Advertisement

Daily Horoscope; ಹೇಗಿದೆ ನೋಡಿ ನಿಮ್ಮ ಇಂದಿನ ರಾಶಿಫಲ

07:21 AM Jul 06, 2024 | Team Udayavani |

06-07-2024

Advertisement

ಮೇಷ: ಉದ್ಯೋಗದಲ್ಲಿ ಆನಂದ, ಸಂತೃಪ್ತಿ ಹೆಚ್ಚಿನ ಉದ್ಯಮಿಗಳಿಗೆ ನಿರೀಕ್ಷೆಗಿಂತ ಅಧಿಕ ಲಾಭ. ವ್ಯವಹಾರ ವಿಸ್ತರಣೆಯಿಂದ ಅನುಕೂಲ. ಶೇರು ಮಾರುಕಟ್ಟೆಯಲ್ಲಿ ಉತ್ತಮ ಲಾಭ. ಸಣ್ಣ ಪ್ರಯಾಣದ ಸಾಧ್ಯತೆ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವೃದ್ಧಿ.

ವೃಷಭ: ಉದ್ಯೋಗಸ್ಥರಿಗೆ ಶೀಘ್ರ ಕಾರ್ಯ ಮುಗಿಸಲು ಒತ್ತಡ. ವಸ್ತ್ರ, ಸಿದ್ಧ ಉಡುಪುಗಳು ಹಾಗೂ ಪಾದರಕ್ಷೆ ವ್ಯಾಪಾರಿಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಲಾಭ. ವ್ಯವಹಾರಾರ್ಥ ಸಣ್ಣ ಪ್ರಯಾಣದ ಸಾಧ್ಯತೆ.

ಮಿಥುನ: ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಹಾಗೂ ಪ್ರತಿಫಲ. ನ್ಯಾಯಾಲಯ ವ್ಯವಹಾರದಲ್ಲಿ ಜಯ. ಉತ್ಪನ್ನಗಳ ಗುಣಮಟ್ಟ ಸುಧಾರಣೆಗೆ ಗಮನ ಅವಶ್ಯ. ಕಮಿಶನ್‌ ಏಜೆಂಟರಿಗೆ, ಲೈನ್‌ ಸೇಲ್ಸ್ ಮಾಡುವವರಿಗೆ ಲಾಭ.

ಕರ್ಕಾಟಕ: ಉದ್ಯೋಗದಲ್ಲಿ ಹೊಸ ವಿಭಾಗದ ಜವಾಬ್ದಾರಿ.ಮಾಲಿಕರು ಮತ್ತು ನೌಕರರ ನಡುವೆ ಉತ್ತಮ ಸಹಕಾರ. ವಸ್ತ್ರ,, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಲಾಭ. ಪ್ರಾಪ್ತ ವಯಸ್ಕರಿಗೆ ಶೀಘ್ರ ವಿವಾಹ. ವ್ಯವಹಾರದ ಸಂಬಂಧ ಪ್ರಯಾಣ ಯೋಜನೆಗೆ ಅಡ್ಡಿ.

Advertisement

ಸಿಂಹ: ಎಲ್ಲ ವಿಭಾಗಗಳಲ್ಲೂ ಯಶಸ್ಸು ಪ್ರಾಪ್ತಿ. ಸರಕಾರಿ ನೌಕರರಿಗೆ ಆತಂಕದ ಭಾವ. ಸ್ವ ಉದ್ಯೋಗಿ ಮಹಿಳೆಯರಿಗೆ ಸರ್ವವಿಧದಲ್ಲೂ ಯಶಸ್ಸು. ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ.

ಕನ್ಯಾ: ಎಲ್ಲ ನಿಯೋಜಿತ ಕಾರ್ಯಗಳು ಸಕಾಲದಲ್ಲಿ ಮುಕ್ತಾಯ. ಉದ್ಯೋಗದಲ್ಲಿ ನಿಯತ್ತಿನ ದುಡಿಮೆಗೆ ಗೌರವ. ಸರಕಾರಿ ಅಧಿಕಾರಿಗಳಿಗೆ ಅಧಿಕ ಕೆಲಸದ ಹೊರೆ. ಉದ್ಯೋಗ ಅರಸುವವರಿಗೆ ಅವಕಾಶಗಳು ಗೋಚರ.

