Advertisement

Daily Horoscope; ಬೇರೆಯವರು ಮಾಡಿದ ತಪ್ಪಿಗೆ ನಿಮ್ಮನ್ನು ಹೊಣೆ ಮಾಡದಂತೆ ಎಚ್ಚರ…

12:09 AM Jul 23, 2024 | Team Udayavani |

ಮೇಷ: ಪೂರ್ವಾಹ್ನ ತಿರುಗಾಟದ ಸಾಧ್ಯತೆ. ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲದ ಭರವಸೆ. ಉದ್ಯೋಗ, ಉದ್ಯಮಗಳಲ್ಲಿ ಯಶಸ್ಸು. ಆಪ್ತರಿಂದ ಅಯಾಚಿತ ನೆರವು ಲಭ್ಯ. ಗೃಹಿಣಿಯರ ಆರೋಗ್ಯದ ಕಡೆಗೆ ಗಮನ ಇರಲಿ. ಅತಿಥಿ ಸತ್ಕಾರ ಯೋಗ.

Advertisement

ವೃಷಭ: ತಕ್ಕಮಟ್ಟಿಗೆ ನೆಮ್ಮದಿಯ ದಿನ. ಉದ್ಯೋಗದಲ್ಲಿ ಹೆಚ್ಚು ಸಂತೃಪ್ತಿ. ಸರಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಕೆಲಸದ ಒತ್ತಡ. ಉದ್ಯಮಗಳಲ್ಲಿ ಉತ್ಪಾದನೆ ಹೆಚ್ಚಳ. ಹತ್ತಿರದ ದೇವತಾ ಸಾನ್ನಿಧ್ಯಕ್ಕೆ ಭೇಟಿ.

ಮಿಥುನ: ಬೇರೆಯವರು ಮಾಡಿದ ತಪ್ಪಿಗೆ ನಿಮ್ಮನ್ನು ಹೊಣೆ ಮಾಡದಂತೆ ಎಚ್ಚರ. ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ. ಉದ್ಯಮದಲ್ಲಿ ಪ್ರಗತಿ ತೃಪ್ತಿಕರ. ವ್ಯವಹಾರ ನಿಮಿತ್ತ ಸಣ್ಣ ಪ್ರಯಾಣದ ಸಾಧ್ಯತೆ.

ಕರ್ಕಾಟಕ: ಉದ್ಯೋಗ ಸ್ಥಾನದಲ್ಲಿ ಯಥಾ ಸ್ಥಿತಿ. ಉದ್ಯಮದ ಉತ್ಪಾದನೆಗಳಲ್ಲಿ ವೈವಿಧ್ಯ ಕಾಯ್ದು ಕೊಳ್ಳುವ ಪ್ರಯತ್ನ. ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳ ವ್ಯಾಪಾರ ವೃದ್ಧಿ. ಅಲ್ಪಾವಧಿ ಹೂಡಿಕೆ ಬೇಡ.

ಸಿಂಹ: ಉದ್ಯೋಗಸ್ಥರಿಗೆ ಉತ್ತೇಜನದ ಕ್ರಮ ಗಳು. ಹೊಸ ಪರಿಚಯಸ್ಥರ ಸಹಾಯದಿಂದ ವ್ಯಾಪಾರ ವೃದ್ಧಿ. ಕಟ್ಟಡ ನಿರ್ಮಾಣ ಕಾಮಗಾರಿ ತ್ವರಿತ ಗತಿಯಲ್ಲಿ. ನೂತನ ವಾಹನ ಖರೀದಿಗೆ ಸಿದ್ಧತೆ. ಮನೆಯಲ್ಲಿ ಮಂಗಲ ಕಾರ್ಯ ಸನ್ನಿಹಿತ.

Advertisement

ಕನ್ಯಾ: ಮನೆಯಲ್ಲಿ ಶಾಂತಿ, ಸಮಾಧಾನದ ಕ್ಷಣಗಳು. ಆತ್ಮೀಯರ ಭೇಟಿಯಿಂದ ಹರ್ಷ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಉದ್ಯೋ ಗಾಸಕ್ತ ರಿಗೆ ಆಶಾದಾಯಕ ಅವಕಾಶಗಳು. ಕೃಷಿ ಕ್ಷೇತ್ರದಲ್ಲಿ ಒಳ್ಳೆಯ ಪ್ರತಿಫ‌ಲ.

