Advertisement

Horoscope: ಈ ರಾಶಿಯವರಿಗೆ ಶೇರು ವ್ಯವಹಾರದಲ್ಲಿ ಕೊಂಚ ಲಾಭ…

07:23 AM Feb 29, 2024 | Team Udayavani |

ಮೇಷ: ಉತ್ತಮ ದೇಹಾರೋಗ್ಯ. ಮನಸ್ಸು ಶಾಂತ ಸ್ಥಿತಿಯಲ್ಲಿ. ಕಾರ್ಯರಂಗದಲ್ಲಿ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ಚುರುಕಿನ ವಾತಾವರಣ. ಕೆಲವು ಬಗೆಯ ಉದ್ಯಮಗಳು ಅಧಿಕ ಲಾಭದ ಹಾದಿಯಲ್ಲಿ. ಮಹಿಳೆಯರ ಆರೋಗ್ಯದ ಕಡೆಗೆ ಗಮನ ಇರಲಿ.

Advertisement

ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಗೌರವದ ಸ್ಥಾನ. ಸರಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ವಿಭಾಗ ಬದಲಾವಣೆ. ಖಾಸಗಿ ಉದ್ಯಮಗಳಲ್ಲಿ ಉತ್ಪಾದನೆ ಹೆಚ್ಚಳ. ಶೇರು ವ್ಯವಹಾರದಲ್ಲಿ ಕೊಂಚ ಲಾಭ. ಧರ್ಮಗ್ರಂಥಗಳ ಅಧ್ಯಯನದಲ್ಲಿ ಆಸಕ್ತಿ.

ಮಿಥುನ: ವಿಕೃತ ಮನಸ್ಕರಿಂದ ವಿನಾಕಾರಣ ಪೀಡನೆ. ಉದ್ಯೋಗ ಸ್ಥಾನದಲ್ಲಿ ಸುಮಾರಾಗಿ ನೆಮ್ಮದಿಯ ವಾತಾವರಣ. ಸ್ವಂತ ಉದ್ಯಮದಲ್ಲಿ ಪ್ರಗತಿ ತೃಪ್ತಿಕರ. ಕೃಷಿ ಸಾಮಗ್ರಿಗಳ ಮಾರಾಟಗಾರರಿಗೆ ಆದಾಯ ವೃದ್ಧಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

ಕರ್ಕಾಟಕ: ಇಷ್ಟ ದೇವತಾರ್ಚನೆಯಿಂದ ಪರಿಸ್ಥಿತಿ ನಿಭಾಯಿಸಲು ಶಕ್ತಿ. ಉದ್ಯೋಗ ಸ್ಥಾನದಲ್ಲಿ ಪ್ರತಿಭೆ, ಕಾರ್ಯಕ್ಷಮತೆಗೆ ಪ್ರಾಶಸ್ತ್ಯ. ದೀರ್ಘಾವಧಿ ಹೂಡಿಕೆಯಲ್ಲಿ ಲಾಭ. ಎಲ್ಲ ಮನೆ ಮಂದಿಗೂ ಉಲ್ಲಾಸದ ವಾತಾವರಣ.

ಸಿಂಹ: ಸ್ಥಿರವಾದ ಪ್ರಗತಿಯಿರುವುದರಿಂದ ಮುನ್ನಡೆಗೆ ಅಡ್ಡಿಯಿಲ್ಲ. ಉದ್ಯೋಗಸ್ಥರಿಗೆ ವೇತನ ಏರಿಕೆ. ಬಾಯ್ದೆರೆ ಪ್ರಚಾರದಿಂದ ವ್ಯಾಪಾರ ವೃದ್ಧಿ. ಮನೆ ನಿವೇಶನ ಖರೀದಿಗೆ ನಿರ್ಧಾರ. ಮನೆಯಲ್ಲಿ ಮಂಗಲ ಕಾರ್ಯ ಸನ್ನಿಹಿತ.

Advertisement

ಕನ್ಯಾ: ಬಹುಪಾಲು ನೆಮ್ಮದಿಯ ದಿನ. ಉದ್ಯೋಗ ಸ್ಥಾನದಲ್ಲಿ ಹಿತಕರ ವಾತಾವರಣ. ಸ್ವಂತ ಉದ್ಯಮದಲ್ಲಿ ಗಮನಾರ್ಹ ಪ್ರಗತಿ . ಬಂಧುವರ್ಗದಲ್ಲಿ ವಿವಾಹ ನಿಶ್ಚಯ. ಉದ್ಯೋಗಾಸಕ್ತರನ್ನು ಅರಸಿ ಬರುವ ಅವಕಾಶಗಳು.ಕೃಷಿ ಭೂಮಿಯಲ್ಲಿ ಉತ್ತಮ ಬೆಳೆ.

