Advertisement

ದಿನಭವಿಷ್ಯ: ಈ ರಾಶಿಯವರು ಇಂದು ತಮ್ಮ ಹಿತಶತ್ರುಗಳಿಂದ ದೂರವಿದ್ದರೆ ಉತ್ತಮ !

07:26 AM Apr 10, 2021 | Team Udayavani |

ಮೇಷ: ಅವಿರತ ಚಟುವಟಿಕೆಗಳು ದೇಹಾರೋಗ್ಯದಲ್ಲಿ ಕೆಟ್ಟ ಪರಿಣಾಮ ಬೀರದಂತೆ ಜಾಗ್ರತೆ ಮಾಡುವುದು ಅವಶ್ಯ. ನ್ಯಾಯಾಲಯದ ವಾದವಿವಾದಗಳು ಸದ್ಯಕ್ಕೆ ಮುಕ್ತಾಯಗೊಳ್ಳುವ ಲಕ್ಷಣಗಳು ತೋರಿಬರಲಾರದು. ಜಾಗ್ರತೆಯಿಂದ ಹೆಜ್ಜೆ ಇಡಿರಿ.

Advertisement

ವೃಷಭ: ದೈವಾನುಗ್ರಹದ ಬಲದಿಂದ ಅನಿರೀಕ್ಷಿತ ರೀತಿಯಲ್ಲಿ ಕೆಲಸ ಕಾರ್ಯಗಳು ನಡೆದು ಅಚ್ಚರಿ ತರುವುದು. ಸಹೋದ್ಯೋಗಿಗಳ ದುರ್ವ್ಯವಹಾರಗಳು ಹಂತಹಂತವಾಗಿ ಗೋಚರಕ್ಕೆ ಬರುವುದು. ಎಷ್ಟು ನೋಡಿಕೊಂಡರೂ ಸಾಲದು.

ಮಿಥುನ: ನಿಮ್ಮ ಎಚ್ಚರಿಕೆಯ ಹೆಜ್ಜೆಯು ಮುನ್ನಡೆಗೆ ಸಾಧಕವಾಗುವುದು. ಸಾಂಸಾರಿಕವಾಗಿ ನೆಮ್ಮದಿಯು ಗೋಚರಕ್ಕೆ ಬರುವುದು. ಕಾರ್ಯರಂಗದಲ್ಲಿ ದುಡಿಮೆ ಹೆಚ್ಚಿ ಆರೋಗ್ಯದ ಕಡೆ ತುಸು ಗಮನವೀಯಬೇಕಾದೀತು. ಮುನ್ನೆಡೆಯಿರಿ.

ಕರ್ಕ: ಆರ್ಥಿಕವಾಗಿ ದುರಿತಗಳು ಕಡಿಮೆಯಾಗಿ ಕಾರ್ಯಾನುಕೂಲಕ್ಕೆ ಸಾಧಕವಾದೀತು. ಆದರೂ ನಿಮ್ಮ ಅಳತೆಮೀರಿ ಖರ್ಚು ವೆಚ್ಚಗಳು ಬಂದಾವು. ಸ್ವಕಾರ್ಯ, ಸಮಾಜಕಾರ್ಯ, ಪರೋಪಕಾರ ಬುದ್ಧಿಯಿಂದ ಶ್ಲಾಘನೆ ದೊರೆಯಲಿದೆ.

ಸಿಂಹ: ಗುರುಹಿರಿಯರೊಡನೆ ಉತ್ತಮ ಬಾಂಧವ್ಯ ಹಾಗೂ ಭಕ್ತಿಯಿಂದ ನಿಮ್ಮ ಹಲವು ಕಾರ್ಯಗಳು ಕೈಗೂಡಲಿದೆ. ಕಾರ್ಯಕ್ಷೇತ್ರದಲ್ಲಿ ನೀವು ತೋರಿಸಿದ ಪ್ರಯತ್ನಬಲ, ವಿಶೇಷ ಸಾಧನೆ ನಿಮ್ಮ ಮುನ್ನಡೆಗೆ ಪುಷ್ಟಿ ನೀಡಲಿದೆ. ಶುಭವಿದೆ.

Advertisement

ಕನ್ಯಾ: ಸಾಂಸಾರಿಕವಾಗಿ ಉದ್ಯೋಗ ಕ್ಷೇತ್ರದಲ್ಲಿ ಹಾಗೂ ಪರರ ಕಾರ್ಯದಿಂದ ನಿಮಗೆ ಸಂತಸ, ಸಮಾಧಾನ ದೊರಕಲಿದೆ. ನಿಮ್ಮ ಅತೀ ಪ್ರೀತಿಪಾತ್ರ ಮಿತ್ರರು ನಿಮಗೆ ದ್ರೋಹ ಬಗೆದಾರು. ಹೆಚ್ಚಿನ ಎಚ್ಚರಿಕೆಯಿಂದ ವ್ಯವಹರಿಸಿರಿ.

