Advertisement

ಈ ರಾಶಿಯವರಿಗೆ ಅನಿರೀಕ್ಷಿತ ರೀತಿಯಲ್ಲಿ ನಿರೀಕ್ಷಿತ ಕೆಲಸ ಕಾರ್ಯಗಳು ಕೈಗೂಡಲಿದೆ: ದಿನಭವಿಷ್ಯ

07:31 AM Apr 05, 2021 | Team Udayavani |

ಮೇಷ: ಅನಿರೀಕ್ಷಿತ ರೀತಿಯಲ್ಲಿ ನಿರೀಕ್ಷಿತ ಕೆಲಸ ಕಾರ್ಯಗಳು ಕೈಗೂಡಲಿದೆ. ಮುನ್ನಡೆಯಿರಿ. ಸಂಶಯಬೇಡ. ಪ್ರಯತ್ನಶೀಲತೆ, ಪ್ರಾಮಾಣಿಕತೆ ಹಾಗೂ ಶ್ರಮದಿಂದ ಕಾರ್ಯಕ್ಷೇತ್ರದಲ್ಲಿ ಮುನ್ನಡೆಯಿರಿ. ಫ‌ಲ ಖಂಡಿತ ಇದೆ

Advertisement

ವೃಷಭ: ದೈವಾನುಗ್ರಹದಿಂದ ನಿಮ್ಮ ಮನೋಕಾಮನೆಗಳು ಅಚ್ಚರಿಯ ರೀತಿಯಲ್ಲಿ ಕಾರ್ಯಸಾಧನೆಯಾಗಲಿದೆ. ಮುಖ್ಯವಾಗಿ ನಾನಾ ರೀತಿಯಲ್ಲಿ ಧನಾಗಮನದಿಂದ ಆರ್ಥಿಕವಾಗಿ ಅಭಿವೃದ್ಧಿ ತೋರಿಬಂದು ಸಂತಸವಾಗಲಿದೆ.

ಮಿಥುನ: ನಾವು ಎಣಿಸಿದ ರೀತಿಯಲ್ಲಿ ಧನಾಗಮನವಿದ್ದು ಆರ್ಥಿಕವಾಗಿ ಅಭಿವೃದ್ಧಿ ತೋರಿಬಂದು ಭೂಲಾಭ,  ವಾಹನ ಖರೀದಿ ಇರುತ್ತದೆ. ಸಾಂಸಾರಿಕವಾಗಿ ನೆಮ್ಮದಿ ಇಲ್ಲವಾದರೂ ತಾಳ್ಮೆ ಸಮಾಧಾನದಿಂದ ಮಾನಸಿಕ ಸ್ಥಿತಿ ಕಾಪಾಡಿರಿ.

ಕರ್ಕ: ನಿರುದ್ಯೋಗಿಗಳಿಗೆ ಉದ್ಯೋಗ ಲಾಭ ತಂದು ಕೊಡಲಿದೆ. ಕೆಟ್ಟ ಕೆಲಸಗಳ ಬಗ್ಗೆ ಪ್ರಚೋದಿತರಾಗದಿರಿ. ಕಮಿಶನ್‌ ವ್ಯಾಪಾರಿಗಳಿಗೆ ಅಧಿಕ ರೂಪದಲ್ಲಿ ಲಾಭಾಂಶ ತಂದು ಕೊಡಲಿದೆ. ವೃತ್ತಿರಂಗದಲ್ಲಿ ಯಾವುದೇ ನಿರ್ಣಯ ಕೈಗೊಳ್ಳದಿರಿ.

ಸಿಂಹ: ಸಾಮಾಜಿಕ ಕಾರ್ಯದಲ್ಲಿ ಅಪಮಾನ, ಅಪವಾದ ಭೀತಿಯನ್ನು ಅನುಭವಿಸುವಂತಾದೀತು. ಯೋಗ್ಯ ವಯಸ್ಕರಿಗೆ ಸಂಗಾತಿಯ ಬಗ್ಗೆ ಹೆಚ್ಚಿನ ಪ್ರಯತ್ನ ಬಲ ಹಾಗೂ ಹುಡುಕಾಟ ತೋರಿ ಬರಲಿದೆ. ಮುಂದುವರಿಯಿರಿ.

Advertisement

ಕನ್ಯಾ: ವ್ಯಾಪಾರಿಗಳಿಗೆ ಅಧಿಕ ರೀತಿಯಲ್ಲಿ ಲಾಭಾಂಶ ತಂದು ಕೊಡಲಿದೆ. ದಾಯಾದಿಗಳಿಂದ ಶತ್ರುತ್ವ ಏರ್ಪಡುವ ಸಂಭವವಿರುತ್ತದೆ. ಪತ್ನಿಗೆ ಸುಖ, ಸಂತೋಷ ಸಮಾಧಾನವಿರುತ್ತದೆ. ಸೂಕ್ತ ಸಲಹೆಗಳಿಗೆ ಸ್ಪಂದಿಸಿರಿ.

