Advertisement

ಗುರುಹಿರಿಯರಲ್ಲಿ ಸಮಾಧಾನ ತಾಳ್ಮೆ ಅಗತ್ಯ. ನಿರೀಕ್ಷಿಸಿದಂತೆ ಧನ ವೃದ್ಧಿ.

07:52 AM Jan 06, 2022 | Team Udayavani |

ಮೇಷ: ಕರ್ತವ್ಯ ನಿಷ್ಠೆ, ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಪ್ರಗತಿ. ಜನಮನ್ನಣೆ. ಉತ್ತಮ ಧನಾರ್ಜನೆ. ಸ್ಪರ್ಧೆಗಳಲ್ಲಿ ಜಯ. ಗುರುಹಿರಿಯರಿಂದ ಲಾಭ. ಗೃಹದಲ್ಲಿ ಸಂತಸದ ವಾತಾವರಣ. ಆರೋಗ್ಯ ವೃದ್ಧಿ.

ವೃಷಭ:ಉತ್ತಮ ವಾಕ್‌ಚತುರತೆ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿಸಿ ದಂತೆ ಹೆಚ್ಚಿನ ಧನಸಂಪತ್ತು ವೃದ್ಧಿ. ಪಾಲುದಾರ ರೊಂದಿಗೆ ತಾಳ್ಮೆಯಿಂದ ಸಹಕರಿಸಿ. ದೂರದ ಸ್ಥಳದಿಂದ ಜ್ಞಾನ ಸಂಪಾದನೆ. ಮನೆಯಲ್ಲಿ ಸಂಭ್ರಮ ಪರಿಸ್ಥಿತಿ.
ಮಿಥುನ: ಧಾರ್ಮಿಕ ಕಾರ್ಯಗಳಲ್ಲಿ ಮಗ್ನತೆ. ವಿದ್ಯಾರ್ಜನೆಯಲ್ಲಿಯೂ ಮಕ್ಕಳಲ್ಲಿಯೂ ಸಮಯ ಕಳೆಯುವಿಕೆ. ಸಾಹಸ ಪ್ರವೃತ್ತಿಯಿಂದಲೂ ಬುದ್ಧಿವಂತಿಕೆಯಿಂದಲೂ ಗೌರವ ಸ್ಥಾನ ಪ್ರಾಪ್ತಿ. ಮನೆಯ ನಿಮಿತ್ತ ಹೆಚ್ಚಿದ ಜವಾಬ್ದಾರಿ.
ಕಟಕ: ಕಾರ್ಯ ಸಾಧಿಸಿದ್ದರಿಂದ ಮನಸ್ಸಿನಲ್ಲಿ ಸಂತೋಷ. ಗುರುಹಿರಿಯರಲ್ಲಿ ಸಮಾಧಾನ ತಾಳ್ಮೆ ಅಗತ್ಯ. ನಿರೀಕ್ಷಿಸಿದಂತೆ ಧನ ವೃದ್ಧಿ. ದೂರದ ಮಿತ್ರರಿಂದ ಸಹಾಯ ಹಾಗೂ ಅವರಿಗಾಗಿ ಧನ ವ್ಯಯ ಸಂಭವ. ಮಕ್ಕಳಿಂದ ಸಂತೋಷ.
ಸಿಂಹ: ಆರೋಗ್ಯ ವೃದ್ಧಿ. ಸರಕಾರೀ ಕೆಲಸ ಗಳಲ್ಲಿ ಪ್ರಗತಿ. ನಿರೀಕ್ಷಿತ ಸ್ಥಾನ ಲಾಭ. ಪಾಲುದಾರಿಕಾ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ. ಆಸ್ತಿ ಭೂಮಿ ಕಟ್ಟಡಗಳ ಬಗ್ಗೆ ಬದಲಾವಣೆ ಸಂಭವ ಸನ್ಮಾರ್ಗದ ಸಂಪತ್ತಿಗೆ ಆದ್ಯತೆ ನೀಡಿ.
ಕನ್ಯಾ: ಹೆಚ್ಚಿದ ದೈಹಿಕ ಶ್ರಮ ಜವಾಬ್ದಾರಿ. ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರ ಗಳಲ್ಲಿ ಕೀರ್ತಿ ಮನಃ ಸಂತೋಷ. ಸಾಂಸಾರಿಕ ಸುಖ ಮಧ್ಯಮ. ಹಣಕಾಸಿನ ವಿಚಾರದಲ್ಲಿ ಪ್ರಗತಿ. ಗುರುಹರಿಯರಿಂದ ತೃಪ್ತಿ.
