Advertisement

Daily Horoscope;ವಧೂವರಾನ್ವೇಷಿಗಳಿಗೆ ಶುಭ ಸೂಚನೆ, ಕಾರ್ಯಗಳು ಶೀಘ್ರ ಮುಕ್ತಾಯ

07:44 AM Dec 11, 2024 | Team Udayavani |

ಮೇಷ: ಗಾತ್ರದಲ್ಲಿ ಹೆಚ್ಚಾಗುತ್ತಿರುವ ಕೆಲಸ ಕಾರ್ಯಗಳು. ಹೊಟೇಲ್‌ ಉದ್ಯಮಿಗಳಿಗೆ ಆದಾಯ ವೃದ್ಧಿ. ದೂರ ದೇಶದಲ್ಲಿರುವ ಬಂಧು ಗಳಿಂದ ವಿಶೇಷ ಸಮಾಚಾರ. ಮಹಿಳಾ ಉದ್ಯಮಿ ಗಳಿಗೆ ಯಶಸ್ಸು. ವಾಹನ ಚಾಲನೆಯಲ್ಲಿ ಎಚ್ಚರ ಇರಲಿ.

Advertisement

ವೃಷಭ: ಪ್ರತಿಭೆ ಹಾಗೂ ಸಾಮರ್ಥ್ಯ ವೃದ್ಧಿಗೆ ಅವಕಾಶ. ಖಾದಿಯ ಉಡುಪುಗಳು ಹಾಗೂ ವಸ್ತ್ರ ವ್ಯಾಪಾರಿಗಳಿಗೆ ಲಾಭ. ಶಿಕ್ಷಿತ ವೃತ್ತಿ ಪರಿಣತರಿಗೆ ಉದ್ಯೋಗಾವಕಾಶ.ವಾಹನ ಸಂಬಂಧಿ ವ್ಯವಹಾರಸ್ಥರಿಗೆ ಅನುಕೂಲ. ಅಲ್ಪಕಾಲದ ಹೂಡಿಕೆ ಬೇಡ.

ಮಿಥುನ: ವಿಳಂಬ ಧೋರಣೆಯಿಂದ ಪ್ರತಿಕೂಲ ಪರಿಣಾಮ. ಉದ್ಯೋಗಸ್ಥರಲ್ಲಿ ಕೆಲವರಿಗೆ ಅತಂತ್ರ ಸ್ಥಿತಿ. ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ. ಯುವಜನರಿಗೆ ಧಾರ್ಮಿಕ ಮಾರ್ಗದರ್ಶನದ ನೇತೃತ್ವ.

ಕರ್ಕಾಟಕ: ಉದ್ಯೋಗಸ್ಥರಿಗೆ ಹೊಸ ಸೌಲಭ್ಯಗಳು. ಉದ್ಯಮಗಳಿಗೆ ಸರಕಾರಿ ಸಬ್ಸಿಡಿ ವಿಳಂಬ. ಸರಕಾರಿ ವ್ಯವಸ್ಥೆಗಳ ಸುಧಾರಣೆಗೆ ರಾಜಕಾರಣಿಗಳ ನಿರ್ಲಕ್ಷ್ಯ. ಮಹಿಳೆಯರ ಸ್ವೋದ್ಯೋಗ ಯೋಜನೆ ಉತ್ಪನ್ನಗಳಿಗೆ ಕೀರ್ತಿ.

ಸಿಂಹ: ಏಕಕಾಲದಲ್ಲಿ ಹಲವು ವ್ಯವಹಾರಗಳು. ಉದ್ಯೋಗಸ್ಥರಿಗೆ ಘಟಕದ ನೇತೃತ್ವ ಲಭ್ಯ.ಉದ್ಯಮಕ್ಕೆ ಹೊಸ ರೂಪ ನೀಡುವ ಪ್ರಯತ್ನ. ವ್ರತಾಚರಣೆಯಿಂದ ನೆಮ್ಮದಿ. ಎಲ್ಲರಿಗೂ ಉತ್ತಮ ಆರೋಗ್ಯ.

Advertisement

ಕನ್ಯಾ: ಹೊಸ ಕಾರ್ಯಕ್ಷೇತ್ರದ ಅಭಿವೃದ್ಧಿಗೆ ಪರಿಶ್ರಮ. ಸರಕಾರಿ ಅಧಿಕಾರಿಗಳಿಗೆ ತಿರುಗಾಟ. ಕೃಷಿ, ತೋಟಗಾರಿಕೆ ಆಸಕ್ತರಿಗೆ ಶುಭದಿನ. ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ.ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ.