ತುಲಾ: ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ಹಿನ್ನಡೆ ಕಂಡು ಬಂದೀತು. ಧಾರ್ಮಿಕ ಕಾರ್ಯಗಳಲ್ಲಿ ನಿರಾಸಕ್ತಿ ಕಂಡು ಬಂದೀತು. ನಿಮ್ಮ ಸಾಂಸಾರಿಕ ಹಾಗೂ ಆರ್ಥಿಕ ಕ್ಷೇತ್ರದ ಸಮಸ್ಯೆಗಳು ಪರಿಹಾರವಾಗಲಿದೆ.

ವೃಶ್ಚಿಕ: ಮೀನುಗಾರ ವೃತ್ತಿಯವರಿಗೆ ಲಾಭಾಂಶ ಹೆಚ್ಚು ಕಂಡು ಬಂದೀತು. ಶತ್ರುಗಳು ಕಾಲೆಳೆದು ಜಗಳಕ್ಕೆ ಬಂದಾರು. ಪ್ರತ್ಯುತ್ತರಿಸದಿರಿ. ದಾಂಪತ್ಯದಲ್ಲಿ ಸಂತಾನ ಭಾಗ್ಯದ ಕುರುಹು, ವೃತ್ತಿಯಲ್ಲಿ ಅಭಿವೃದ್ಧಿ ಇದೆ.

ಧನು: ಕಾರ್ಯಕ್ಷೇತ್ರದಲ್ಲಿ ಅಧಿಕಾರಿ ಸ್ಥಾನಮಾನ ದೊರಕಲಿದೆ. ತಂದೆ ಮಕ್ಕಳೊಳಗೆ ಭಿನ್ನಾಭಿಪ್ರಾಯ ಕಂಡು ಬರಲಿದೆ. ಮನೆಯಲ್ಲಿ ಗೃಹಿಣಿಯ ಆಸೆ ಆಕಾಂಕ್ಷೆ ಪೂರೈಸಲಿದೆ. ಸಮಾಧಾನ ಶಾಂತಿ ಲಭಿಸಲಿದೆ.

ಮಕರ: ಅನಾವಶ್ಯಕವಾಗಿ ಉದ್ವೇಗಕ್ಕೆ ಒಳಗಾಗದಿರಿ. ಮಾನಸಿಕವಾಗಿ ದುರ್ಬಲರಾಗದಿರಿ. ಅತೀಯಾದ ವಿಶ್ವಾಸ ಯಾರ ಮೇಲೂ ಮಾಡದಿರಿ. ನಿಮಗೆ ಅಭಿವೃದ್ಧಿಯು ಹಂತಹಂತವಾಗಿ ಗೋಚರಿಸಲಿದೆ.

ಕುಂಭ: ಸಾಂಸಾರಿಕವಾಗಿ ಮಕ್ಕಳು, ಪತ್ನಿಯಿಂದ ಸುಖ, ಸಂತೋಷ ದೊರಕಲಿದೆ. ಯೋಗ್ಯ ವಯಸ್ಕರಿಗೆ ಪ್ರಯತ್ನ ಫ‌ಲದಿಂದ ಕಂಕಣಬಲ ಕೂಡಿಬರಲಿದೆ. ಬಂದ ಅವಕಾಶವನ್ನು ಸದುಪಯೋಗಿಸಿಕೊಳ್ಳಿರಿ.

ಮೀನ: ಆರ್ಥಿಕವಾAಗಿ ಸ್ಥಿರತೆ ಇಲ್ಲವಾದರೂ ಸುಧಾರಿಸಿ ಕೊಂಡು ಹೋಗಬಹುದಾಗಿದೆ. ವ್ಯಾಪಾರ, ವ್ಯವಹಾರಸ್ಥರಿಗೆ ಲಾಭಾಂಶವಿರುತ್ತದೆ. ಆದರೂ ಖರ್ಚು ವೆಚ್ಚಗಳಲ್ಲಿ ಮಿತಿ ಇದ್ದರೆ ಉತ್ತಮ. ಕೋರ್ಟು ಕಾರ್ಯದಲ್ಲಿ ಮುನ್ನಡೆ.

Advertisement

Udayavani is now on Telegram. Click here to join our channel and stay updated with the latest news.

Next