ತುಲಾ: ಸರಿಯಾದ ಸಮಯದಲ್ಲಿ ಪರಿಹಾರ ಗೊಂಡ ಸಮಸ್ಯೆಗಳು. ಅಕಸ್ಮಾತ್‌ ಧನಾಗಮ ಯೋಗ. ವಿತ್ತ ಸಂಸ್ಥೆಯ ನೆರವಿನಿಂದ ಉದ್ಯಮದ ಕಟ್ಟಡ ವಿಸ್ತರಣೆ ಆರಂಭ. ಕುಶಲಕರ್ಮಿಗಳಿಗೆ ಉದ್ಯೋಗಾವ ಕಾಶ. ಕೀರ್ತನೆ, ಭಜನೆ, ಸತ್ಸಂಗಗಳಲ್ಲಿ ಆಸಕ್ತಿ.

ವೃಶ್ಚಿಕ: ಸಕಲ ಬಗೆಯ ಸಂಕಟಗಳಿಂದ ವಿಮೋಚನೆ.ಉದ್ಯೋಗ ಸ್ಥಾನದಲ್ಲಿ ಸ್ವಯಂ ಯೋಗ್ಯತೆಯಿಂದ ಗೌರವ. ಉತ್ಪನ್ನಗಳ ಗುಣಮಟ್ಟಕ್ಕೆ ಸಾಮಾಜಿಕರ ಶ್ಲಾಘನೆ. ಸೋದರನ ಮಗನಿಗೆ ವಿವಾಹ ನಿಶ್ಚಯ. ಹತ್ತಿರದ ದೇವತಾ ಕ್ಷೇತ್ರಕ್ಕೆ ಭೇಟಿ.

ಧನು: ಕುಟುಂಬ ವಲಯದಲ್ಲಿ ಸ್ವಲ್ಪ ಅಸ್ತವ್ಯಸ್ತ ವಾತಾವರಣ. ಆತ್ಮೀಯರ ಸಹಾಯದಿಂದ ಪರಿಹಾರ. ಎಲ್ಲರ ಆರೋಗ್ಯ ಉತ್ತಮ. ಉದ್ಯೋಗ ಸ್ಥಾನದಲ್ಲಿ ಸದ್ಭಾವನೆಗೆ ಪಾತ್ರರಾಗುವಿರಿ. ಸಣ್ಣ ಪ್ರಮಾಣದ ಉದ್ಯಮಗಳ ಅಭಿವೃದ್ಧಿ.

ಮಕರ: ಉದ್ಯೋಗ ಸ್ಥಾನದಲ್ಲಿ ನೆಮ್ಮದಿ. ಉದ್ಯಮಿಗಳಿಗೆ ಶುಭದಿನ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ನೂತನ ವಾಹನ ಖರೀದಿ. ಕೃಷ್ಯುತ್ಪನ್ನಗಳ ಮಾರಾಟದಿಂದ ಅಧಿಕ ಲಾಭ. ಹಣ್ಣು, ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ.

ಕುಂಭ: ಸರಕಾರಿ ನೌಕರರಿಗೆ ವರ್ಗಾವಣೆ ಯಿಂದ ಅನುಕೂಲ. ಉದ್ಯಮಗಳಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ಧಾರ್ಮಿಕ ಕ್ಷೇತ್ರದ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಮನೆ ಮಂದಿಯ ಸಹಕಾರ. ಮುದ್ರಣ ಸಾಮಗ್ರಿ, ಸ್ಟೇಶನರಿ ವಿತರಕರ ವ್ಯಾಪಾರ ವೃದ್ಧಿ.

ಮೀನ: ಗುರುಕೃಪೆಯಿಂದ ಶನಿಮಹಾತ್ಮನ ಪೀಡೆ ಶಮನ. ಉದ್ಯೋಗ ಸ್ಥಾನದ ಆತಂಕ ದೂರ. ಸರಕಾರಿ ಕಚೇರಿಗಳಲ್ಲಿ ಅನುಕೂಲಕರ ಸ್ಪಂದನ. ಬಂಧು ವರ್ಗದಲ್ಲಿ ಶುಭಕಾರ್ಯ ನಿಶ್ಚಯ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಹಿರಿಯರ, ಗೃಹಿಣಿಯರ ಆರೋಗ್ಯ ಉತ್ತಮ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ.

Advertisement

Udayavani is now on Telegram. Click here to join our channel and stay updated with the latest news.

Next