Advertisement

ಸೆನ್ಸೆಕ್ಸ್‌ ಮಧ್ಯಂತರ ದಾಖಲೆ

09:51 AM Dec 18, 2019 | |

ಮುಂಬಯಿ/ಹಾಂಕಾಂಗ್‌: ಅಮೆರಿಕ-ಚೀನ ನಡುವಿನ ಸುಂಕ ಸಮರ ತಗ್ಗಿರುವ ಸೂಚನೆ, ದೇಶಿಯ ಮಾರುಕಟ್ಟೆಯಲ್ಲಿನ ಚೇತೋಹಾರಿ ಬೆಳವಣಿಗೆಯಿಂದಾಗಿ ಬಾಂಬೆ ಷೇರು ಪೇಟೆಯಲ್ಲಿ ಸಂವೇದಿ ಸೂಚ್ಯಂಕ ಮಧ್ಯಂತರದಲ್ಲಿ 41,401.65 ವರೆಗೆ ಏರಿ ದಾಖಲೆ ಸ್ಥಾಪಿಸಿತು.

Advertisement

ನಿಫ್ಟಿ ಸೂಚ್ಯಂಕ ಕೂಡ 12, 182.75ರ ವರೆಗೆ ತಲುಪಿತು. ದಿನದ ಮುಕ್ತಾಯಕ್ಕೆ ಷೇರು ಪೇಟೆ 41, 352.17ರಲ್ಲಿ ವಹಿವಾಟು ಮುಗಿಸಿತು. ಹೀಗಾಗಿ 413.45 ಪಾಯಿಂಟ್ಸ್‌ಗಳಷ್ಟು ಸೂಚ್ಯಂಕ ಏರಿಕೆಯಾಗಿದೆ. ನಿಫ್ಟಿ 111.05 ಪಾಯಿಂಟ್ಸ್‌ ಏರಿಕೆ ಕಂಡಿದೆ. ಹಾಂಕಾಂಗ್‌, ಶಾಂಘೈ, ಸಿಯೋಲ್‌, ತೈಪೆ ಕೂಡ ಬಿಎಸ್‌ಇ ಜಿಗಿತದಿಂದ ಸ್ಫೂರ್ತಿಗೊಂಡವು. ಸಿಡ್ನಿ, ಸಿಂಗಾಪುರ ಸ್ಟಾಕ್‌ಎಕ್ಸ್‌ಚೇಂಜ್‌ ಕುಸಿತ ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next