Advertisement

Daily Horoscope: ಈ ರಾಶಿಯ ವಧು – ವರಾನ್ವೇಷಿಗಳಿಗೆ ಶುಭ ಸುದ್ದಿ

07:20 PM Oct 19, 2024 | Team Udayavani |

20-10-2024

Advertisement

ಮೇಷ: ದಿನವಿಡೀ ಬಗೆಬಗೆಯ ಚಟುವಟಿಕೆಗಳು. ಬಹುವಿಧದ ವ್ಯವಹಾರಗಳ ಒತ್ತಡ. ಮನೆಯಲ್ಲಿ ಆರಾಮದ ವಾತಾವರಣ. ಹತ್ತಿರದ ದೇವಾಲಯ, ವೃದ್ಧಾಶ್ರಮಕ್ಕೆ ಭೇಟಿ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಮಾಧಾನದ ದಿನ.

ವೃಷಭ: ಸಮಾಜದ ಗಣ್ಯ ವ್ಯಕ್ತಿಗಳ ಭೇಟಿ. ವ್ಯವಹಾರ ಕ್ಷೇತ್ರದಲ್ಲಿ ಹೊಸ ಅನುಭವ. ಸಂಸ್ಥೆಯ ಹೊಸ ಕಟ್ಟಡದಲ್ಲಿ ಪೂಜಾ ಕಾರ್ಯಕ್ರಮ. ಅನಾಥಾಶ್ರಮ, ಆಸ್ಪತ್ರೆಗಳಿಗೆ ಭೇಟಿ. ಮಕ್ಕಳು, ಹಿರಿಯರು, ಗೃಹಿಣಿಯರಿಗೆ ನೆಮ್ಮದಿ.

ಮಿಥುನ: ಮನೆಯಲ್ಲಿ ವಿರಾಮದ ಭಾವ. ಬಾಕಿಯುಳಿದಿರುವ ಕೆಲಸಗಳನ್ನು  ನಾಳೆ  ಮುಗಿಸುವ ಚಿಂತೆ. ವ್ಯವಹಾರಸ್ಥರಿಗೆ ನಿಶ್ಚಿಂತೆ. ಉದ್ಯೋಗ ಹುಡುಕುವವರಿಗೆ ಶುಭಸೂಚನೆ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಮಾಧಾನ.

ಕರ್ಕಾಟಕ: ದೇವತಾರಾಧನೆಯಿಂದ ಮನೆಯಲ್ಲಿ ಶಾಂತಿ. ಸಹೋದ್ಯೋಗಿಗಳ ಸೌಹಾರ್ದ ಭೇಟಿ. ವ್ಯವಹಾರ ಕ್ಷೇತ್ರದ ಮಿತ್ರರ ಸಂದರ್ಶನ. ಉದ್ಯೋಗ ಅರಸುತ್ತಿರುವ ಶಿಕ್ಷಿತರಿಗೆ ಅವಕಾಶಗಳು ಗೋಚರ. ವಿವಾಹ ಮಾತುಕತೆಯಲ್ಲಿ ಭಾಗಿ.

Advertisement

ಸಿಂಹ: ವ್ಯವಹಾರ ಸುಧಾರಣೆಯ ಚಿಂತೆ. ಗೃಹ ನಿರ್ಮಾಣ ಪ್ರಗತಿಯಲ್ಲಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ದೊಡ್ಡ ಮೊತ್ತದ ಲಾಭ. ವೈದ್ಯರು, ಎಂಜಿನಿಯರರು, ಮೊದಲಾದವರಿಗೆ ಕೆಲಸದ ಒತ್ತಡ. ಗೃಹಿಣಿಯರ ಆದಾಯ ಹೆಚ್ಚಳ.

ಕನ್ಯಾ: ಸಹೋದ್ಯೋಗಿ ಮಿತ್ರರೊಂದಿಗೆ ಭೇಟಿ. ವ್ಯಾಪಾರ ಕ್ಷೇತ್ರದಲ್ಲಿ ಮಂದಗತಿಯ, ಆದರೆ ಸ್ಥಿರವಾದ ಪ್ರಗತಿ. ವಧೂವರಾನ್ವೇಷಿಗಳಿಗೆ ಶುಭ.  ಹೊಸ ರೀತಿಯ ಉದ್ಯಮದ ಕಲ್ಪನೆಗೆ ಮೂರ್ತರೂಪ. ಗೃಹಿಣಿಯರು ಮತ್ತು ಮಕ್ಕಳಿಗೆ  ಸಂಭ್ರಮದ ದಿನ.

