Advertisement

ಉದ್ಯೋಗ ಸ್ಥಾನದಲ್ಲಿ ಸಂತೃಪ್ತಿ. ಆಪ್ತರಿಂದ ಸಕಾಲದಲ್ಲಿ ಸ್ಪಂದನ

07:14 AM May 22, 2024 | Team Udayavani |

ಮೇಷ: ಎಲ್ಲಿದ್ದರೂ ವಿಜೃಂಭಿಸುವುದೇ ಕ್ರಿಯಾಶೀಲತೆಯ ಶ್ರೇಷ್ಠತೆ. ಉದ್ಯೋಗ ಸ್ಥಾನದಲ್ಲಿ ನೆಮ್ಮದಿ. ಉದ್ಯಮದ ಉತ್ಪನ್ನಗಳಿಗೆ ಅಧಿಕ ಗ್ರಾಹಕರು. ಸಕಾಲದಲ್ಲಿ ಅಪೇಕ್ಷಿತ ನೆರವು ಲಭ್ಯ. ಗೃಹಿಣಿಯರ ಸ್ವಾವಲಂಬನೆ ಯೋಜನೆ ಮುನ್ನಡೆ.

Advertisement

ವೃಷಭ: ನಿರುತ್ಸಾಹದ ಮನೋಭಾವ. ಒಂದೇ ಉದ್ಯಮದ ಮೇಲೆ ಗಮನ ಹರಿಸಿ ದರೆ ಜಯ. ಹೊಸ ಗ್ರಾಹಕರನ್ನು ಸೆಳೆಯಲು ಪ್ರಯತ್ನ. ಲೇವಾದೇವಿ ವ್ಯವಹಾರದಲ್ಲಿ ಹಿನ್ನಡೆ. ಮನೆಯಲ್ಲಿ ಎಲ್ಲರಿಗೂ ಆರೋಗ್ಯ ವೃದ್ಧಿ , ನೆಮ್ಮದಿ.

ಮಿಥುನ: ಬಾಹ್ಯ ವಾತಾವರಣದ ಪ್ರಭಾವ ನಿಮ್ಮ ಮೇಲಾಗದು. ಉದ್ಯೋಗ ಸ್ಥಾನದಲ್ಲಿ ಸಕ್ರಿಯರಾಗಿರಲು ಹೇರಳ ಅವಕಾಶಗಳು. ಗೃಹೋದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಕೃಷಿ ಕ್ಷೇತ್ರದಲ್ಲಿ ಮುಂದುವರಿದ ಪ್ರಯೋಗಗಳು.

ಕರ್ಕಾಟಕ: ಭಾರೀ ಲವಲವಿಕೆಯಲ್ಲಿ ದಿನಾರಂಭ. ಸಹೋದ್ಯೋಗಿಗಳೊಂದಿಗೆ ಸೌಹಾರ್ದಪೂರ್ಣ ನಡವಳಿಕೆ. ಸ್ವಂತ ಉದ್ಯಮ ವಿಸ್ತರಣೆ ಆರಂಭ. ಪಾದರಕ್ಷೆ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಮಕ್ಕಳಿಗೆ ಸಂಭ್ರಮ.

ಸಿಂಹ: ಹೆಚ್ಚು ಕಡಿಮೆ ಮಿಶ್ರಫ‌ಲಗಳನ್ನು ಕಾಣುವಿರಿ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಸರಕಾರಿ ಅಧಿಕಾರಿಗಳಿಗೆ ಕರ್ತವ್ಯದ ಹೊರೆ. ಭೂ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ. ನ್ಯಾಯಾಲಯ ವ್ಯವಹಾರದಲ್ಲಿ ಜಯ.

Advertisement

ಕನ್ಯಾ: ಸ್ಥಿರ ಉದ್ಯೋಗ ಹೊಂದುವ ಪ್ರಯತ್ನ ಸಫ‌ಲ. ಮೇಲಧಿಕಾರಿಗಳ ಸಹಾನುಭೂತಿ. ಸಾರ್ವಜನಿಕ ಸಂಪರ್ಕದಲ್ಲಿ ಅಪಾರ ಯಶಸ್ಸು. ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆಗಿಂತ ಅಧಿಕ ಲಾಭ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ.