ತುಲಾ: ವಿಕ್ಷಿಪ್ತ ಚಿತ್ತರ ಸಹವಾಸದಿಂದ ಬೇಸರ. ಉದ್ಯಮಿಗಳಿಗೆ ಎದುರಾಳಿಗಳಿಂದ ಮಾಮೂಲು ಪೈಪೋಟಿ. ಉದ್ಯೋಗಕ್ಕಾಗಿ ಕಾಯು ತ್ತಿರುವವರಿಗೆ ಶುಭ ಸೂಚನೆ. ಕುಶಲಕಲೆಗಳಲ್ಲಿ ಆಸಕ್ತಿಯಿಂದ ಸಂತೃಪ್ತಿ.

ವೃಶ್ಚಿಕ: ದಿನದಿಂದ ದಿನಕ್ಕೆ ಬದಲಾಗುವ ಪರಿಸ್ಥಿತಿ. ಉದ್ಯೋಗಸ್ಥರ ಸ್ಥಾನ ಗೌರವಕ್ಕೆ ಹಾನಿಯಿಲ್ಲ. ಸರಕಾರಿ ಅಧಿಕಾರಿಗಳಿಗೆ ವರ್ಗಾವಣೆಯ ಆತಂಕ. ಭ್ರಷ್ಟ ರಾಜಕಾರಣಿಗಳಿಗೆ ಇಕ್ಕಟ್ಟಿನ ಪರಿಸ್ಥಿತಿ. ಗೃಹೋಪಯೋಗಿ ಸಾಮಗ್ರಿಗಳಿಗಾಗಿ ಖರ್ಚು.

ಧನು: ಉದ್ಯೋಗಸ್ಥರಿಗೆ ಘಟಕದ ಸುಧಾರಣೆಯ ಜವಾಬ್ದಾರಿ. ಉದ್ಯಮದ ಹೊಸ ವಿಭಾಗಗಳಲ್ಲಿ ಲಾಭದ ಸೂಚನೆ. ಹಿರಿಯ ನಾಗರಿಕರಿಗೆ ಸರಕಾರಿ ನೆರವು ದೊರಕಿಸಲು ಸಹಾಯ. ಹಿರಿಯ ಬಂಧುಗಳ ಆಗಮನದ ಸಾಧ್ಯತೆ.

ಮಕರ: ನೆಮ್ಮದಿಯ ದಿನಗಳು ಆರಂಭ. ಉದ್ಯೋಗ ಸ್ಥಾನದ ಪರೀಕ್ಷೆಗಳಲ್ಲಿ ವಿಜಯ. ಉದ್ಯಮಿಗಳಿಗೆ ಅನಿರೀಕ್ಷಿತ ಲಾಭದ ಸಾಧ್ಯತೆ. ಸ್ವರ್ಣಾಭರಣ ಖರೀದಿಗೆ ಧನವ್ಯಯ. ಮಕ್ಕಳ ಆರೋಗ್ಯ ಸುಧಾರಣೆ.

ಕುಂಭ: ಅನುದಿನವೂ ನಡೆಯುವ ಸೇವಾಕಾರ್ಯಗಳು. ಉದ್ಯೋಗಸ್ಥರಿಗೆ ಪ್ರೋತ್ಸಾಹದ ವಾತಾವರಣ. ಸರಕಾರಿ ನೌಕರರಿಗೆ ನಿಶ್ಚಿಂತೆಯ ಅನುಭವ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆಯಲ್ಲಿ ಲಾಭ. ಸಂಗೀತ, ನೃತ್ಯ ಕಲೆಗಳನ್ನು ಅಭ್ಯಾಸ ಮಾಡುವವರಿಗೆ ಸಂತಸ.

ಮೀನ: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ. ಇಲಾಖೆಯವರ ಸಹಕಾರದಿಂದ ಕೆಲಸಗಳು ಯಶಸ್ವಿ. ನವೀಕೃತ ಉದ್ಯಮ ಸ್ಥಾನದಲ್ಲಿ ಕಾರ್ಯಾರಂಭ. ದೇವತಾ ಸಾನ್ನಿಧ್ಯಕ್ಕೆ ಭೇಟಿ.ಅನುಭವಸ್ಥರ ಸಲಹೆಯಿಂದ ಹರ್ಷ.

Advertisement

Udayavani is now on Telegram. Click here to join our channel and stay updated with the latest news.

Next