ತುಲಾ: ಆರೋಗ್ಯ ವೃದ್ಧಿ. ಧಾರ್ಮಿಕ ಕೆಲಸ ಕಾರ್ಯಗಳಿಗೆ ಪ್ರಯಾಣ. ಉದ್ಯೋಗ ವ್ಯವಹಾರದಲ್ಲಿ ಹೆಚ್ಚಿದ ಜವಾಬ್ದಾರಿ. ಆಸ್ತಿ ವಿಚಾರದಲ್ಲಿ ಪ್ರಗತಿ. ವಿದ್ಯಾರ್ಥಿಗಳಿಗೆ ಹೆಚ್ಚಿದ ಸಂಭ್ರಮ. ಗುರುಹಿರಿಯರಿಂದ ಉತ್ತಮ ಮಾರ್ಗದರ್ಶನ.
ವೃಶ್ಚಿಕ: ಉತ್ತಮ ವಾಕ್‌ ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಉದ್ಯೋಗ ವ್ಯವಹಾರದಲ್ಲಿ ಅಭಿವೃದ್ಧಿ ಪೂರಕ ಬದಲಾವಣೆ. ಅಧಿಕ ಧನಾರ್ಜನೆ. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಧಾರ್ಮಿಕ ಕಾರ್ಯಗಳಿಗೆ ಧನವ್ಯಯ.
ಧನು: ಆರೋಗ್ಯದಲ್ಲಿ ಸಮಾಧಾನ. ಚಿಕ್ಕ ಪ್ರಯಾಣ ಸಂಭವ. ಮಾನಸಿಕವಾಗಿ ಸಂಭ್ರಮಿಸುವ ಕಾಲ. ವಿದ್ಯಾರ್ಥಿಗಳಿಗೆ ಉತ್ತಮ ಸ್ಥಾನ ಸುಖ. ಉದ್ಯೋಗ ವ್ಯವಹಾರಸ್ಥರಿಗೆ ಅಧಿಕ ಜವಾಬ್ದಾರಿ ಹಾಗೂ ಉತ್ತಮ ಬದಲಾವಣೆಯ ಅವಕಾಶ. 
ಮಕರ: ಆರೋಗ್ಯದಲ್ಲಿ ವೃದ್ಧಿ. ಪರಊರ ಮಿತ್ರರ ಭೇಟಿ. ದೂರದ ಆಸ್ತಿ ವಿಚಾರದಲ್ಲಿ ಅಭಿವೃದ್ಧಿಯ ನಡೆ. ಪಾಲುದಾರಿಕಾ ಕ್ಷೇತ್ರದವರಿಗೆ ಪರಸ್ಪರ ಸಹಕಾರದಿಂದ ಉನ್ನತಿ. ಮೇಲಾಧಿಕಾರಿಗಳ ಗಣ್ಯರ ಮಾರ್ಗದರ್ಶನ ಸಹಾಯ.
ಕುಂಭ: ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಸ್ಥಾನ ಗೌರವಾದಿ ಸುಖ. ಅತ್ಯುತ್ತಮ ಧನಾರ್ಜನೆ. ಉತ್ತಮ ವಾಕ್‌ಚತುರತೆ ಮನೋರಂಜನೆಯಿಂದ ಕೂಡಿದ  ಸಮಯ. ಮನೆಯಲ್ಲಿ ಸಂಭ್ರಮದ ವಾತಾವರಣ. ಆರೋಗ್ಯ ವೃದ್ಧಿ. 
ಮೀನ: ಧಾರ್ಮಿಕ ಕಾರ್ಯಗಳ ನೇತೃತ್ವ. ದಾನ ಧರ್ಮಾದಿಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ಮನಃಸಂತೋಷ. ಜನಮನ್ನಣೆ. ಧೈರ್ಯ ಉತ್ಸಾಹದಿಂದ ಕೂಡಿದ ಕಾರ್ಯ ವೈಖರಿ. ಆರೋಗ್ಯದ ಬಗ್ಗೆ ಉದಾಸೀನತೆ ಬೇಡ. ಗುರುಹಿರಿಯರ ಆರೋಗ್ಯ ಸುದೃಢ.
Advertisement
Advertisement

Udayavani is now on Telegram. Click here to join our channel and stay updated with the latest news.

Next