Advertisement

ಮಕ್ಕಳಿಂದ ಸುವಾರ್ತೆ. ದಂಪತಿಗಳಲ್ಲಿ ಸುಖ ವೃದ್ಧಿ

08:01 AM Nov 20, 2021 | Team Udayavani |

ಮೇಷ: ಮಾತೃ ಸಮಾನರಾದವರಿಂದ ಸಂತೋಷ. ನೂತನ ಮಿತ್ರರ ಸಹಕಾರ. ಆಸ್ತಿ ವಿಚಾರದಲ್ಲಿ ಅಭಿವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಚರ್ಚೆ ಒದಗಿದರೂ ಧನಾರ್ಜನೆಗೆ ಕೊರತೆಯಾಗದು. ಗೃಹದಲ್ಲಿ ಸಂತಸದ ವಾತಾವರಣ.

Advertisement

ವೃಷಭ: ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರ ಗಳಲ್ಲಿ ನಿಷ್ಠೆ . ಉತ್ತಮ ವಾಕ್‌ಚತುರತೆ ಯಿಂದ ಕೂಡಿದ ಕಾರ್ಯ ವೈಖರಿ. ನಿರೀಕ್ಷೆಗೂ ಮೀರಿದ ಧನಾಗಮನ. ದೂರದ ಬಂಧುಮ್ರಿರಿಂದ ಸಹಾಯ ಒದಗೀತು. ಸಾಂಸಾರಿಕ ಸುಖ ತೃಪ್ತಿಕರ.

ಮಿಥುನ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ. ದೀರ್ಘ‌ ಸಂಚಾರ ಸಂಭವ. ದೂರದ ಉದ್ಯೋಗ ವ್ಯವಹಾರ ಗಳಲ್ಲಿ ಪ್ರಗತಿ. ಹೆಚ್ಚಿದ ವರಮಾನ. ಸಹಾಯಕರು, ಸಹೋದ್ಯೋಗಿಗಳ ಆರೋಗ್ಯ ಗಮನಿಸಿ. ದಾಂಪತ್ಯ ತೃಪ್ತಿಕರ.

ಕಟಕ: ಕೆಲಸ ಕಾರ್ಯಗಳಲ್ಲಿ ತಲ್ಲೀನತೆ. ನಿಮ್ಮ ಪ್ರಯತ್ನಕ್ಕೆ ತಕ್ಕ ಫ‌ಲ ಸಿಗಲಿಲ್ಲವೆಂದು   ಚಿಂತಿಸದಿರಿ. ಹಣಕಾಸಿನ ವಿಚಾರದಲ್ಲಿ ಆಯವ್ಯಯ ಸಮಾನವಾಗಿ ತೋರೀತು. ಗೃಹೋಪಕರಣ ವಸ್ತುಗಳ ಸಂಗ್ರಹ. ಗುರುಹಿರಿಯರ ಸಹಕಾರ ಲಭಿಸೀತು.

ಸಿಂಹ: ಉದ್ಯೋಗ ವ್ಯವಹಾರಗಳಲ್ಲಿ ಸರಿಯಾಗಿ ಜವಾಬ್ದಾರಿ ವಹಿಸಿದ್ದರಿಂದ ಸ್ಥಾನ ಗೌರವಾದಿ ಸಂಪಾದಿಸಿದ ತೃಪ್ತಿ. ಹಣಕಾಸಿನ ವಿಚಾರದಲ್ಲಿ ಪ್ರಗತಿ. ಆಸ್ತಿ, ಗೃಹ, ವಾಹನ ಸಂಬಂಧ ಖರ್ಚು ಸಂಭವ. ಅನ್ಯರ ಮೇಲೆ ಅವಲಂಬಿತರಾಗದಿರಿ.

Advertisement

ಕನ್ಯಾ: ಪ್ರಯಾಣದಿಂದ ದೇಹಾಯಾಸ ಕಂಡೀತು. ಧಾರ್ಮಿಕ ಕಾರ್ಯಗಳಿಗಾಗಿ ಧನ ವ್ಯಯ. ದೂರದ ವ್ಯವಹಾರಗಳಲ್ಲಿ ಪ್ರಗತಿ. ನಿರೀಕ್ಷಿತ ಧನಾಗಮನ. ಕುಟುಂಬಿಕರಿಂದ ಪ್ರೋತ್ಸಾಹ. ದಾಂಪತ್ಯ ಸುಖ ಮಧ್ಯಮ. ನಿರಂತರ ಧನಾಗಮನ.

