Advertisement

ಇಂದಿನ ರಾಶಿಫಲ: ಸಂದರ್ಭಕ್ಕೆ ಸರಿಯಾಗಿ ಬುದ್ಧಿವಂತಿಕೆ ಪ್ರದರ್ಶನದಿಂದ ಪ್ರಗತಿ

08:09 AM May 28, 2022 | Team Udayavani |

28-05-2022

Advertisement

ಮೇಷ: ಪಾಲುದಾರಿಕಾ ಕ್ಷೇತ್ರದಲ್ಲಿ ಪ್ರಗತಿ. ದೀರ್ಘ‌ ಪ್ರಯಾಣದಿಂದ ಲಾಭ. ಉತ್ತಮ ಧನಾರ್ಜನೆ. ಆರೋಗ್ಯದಲ್ಲಿ ಸಣ್ಣ ಕಿರಿಕಿರಿ. ಆಸ್ತಿ ಸಂಚಯನ. ಮಾತೃ ಸಮಾನರಿಂದ ಸಂತೋಷ ವೃದ್ಧಿ. ನೂತನ ಮಿತ್ರರ ಭೇಟಿ.

ವೃಷಭ: ಆರೋಗ್ಯ ಮಧ್ಯಮ. ಉತ್ತಮ ಚಟುವಟಿಕೆಗಳಿಂದ ಕೂಡಿದ ದಿನ. ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಅಭಿವೃದ್ಧಿ. ಮಕ್ಕಳ ನಿಮಿತ್ತ ಹೆಚ್ಚಿದ ಜವಾಬ್ದಾರಿ. ದಾಂಪತ್ಯ ತೃಪ್ತಿದಾಯಕ.

ಮಿಥುನ: ಅವಿವಾಹಿತರಿಗೆ ಕಂಕಣ ಭಾಗ್ಯ. ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಅಭಿವೃದ್ಧಿ. ಉತ್ತಮ ಬೆಳವಣಿಗೆ. ಅಧಿಕ ಧನಾರ್ಜನೆ. ಗುರುಹಿರಿಯರ ಉತ್ತಮ ಮಾರ್ಗದರ್ಶನ. ಸಂದರ್ಭಕ್ಕೆ ಸರಿಯಾಗಿ ಬುದ್ಧಿವಂತಿಕೆ ಪ್ರದರ್ಶನದಿಂದ ಪ್ರಗತಿ.

ಕರ್ಕ: ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಅಧಿಕ ಶ್ರಮ. ನಿರೀಕ್ಷಿಸಿದ ಸ್ಥಾನಮಾನ ಸಿಗಲಿಲ್ಲವೆಂದು ಚಿಂತೆ ಕಾಡೀತು. ಗುರುಹಿರಿಯರೊಂದಿಗೆ ಸಂಯಮದಿಂದ ವರ್ತಿಸಿ. ಬೇಸರಕ್ಕೆ ಅವಕಾಶ ನೀಡದಿರಿ. ಮಧ್ಯಮ ಧನಾರ್ಜನೆ.

Advertisement

ಸಿಂಹ: ಆರೋಗ್ಯ ಗಮನಿಸಿ. ಹಣಕಾಸಿನ ವಿಚಾರದಲ್ಲಿ ಪ್ರಗತಿ. ಮಕ್ಕಳ ವಿಚಾರದಲ್ಲಿ ಸಂತೋಷ ವೃದ್ಧಿ. ಭೂಮ್ಯಾದಿ ವ್ಯವಹಾರಗಳಲ್ಲಿ ಪ್ರಗತಿ. ಪಾಲುದಾರಿಕಾ ವ್ಯವಹಾರಗಳಲ್ಲಿ ಸಂಯಮವಿರಲಿ. ದಾಂಪತ್ಯ ತೃಪ್ತಿಕರ.

ಕನ್ಯಾ: ಗೃಹೋಪಕರಣ ವಸ್ತು ಸಂಗ್ರಹ. ಅನಿರೀಕ್ಷಿತ ಭೂಮ್ಯಾದಿ ಆಸ್ತಿ ವಿಚಾರಗಳಲ್ಲಿ ಬದಲಾವಣೆ. ಬಂಧುಬಳಗದವರಲ್ಲಿ ತಾಳ್ಮೆಯಿಂದ ವ್ವಯಹರಿಸಿ. ಚರ್ಚೆಗೆ ಆಸ್ಪದ ನೀಡದಿರಿ. ಮಕ್ಕಳಿಂದ ತೃಪ್ತಿ.