ತುಲಾ: ಹಿರಿಯ ಆತ್ಮೀಯರಿಂದ ಮಾರ್ಗದರ್ಶನ. ದೂರದ ಬಂಧುಗಳ ಕಡೆಯಿಂದ ಶುಭ ಸಮಾಚಾರ. ಪಾಲುದಾರಿಕೆ  ವ್ಯವಹಾರದಲ್ಲಿ ಹಿನ್ನಡೆ. ಬೌದ್ಧಿಕ ಕಾರ್ಯ ಮಾಡುವವರ ಆರೋಗ್ಯದ ಬಗ್ಗೆ ಎಚ್ಚರ.

ವೃಶ್ಚಿಕ: ನೆಮ್ಮದಿಯ ಜೀವನಕ್ಕೆ ಕೊರತೆ ಯಾಗದು. ಮಹಿಳೆಯರಿಗೆ ವಸ್ತ್ರಾಭರಣ ಖರೀದಿಯಲ್ಲಿ ಆಸಕ್ತಿ.  ವ್ಯವಹಾರಸ್ಥರಿಗೆ ನಿರೀಕ್ಷೆ ಮೀರಿದ ಲಾಭ. ಆಧ್ಯಾತ್ಮಿಕ ಸಾಧನೆಯಿಂದ ನೆಮ್ಮದಿ. ಆಸ್ಪತ್ರೆಗೆ ಭೇಟಿಯಿತ್ತು ರೋಗಿಗಳಿಗೆ ಸಾಂತ್ವನ.

ಧನು: ಸಾಂಸಾರಿಕ ಆವಶ್ಯಕತೆಗಳ ಕಡೆಗೆ ಗಮನ.  ಪಾಲುದಾರಿಕೆ ವ್ಯವಹಾರಗಳಲ್ಲಿ ಮಂದಗತಿ. ಉದ್ಯಮಿಗಳಿಗೆ ತಾತ್ಕಾಲಿಕ ವಿರಾಮ. ಸಣ್ಣ ಪ್ರವಾಸದ ಸಾಧ್ಯತೆ. ಸಮಾಜಸೇವಾ ಚಟುವಟಿಕೆಗಳಲ್ಲಿ ಮಗ್ನತೆ. ಹತ್ತಿರದ ದೇವಾಲಯಕ್ಕೆ ಭೇಟಿ.

ಮಕರ: ತಾಳ್ಮೆಯ ವ್ಯವಹಾರದಿಂದ ಕಾರ್ಯ ಸಿದ್ಧಿ. ನಿಗದಿತ ಸಮಯದಲ್ಲಿ ಕಾರ್ಯ ಪೂರ್ತಿಯಾಗಿ ಸಮಾಧಾನ.ಮಕ್ಕಳ ವ್ಯಾಸಂಗದಲ್ಲಿ ಮುನ್ನಡೆ.  ಗೆಳೆಯರ ಸಂತೋಷ ಕೂಟದಲ್ಲಿ ಭಾಗಿ. ಹಳೆಯ ಒಡನಾಡಿಗಳ ಭೇಟಿ.

ಕುಂಭ: ಹೊಸ ಅವಕಾಶಗಳ ಅನ್ವೇಷಣೆ. ಪರಿಸರ ನೈರ್ಮಲ್ಯ ಯೋಜನೆಗಳ ಅನುಷ್ಠಾನದಲ್ಲಿ ವಿಶೇಷ ಆಸಕ್ತಿ. ಸೇವಾಕಾರ್ಯಗಳಿಂದ ಗೌರವ ಪ್ರಾಪ್ತಿ. ಹಿರಿಯರಿಗೆ ಸ್ವಾವಲಂಬಿ ಬದುಕು. ಗೃಹಿಣಿಯರಿಗೆ ಸ್ಯೋದ್ಯೋಗದಲ್ಲಿ ಮುನ್ನಡೆ

ಮೀನ: ಕರ್ಮಕಾರಕನಾದ ಶನಿಯಿಂದ ಸತ್ಕರ್ಮಗಳಿಗೆ ಪ್ರೇರಣೆ.  ಗಳಿಕೆಯ ಮಾರ್ಗಗಳು ಸುಲಭದಲ್ಲಿ ಗೋಚರ. ಇಷ್ಟದೇವತಾರ್ಚನೆಯಿಂದ ಸಮಸ್ಯೆಗಳು ದೂರ. ಸಂಗಾತಿಯಿಂದ ವ್ಯವಹಾರದಲ್ಲಿ ಸಕ್ರಿಯ ಸಹಕಾರ.ಮಕ್ಕಳ ಶೈಕ್ಷಣಿಕ  ಪ್ರಗತಿ ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next