ತುಲಾ: ಅವಿವಾಹಿತರಿಗೆ ಉತ್ತಮ ಸಂಬಂಧ ಕೂಡಿ ಬರುವ ಸಮಗ. ಆರೋಗ್ಯ ವೃದ್ಧಿ. ನೂತನ ಬಂಧುಮಿತ್ರರ ಸಮಾಗಮ. ಹೆಚ್ಚಿದ ಸ್ಥಾನ ಗೌರವಾದಿ ಸುಖ. ನಿರಂತರ ಧನಾಗಮನ. ಉದ್ಯೋಗ ವ್ಯವಹಾರಗಳಲ್ಲಿ ಸಹಾಯ ಸಹಕಾರ ಲಭ್ಯ.

ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ತಲ್ಲೀನತೆ. ನಿರೀಕ್ಷಿತ ಗುರಿ ಸಾಧಿಸಿದ ತೃಪ್ತಿ . ಪಾಲುದಾರರಿಂದ ಸಹಕಾರ ಪ್ರೋತ್ಸಾಹ. ಅವಿವಾಹಿತರಿಗೆ ಉತ್ತಮ ನೆಂಟಸ್ತಿಕೆ ಒದಗುವ ಸಮಯ. ಅನಿರೀಕ್ಷಿತ ಧನಾಗಮನ. ಎಲ್ಲರಲ್ಲೂ ಪ್ರೀತಿ ವಿಶ್ವಾಸ ಸಂಪಾದನೆ.

ಧನು: ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡದಿರಿ. ಗುರುಹಿರಿಯರ ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಉತ್ತಮ ಧನಾರ್ಜನೆ. ಗೃಹದಲ್ಲಿ ಸಂತಸದ ವಾತಾವರಣ. ವಿದ್ಯಾರ್ಥಿಗಳಿಗೆ ಪ್ರಯಾಣ ಸಂಭವ.

ಮಕರ: ಆರೋಗ್ಯ ಗಮನಿಸಿ. ಈ ದಿನ ಸಾಮಾನ್ಯ ಫ‌ಲದಾಯಕ. ಯಾವುದೇ ಸಾಹಸ ಪ್ರವೃತ್ತಿ ಸಲ್ಲದು. ತಾಳ್ಮೆ ಸಮಾಧಾನದಿಂದ ಸಮಯ ಕಳೆಯಿರಿ. ವಿಶ್ರಾಂತಿ ಪಡೆಯಿರಿ. ದೇವತಾ ಪ್ರಾರ್ಥನೆಯಿಂದ ನೆಮ್ಮದಿ.

ಕುಂಭ: ಆರೋಗ್ಯ ವೃದ್ಧಿ. ಮಕ್ಕಳ ನಿಮಿತ್ತ ಸಂತೋಷ ವೃದ್ಧಿ. ಹೆಚ್ಚಿದ ವರಮಾನ. ಬಂಧುಮಿತ್ರರಿಂದಲೂ, ಉದ್ಯೋಗ ವ್ಯವಹಾರದಿಂದಲೂ ಅನಿರೀಕ್ಷಿತ ಪ್ರಗತಿ. ಗೃಹೋಪಯೋಗಿ ವಸ್ತುಗಳ ಸಂಗ್ರಹ. ಧಾರ್ಮಿಕ ಕ್ಷೇತ್ರಗಳ ಸಂದರ್ಶನ.

ಮೀನ: ಆರೋಗ್ಯದಲ್ಲಿ ಸುಧಾರಣೆ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮದಿಂದ ಪ್ರಗತಿ. ಧನಾರ್ಜನೆ ಯಲ್ಲಿ ಮುನ್ನಡೆ. ಆಸ್ತಿ ವಿಚಾರದಲ್ಲಿ ಪ್ರಗತಿಪರ ಬದಲಾವಣೆ ಸಂಭವ. ಮಕ್ಕಳಿಂದ ಸುವಾರ್ತೆ. ದಂಪತಿಗಳಲ್ಲಿ ಸುಖ ವೃದ್ಧಿ.

Advertisement

Udayavani is now on Telegram. Click here to join our channel and stay updated with the latest news.

Next