ತುಲಾ: ಎಲ್ಲ ಸಮಸ್ಯೆಗಳಿಗೂ ಸೂಕ್ತ ಪರಿ ಹಾರ. ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಸ್ಥಾನಮಾನ. ಅಕಸ್ಮಾತ್‌ ಧನಾಗಮ. ಗೃಹಾಲಂಕಾರಕ್ಕೆ ಧನವ್ಯಯ. ಕುಶಲಕರ್ಮಿಗಳ ಕೃತಿಗಳಿಗೆ ಉತ್ತಮ ಬೇಡಿಕೆ. ಸಂಗೀತ, ಭಜನೆ ಶ್ರವಣದಿಂದ ಸಮಾಧಾನ.

ವೃಶ್ಚಿಕ: ನ್ಯಾಯಾಲಯದಲ್ಲಿ ಜಯ. ಉದ್ಯೋಗ ಸ್ಥಾನದಲ್ಲಿ ಹಿರಿತನಕ್ಕೆ ಗೌರವ. ಉದ್ಯಮದ ವ್ಯಾಪ್ತಿ ಇನ್ನಷ್ಟು ವಿಸ್ತರಣೆ. ಉತ್ಪನ್ನಗಳ ಗುಣಮಟ್ಟಕ್ಕೆ ಜನರಿಂದ ಶ್ಲಾಘನೆ. ಗೃಹಿಣಿಯರ ಸ್ವಾವಲಂಬನೆ ಯೋಜನೆ ಉನ್ನತ ಸ್ಥಿತಿಯಲ್ಲಿ.

ಧನು: ಆವಶ್ಯಕತೆಗೆ ತಕ್ಕಂತೆ ಒದಗಿ ಬರುವ ಸಹಾಯ. ಉದ್ಯೋಗ ಸ್ಥಾನದಲ್ಲಿ ಸದಭಿ ಪ್ರಾಯಕ್ಕೆ ಪಾತ್ರರಾಗುವಿರಿ. ಸಣ್ಣ ಪ್ರಮಾಣದ ಉದ್ಯಮಗಳ ಅಭಿವೃದ್ಧಿ. ಹೈನುಗಾರಿಕೆ, ಜೇನು ವ್ಯವ ಸಾಯ ದಲ್ಲಿ ಆಸಕ್ತಿ. ಬಾಳ ಸಂಗಾತಿಯ ಆರೋಗ್ಯ ಸುಧಾರಣೆ.

ಮಕರ: ಉದ್ಯೋಗ ಸ್ಥಾನದಲ್ಲಿ ಗೌರವ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ನಿವೇಶನ ಖರೀದಿ-ಮಾರಾಟ ವ್ಯವಹಾರಸ್ಥರಿಗೆ ಲಾಭ. ಕೃಷ್ಯುತ್ಪನ್ನಗಳಿಗೆ ಒಳ್ಳೆಯ ಬೇಡಿಕೆ. ಹಣ್ಣು, ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ.

ಕುಂಭ: ಲಾಭದಾಯಕ ಯೋಜನೆಗಳಲ್ಲಿ ಹೂಡಿಕೆ. ಉದ್ಯಮದಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ದೂರದಲ್ಲಿರುವ ಬಂಧುಗಳ ಭೇಟಿ. ಸೇವಾಕಾರ್ಯಗಳಲ್ಲಿ ಕೈಜೋಡಿಸಲು ಮನೆ ಮಂದಿಯ ಸಹಕಾರ. ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ.

ಮೀನ: ಹಲವು ಶುಭಫ‌ಲಗಳ ದಿನ. ಉದ್ಯೋಗ ಸ್ಥಾನದಲ್ಲಿ ಕೀರ್ತಿ. ಸರಕಾರಿ ಕಚೇರಿಗಳಲ್ಲಿ ಅನುಕೂಲಕರ ಸ್ಪಂದನ. ಅಪರಿಚಿತ ವ್ಯಕ್ತಿಗಳಿಂದ ಅನಿರೀಕ್ಷಿತ ಸಹಾಯ. ವ್ಯವಹಾರ ಸಂಬಂಧ ರಾಜಕಾರಣಿಯ ಭೇಟಿ.

Advertisement

Udayavani is now on Telegram. Click here to join our channel and stay updated with the latest news.

Next