Advertisement
ತನ್ನ ಮಡಿಲಲ್ಲಿ ಬೆಚ್ಚನೆ ಮಲಗಿದ್ದ ಹಸುಗೂಸನ್ನು ಅಪ್ಪಿಕೊಂಡು ಮಹಿಳೆಯೊಬ್ಬರು ಅಳಲು ತೋಡಿ ಕೊಂಡರು. ಇಂತಹ ಮನ ಕಲಕುವ ದೃಶ್ಯ ಕಂಡು ಬಂದಿದ್ದು ಪುಷ್ಪಗಿರಿ ತಪ್ಪಲಿ ನಲ್ಲಿ ಭೂಕುಸಿತ ಭೀತಿಯಿಂದ ಮನೆ ಮಠ ಬಿಟ್ಟು ಬಂದವರಿಗಾಗಿ ಆರಂಭಿಸಲಾದ ಕಲ್ಮಕಾರು ನೆರೆ ಪರಿಹಾರ ಕೇಂದ್ರದಲ್ಲಿ.
ಧಾರಾಕಾರ ಮಳೆಗೆ ಪುಷ್ಪಗಿರಿ ಭೂಕುಸಿತದ ಭೀತಿ ಎದುರಿಸುತ್ತಿದೆ. ಗುಡ್ಡದ ತಪ್ಪಲಿನ ಗುಳಿಕ್ಕಾನ ಎಂಬಲ್ಲಿನ ಎಂಟು ಕುಟುಂಬಗಳು ಈಗ ನೆರೆ ಪರಿಹಾರ ಕೇಂದ್ರದಲ್ಲೇ ಆಶ್ರಯ ಪಡೆದಿವೆ. ದ.ಕ. ಮತ್ತು ಕೊಡಗು ಜಿಲ್ಲೆಗಳ ಗಡಿ ಭಾಗದಲ್ಲಿರುವ ಕಲ್ಮಕಾರು ಭಾಗದ ಕುಳಿಕ್ಕಾನ ಪರಿಸರದಲ್ಲಿ ಕೃಷಿ ಹಾಗೂ ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಈ ಕುಟುಂಬಗಳಿಗೆ ಮನೆಯಿದ್ದರೂ ವಾಸಿಸಲು ಅಸಾಧ್ಯವಾದ ಪರಿಸ್ಥಿತಿ ಇದೆ. ಬಾಲಕೃಷ್ಣ ಭೀಮಗುಳಿ