ತುಲಾ: ಆರ್ಥಿಕ ಸ್ಥಿತಿಯು ನಾನಾ ರೀತಿಯಲ್ಲಿ ಸುಧಾರಿಸುವುದರಿಂದ ಋಣಭಾದೆಯಿಂದ ಮುಕ್ತರಾಗುವಿರಿ. ಆರೋಗ್ಯದಲ್ಲಿ ಮಾತ್ರ ಹೆಚ್ಚಿನ ಜಾಗ್ರತೆ ಬೇಕಾದೀತು. ಸರಕಾರಿ ಕೆಲಸ ಕಾರ್ಯದಲ್ಲಿ ಸಿದ್ಧಿಯಾಗಲಿದೆ. ಸಂತಸವಿದೆ.

ವೃಶ್ಚಿಕ: ಗೃಹದಲ್ಲಿ ಆಪ್ತೇಷ್ಟರ ಭೇಟಿಯಿಂದ ನಿಮ್ಮ ಕೆಲಸದಲ್ಲಿ ಉತ್ಸಾಹ ಮಿತಿಮೀರೀತು. ಸತ್ಕಾರ, ಸಮ್ಮಾನಗಳು ಲಭಿಸೀತು. ಅದರಿಂದ ಸ್ವಲ್ಪ ಖರ್ಚುಗಳೂ ಬಂದೀತು. ಹೊಸ ಉದ್ಯೋಗದ ಆರಂಭಕ್ಕೆ ಇದು ಸಕಾಲವಲ್ಲ.

ಧನು: ಯಾವ ಕೆಲಸ ಕಾರ್ಯದಲ್ಲೂ ಆತುರತೆ ಸಲ್ಲದು. ದುಂದುವೆಚ್ಚಗಳು ಅತಿರೇಕವಾಗಿ ಒಮ್ಮೊಮ್ಮೆ ಆತಂಕಕ್ಕೆ ಕಾರಣವಾದೀತು. ಅನಾವಶ್ಯಕ ಅವಮಾನ, ಅಪಮಾನ ಪ್ರಸಂಗಗಳು ಎದುರಾದೀತು. ಕಾರ್ಯಕ್ಷೇತ್ರದಲ್ಲಿ ಎಚ್ಚರವಿರಲಿ.

ಮಕರ: ಕೊಂಚ ಆಶಾದಾಯಕವಾದ ದಿನವಾದುದರಿಂದ ಮುಂದುವರಿಯಲು ಸಾಧಕವಾಗುತ್ತದೆ. ವೃತ್ತಿರಂಗದಲ್ಲಿ ಚೇತರಿಕೆಯ ದಿನಗಳಾಗಿ ಸ್ಥಾನಮಾನ ದೊರೆತು ನೆಮ್ಮದಿ ಕಂಡೀತು. ಕಳೆದದ್ದನ್ನು ಗಳಿಸುವ ಕಾಲವಾಗಿದೆ.

ಕುಂಭ: ನಿಮ್ಮ ಕೈಗೆ ಬಂದ ಭಾಗವನ್ನು ಸದುಪಯೋಗಿಸಿದರೆ ಉತ್ತಮ ಬೆಲೆ ಕಾಣಬಹುದು. ನಿಮ್ಮ ಸ್ವಸಾಮರ್ಥ್ಯದಲ್ಲಿ ನಂಬಿಕೆ ಇಡಿರಿ. ಕಾಲೋಚಿತವಾದ ನಡೆನಡೆಗಳು ನೆರವಿದ್ದು ನಿಮ್ಮ ಗಮನ ಅದರ ಮೇಲಿರಲಿ.

ಮೀನ: ಉದ್ಯೋಗಿಗಳಿಗೆ ಬದಲಾವಣೆಯ ಸೂಚನೆ ತೋರಿಬಂದೀತು. ಸಾಂಸಾರಿಕವಾಗಿ ನೆಮ್ಮದಿಯ ವಾತಾವರಣವಿದೆ. ಹಿತಶತ್ರುಗಳು ನಿಮ್ಮ ಶಾಂತಿಗೆ ಭಂಗತಂದಾರು. ಆದಷ್ಟು ಅವರಿಂದ ದೂರವಿದ್ದರೆ ನಿಮಗೆ ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next