ತುಲಾ: ಅನಾಯಾಸವಾಗಿ ಉದ್ಯೋಗ ನಿರ್ವಹಣೆ. ಸಣ್ಣ ಉದ್ಯಮ ಘಟಕಗಳಿಗೆ ಏಳಿಗೆಯ ಕಾಲ. ವಿವಾಹಾಸಕ್ತರಿಗೆ ಯೋಗ್ಯ ಬಾಳ ಸಂಗಾತಿ ಲಭಿಸುವ ಯೋಗ. ಹಿರಿಯರ, ಮಹಿಳೆಯರ, ಮಕ್ಕಳ ಆರೋಗ್ಯ ಉತ್ತಮ.

ವೃಶ್ಚಿಕ: ನೀವೇ ಹೆಚ್ಚು ಭಾಗ್ಯವಂತರೆಂಬ ಸಮಾಧಾನವಿರಲಿ. ವೈಯಕ್ತಿಕ ಬದುಕಿನಲ್ಲಿ ಸಂಪೂರ್ಣ ಸಂತೃಪ್ತಿ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಯಶಸ್ಸು. ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ.

ಧನು: ಉದ್ಯೋಗ ಸ್ಥಾನದಲ್ಲಿ ಕಾರ್ಯಗಳು ನಿರ್ವಿಘ್ನವಾಗಿ ಮುಂದುವರಿಕೆ. ಕೃಷಿ ಕ್ಷೇತ್ರದಲ್ಲಿ ಸಾಧಾರಣ ಲಾಭ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಯಥೇತ್ಛ ಆದಾಯ ಉತ್ತರದಲ್ಲಿರುವ ಆಪ್ತಮಿತ್ರನಿಂದ ವಿಶೇಷ ಸಮಾಚಾರ.

ಮಕರ: ಉದ್ಯೋಗ ಸ್ಥಾನದಲ್ಲಿ ತರಾತುರಿ. ಕಟ್ಟಡ ನಿರ್ಮಾಪಕರಿಗೆ ಕೊನೆಯ ಹಂತದ ಕಾರ್ಯ ಮುಗಿಸುವ ಒತ್ತಡ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ ವ್ಯಾಪಾರಿಗಳಿಗೆ ಅಧಿಕ ಲಾಭ. .ಅರ್ಹರಿಗೆ ಸಹಾಯ ಮಾಡುವ ಅವಕಾಶ.

ಕುಂಭ: ಶೀಘ್ರ ಕಾರ್ಯ ಮುಗಿಸಲು ಅನುಕೂಲದ ವಾತಾವರಣ. ಉದ್ಯಮದ ಉತ್ಪನ್ನಗಳಿಗೆ ಎಲ್ಲೆಡೆಗಳಿಂದ ಬೇಡಿಕೆ. ಯಂತ್ರೋಪಕರಣ ಮತ್ತು ವಾಹನ ಬಿಡಿಭಾಗಗಳ ವ್ಯಾಪಾರಿಗಳಿಗೆ ಲಾಭ.

ಮೀನ: ದೇವರ ದಯದಿಂದ ಎಲ್ಲ ಕಾರ್ಯಗಳು ಅನಾಯಾಸವಾಗಿ ಮುಂದುವರಿಕೆ. ಕಾರ್ಯಕ್ಷೇತ್ರ ಇನ್ನಷ್ಟು ವಿಸ್ತರಣೆ. ಸರಕಾರಿ ಕಾರ್ಯಾಲಯಗಳಲ್ಲಿ ಹಿತಾನುಭವ. ಸಮಯಕ್ಕೆ ಸರಿಯಾದ ಸೇವೆಯಿಂದ ಗ್ರಾಹಕರಿಗೆ ಹರ್ಷ. ಪೂರಕ ವೃತ್ತಿಯ ಆಯ್ಕೆ ಮುಂದೂಡಿಕೆ.

ಜಯತೀರ್ಥ ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next