Advertisement

ಬಸವಸಾಗರದಿಂದ ನಿತ್ಯ ನೀರು ಬಿಡುಗಡೆ: ಪ್ರವಾಹ ಭೀತಿಯಲ್ಲಿ ಜನತೆ

04:15 PM Aug 14, 2022 | Team Udayavani |

ನಾರಾಯಣಪುರ: ಬಸವಸಾಗರ ಜಲಾಶಯದಿಂದ 2.21 ಲಕ್ಷ ಕ್ಯೂಸೆಕ್‌ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ನಿತ್ಯವು ನದಿಗೆ ಅಪಾರ ನೀರು ಹರಿಬಿಡಲಾಗುತ್ತಿದೆ. ಹೀಗಾಗಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು, ನದಿ ತೀರದ ಗ್ರಾಮಗಳ ಜನತೆ ಪ್ರವಾಹದ ಭೀತಿಯಲ್ಲಿದ್ದಾರೆ.

Advertisement

ಆಲಮಟ್ಟಿ ಲಾಲ್‌ ಬಹದ್ದೂರ ಶಾಸ್ತ್ರೀ ಸಾಗರದಿಂದ ಬಸವಸಾಗರಕ್ಕೆ ಬರುವ ಒಳಹರಿವು ಶನಿವಾರ ಬೆಳಿಗ್ಗೆ 2.20 ಲಕ್ಷ ಕ್ಯೂಸೆಕ್‌ನಷ್ಟಿತ್ತು. ಹೀಗಾಗಿ ಜಲಾಶಯಕ್ಕೆ ಬರುವ ಒಳಹರಿವುನಷ್ಟೆ ನೀರನ್ನು ನದಿಗೆ ಹರಿಸಲಾಗುತ್ತಿದೆ. ಒಂದೊಮ್ಮೆ ಜಲಾಶಯಕ್ಕೆ ಬರುವ ಒಳಹರಿವು ಹೆಚ್ಚಾದರೆ ನದಿಗೆ ನೀರು ಹರಿಸುವ ಪ್ರಮಾಣ ಹೆಚ್ಚಾಗಲಿದೆ.

ಯಥಾಸ್ಥಿತಿ ಒಳಹರಿವು ಇದ್ದರೆ ಒಳಹರಿವಿನಷ್ಟೆ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ನದಿ ತೀರದ ಗ್ರಾಮಗಳ ಜನತೆ ಎಚ್ಚರದಿಂದರಲು ಅಣೆಕಟ್ಟು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next