ತುಲಾ: ಪೂರ್ಣ ದೈವಾನುಗ್ರಹದ ದಿನ. ಉದ್ಯೋಗ ಸ್ಥಾನದಲ್ಲಿ ಪ್ರತಿಭೆಗೆ ತಕ್ಕ ಗೌರವ. ಸರಕಾರಿ ನೌಕರರಿಗೆ ಅಧಿಕ ಕೆಲಸದ ಹೊರೆ. ಸಣ್ಣ ವ್ಯಾಪಾರಿಗಳಿಗೆ ನಿರೀಕ್ಷೆಗೆ ತಕ್ಕ ಲಾಭ. ಕೃಷ್ಯುತ್ಪನ್ನಗಳ ಮಾರಾಟದಿಂದ ಸಾಕಷ್ಟು ಲಾಭ.

ವೃಶ್ಚಿಕ: ಕರ್ಮದ ಫ‌ಲವನ್ನು ಸಂತೋಷದಿಂದ ಸ್ವೀಕರಿಸಿ. ಪ್ರಾಪಂಚಿಕ ಸುಖದಲ್ಲಿ ಕೊರತೆ ಇಲ್ಲ. ಉದ್ಯೋಗದಲ್ಲಿ ಆನಂದ. ಉದ್ಯಮದ ನೌಕರರ ಪೂರ್ಣ ಸಹಕಾರ. ನ್ಯಾಯಾಲಯದಲ್ಲಿ ಜಯ. ಮನೆಯಲ್ಲಿ ಸಮಾಧಾನದ ವಾತಾವರಣ.

ಧನು: ಅಲ್ಪಾವಧಿಯಲ್ಲಿ ದೊಡ್ಡ ಲಾಭ ಅಸಾಧ್ಯ. ಸಣ್ಣ ಉಳಿತಾಯ ಯೋಜನೆಯಲ್ಲಿ ಲಾಭ.ಉದ್ಯಮ ಕ್ಷೇತ್ರದಲ್ಲಿ ಪೈಪೋಟಿ. ಸರಕಾರಿ ಕಚೇರಿಗಳಲ್ಲಿ ಸಕಾರಾತ್ಮಕ ಸ್ಪಂದನ. ಕೃಷ್ಯುತ್ಪಾದನೆ ಮಾರಾಟದಲ್ಲಿ ಲಾಭ. ಸಂಸಾರದಲ್ಲಿ ಸಾಮರಸ್ಯ.

ಮಕರ: ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶ. ಹೊಸ ಉದ್ಯೋಗ ಅನ್ವೇಷಣೆ ಮುಂದುವರಿಕೆ. ಹಿರಿಯರ ಆವಶ್ಯಕತೆ ಗಳನ್ನು ಗಮನಿಸಿ.ದೇವತಾರ್ಚನೆಯಲ್ಲಿ ಆಸಕ್ತಿ. ಸಂಗೀತ ಶ್ರವಣದಿಂದ ಮನಸ್ಸಿಗೆ ನೆಮ್ಮದಿ.

ಕುಂಭ: ಸಂತೃಪ್ತ ಮನೋಭಾವದಲ್ಲಿ ದಿನಾರಂಭ ಉದ್ಯಮದಲ್ಲಿ ಪ್ರಚಂಡ ಮುನ್ನಡೆ. ಉದ್ಯೋಗ ಕ್ಷೇತ್ರದಲ್ಲಿ ಗುರುಸ್ಥಾನ ಭದ್ರ. ಮುದ್ರಣ ಸಾಮಗ್ರಿ, ಸ್ಟೇಶನರಿ, ವಸ್ತ್ರ , ಆಭರಣ, ಯಂತ್ರೋಪಕರಣಗಳು, ವಿದ್ಯುತ್‌ ಉಪಕರಣಗಳು, ಮೊದಲಾದ ಸಾಮಗ್ರಿಗಳಿಗೆ ಅಧಿಕ ಬೇಡಿಕೆ

ಮೀನ: ವ್ಯವಹಾರಗಳಲ್ಲಿ ಸ್ಥಿರವಾದ ಪ್ರಗತಿ. ಉದ್ಯೋಗ ಸ್ಥಾನದಲ್ಲಿ ಸಂತೃಪ್ತಿ. ಆಪ್ತರಿಂದ ಸಕಾಲದಲ್ಲಿ ಸ್ಪಂದನ. ಸರಕಾರಿ ಅಧಿಕಾರಿಗಳು ಮತ್ತು ನೌಕರರಿಂದ ಸಹಕಾರ. ಸೇವಾ ಮಾದರಿಯ ಉದ್ಯೋಗಸ್ಥರಿಗೆ ಅಧಿಕ ಯಶಸ್ಸು. ಮನೆಯಲ್ಲಿ ಸಂಪೂರ್ಣ ನೆಮ್ಮದಿ.

Advertisement

Udayavani is now on Telegram. Click here to join our channel and stay updated with the latest news.

Next