ತುಲಾ: ಸುಖ ಸಂತೋಷದಿಂದ ಕೂಡಿದ ದಿನ. ಬಂಧುಮಿತ್ರರ ಸಹಕಾರ ಪ್ರೋತ್ಸಾಹ. ವಾಹನ ಆಸ್ತಿ ವಿಚಾರಗಳಲ್ಲಿ ಮುನ್ನಡೆ. ನಿರಂತರ ಧನಾರ್ಜನೆ. ಉತ್ತಮ ವಾಕ್‌ಚತುರತೆಯಿಂದಲೂ ಜವಾಬ್ದಾರಿಯಿಂದಲೂ ಕೂಡಿದ ಕಾರ್ಯ ವೈಖರಿ.

ವೃಶ್ಚಿಕ: ದೂರ ಸಂಚಾರ ಸಂಭವ. ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಒತ್ತಡ ಜವಾಬ್ದಾರಿ. ಧನಾರ್ಜನೆಗೆ ಕೊರತೆಯಾಗದು. ಅನ್ಯರಿಂದ ಸಹಾಯ ನಿರೀಕ್ಷಿಸದಿರಿ. ಗೃಹದಲ್ಲಿ ಶಾಂತಿ ಕಾಪಾಡಿ. ಅನಾವಶ್ಯಕ ಚರ್ಚೆ ಬೇಡ.

ಧನು: ಕೆಲಸ ಕಾರ್ಯಗಳಲ್ಲಿ ಗೌರವ ಕೀರ್ತಿ ಸಂಪಾದನೆ. ಪ್ರಗತಿ. ಹೆಚ್ಚಿದ ಸ್ಥಾನ ಧನ ಲಾಭ. ಉತ್ತಮ ವಾಕ್‌ಚತುರತೆ. ಗುರುಹಿರಿಯರ ಸಹಕಾರ ಪ್ರೋತ್ಸಾಹ. ಆರೋಗ್ಯ ವೃದ್ಧಿ. ಮಕ್ಕಳಿಗೆ ಸರ್ವ ವಿಧದ ಸೌಲಭ್ಯ ಪ್ರಾಪ್ತಿ.

ಮಕರ: ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಸಮಯ ಸಂದರ್ಭಕ್ಕೆ ಸರಿ ಯಾಗಿ ನಿಪುಣತೆ ಪ್ರದರ್ಶನ. ಬಂಧುಮಿತ್ರರ ಸಹಕಾರ ಸಂತೋಷ. ದಂಪತಿಗಳಲ್ಲಿ ಅನ್ಯೊನ್ಯತೆಗೆ ಕೊರತೆಯಾಗದಂತೆ ವ್ಯವಹರಿಸಿ.

ಕುಂಭ: ಸಣ್ಣ ಪ್ರಯಾಣ ಸಂಭವ. ಸಹೋದರ ಸಮಾನರಿಂದಲೂ ಸಹೋದ್ಯೋಗಿಗಳಿಂದಲೂ ಸಹಕಾರ ಪ್ರಾಪ್ತಿ ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮದಿಂದ ಯಶಸ್ಸು ಲಭ್ಯ. ಗೃಹೋಪಕರಣ ವಸ್ತುಗಳಿಗಾಗಿ ಧನವ್ಯಯ.

ಮೀನ: ಆರೋಗ್ಯ ವೃದ್ಧಿ. ದೀರ್ಘ‌ ಪ್ರಯಾಣ ಸಂಭವ. ನೂತನ ಮಿತ್ರರ ಭೇಟಿ. ಕೆಲಸ ಕಾರ್ಯಗಳಲ್ಲಿ ಸರಿಯಾದ ನಿರ್ಣಯದಿಂದ ತೃಪ್ತಿ. ಪರರಿಂದ ಬರಬೇಕಾದ ಧನ ಪ್ರಾಪ್ತಿ. ಮಕ್ಕಳಿಂದ ಸಂತೋಷ. ಬಂಧು-ಮಿತ್ರರಲ್ಲಿ ಸಂಯಮದಿಂದ ವ್ಯವಹರಿಸಿ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next