿದೆ. ಇವೆಲ್ಲಕ್ಕೆ ಕಾರಣಕರ್ತರು ಲಕ್ಷ್ಮೀನಾರಾಯಣ ಕಿಣಿ ತನ್ನ 30 ಎಕರೆ ಜಾಗದಲ್ಲಿ ಕಳೆದ ಹಲವು ವರ್ಷಗಳಿಂದ ರಬ್ಬರ್ ಬೆಳೆಯನ್ನು ಬೆಳೆದು ಉತ್ತಮ ಲಾಭವನ್ನು ಗಳಿಸುತ್ತಿದ್ದಾರೆ. ಅಲ್ಲದೆ ಇನ್ನುಳಿದ ಸುಮಾರು 5 ಎಕರೆ ಜಾಗದಲ್ಲಿ ವಿವಿಧ ರೀತಿಯ ಮಿಶ್ರ ಕೃಷಿಯನ್ನು ಬೆಳೆಯುವುದರ ಮೂಲಕ ಯಶಸ್ಸು ಕಂಡಿದ್ದಾರೆ.
ಮುಂಡ್ಕೂರಿನ ಲಕ್ಷ್ಮೀನಾರಾಯಣ ಕಿಣಿ ಇದೀಗ ಸಾಧಕ ಕೃಷಿಕರ ಸಾಲಿಗೆ ಸೇರ್ಪಡೆಗೊಂಡಿದ್ದಾರೆ. ಆದರೆ ಇಲಾಖೆಯ ಕೆಲವೊಂದು ಯೋಜನೆ ಗಳು ರೈತರಿಗೆ ಸರಿಯಾದ ವೇಳೆಯಲ್ಲಿ ಸಿಗುವುದಿಲ್ಲವೆಂಬ ಕಾರಣದಿಂದ ಕಿಣಿ ಅವರು ಬೇಸರ ವ್ಯಕ್ತಪಡಿಸುತ್ತಾರೆ. ಹೈನುಗಾರಿಕೆಯಲ್ಲಿ ಕಿಣಿ ಅವರು 35 ದನಗಳಿಂದ ಸಾಕಷ್ಟು ಲಾಭವನ್ನು ಪಡೆಯುತ್ತಿದ್ದಾರೆ. ಜತೆಗೆ ಮನೆಯ ಸುತ್ತ ತೊಂಡೆ, ಬೆಂಡೆ, ಬದನೆಯಂತಹ ಗಿಡಗಳನ್ನು ಬೆಳೆದಿದ್ದು ತರಕಾರಿಯಲ್ಲೂ ಉತ್ತಮ ಲಾಭ ಗಳಿಸುತ್ತಿದ್ದಾರೆ. ಈ ಮೂಲಕ ಕಿಣಿ ಅವರು ಇತರ ರೈತರಿಗೆ ಮಾದರಿಯಾಗಿದ್ದಾರೆ. ತನ್ನ ಕೃಷಿ ಚಟುವಟಿಕೆಗೆ ಬೇಕಾದ ನೀರಿ ಗಾಗಿ ಸುಮಾರು ರೂ. 5 ಲಕ್ಷ ವ್ಯಯಿಸಿ ಅಂತರ್ಜಲ ವೃದ್ಧಿಗೂ ಕೈ ಹಾಕಿದ್ದಾರೆ.
Related Articles
Advertisement
ಹೈನುಗಾರಿಕೆ ಹಾಗೂ ಮಿಶ್ರ ಕೃಷಿಯನ್ನು ಬೆಳೆಯುವುದರಿಂದ ಹೆಚ್ಚಿನ ಲಾಭವನ್ನು ಪಡೆಯಲು ಸಾಧ್ಯ, ವಿವಿಧ ತರಕಾರಿ ಹಾಗೂ 30 ಎಕರೆ ಜಾಗದಲ್ಲಿ ರಬ್ಬರ್ ಕೃಷಿಯನ್ನು ಮಾಡಿದ ಪರಿಣಾಮ ಲಾಭವನ್ನು ಪಡೆಯುತ್ತಿದ್ದೇನೆ, ಸರಕಾರ, ಇಲಾಖೆ ಗುರುತಿಸಿಲ್ಲ ಬೇಸರವಿದೆ, ಖಾಲಿ ಜಮೀನು ಬಿಡಬೇಡಿ ಎಲ್ಲರೂ ಕೃಷಿ ಮಾಡಿ.– ಮುಂಡ್ಕೂರು ಲಕ್ಷ್ಮೀನಾರಾಯಣ ಕಿಣಿ, ಪ್ರಗತಿಪರ ಕೃಷಿಕ – ಶರತ್ ಶೆಟ್ಟಿ