Advertisement

ಈ ರಾಶಿಯವರು ಆರೋಗ್ಯದಲ್ಲಿ ಗಮನ ಹರಿಸದಿರುವುದರಿಂದ ಏರುಪೇರು ಸಂಭವ: ಎಚ್ಚರಿಕೆ!

07:47 AM Oct 11, 2021 | Team Udayavani |
ಮೇಷ:ಆರೋಗ್ಯ ಉತ್ತಮ. ಸುಖಮಯ ಅಸ್ತಿತ್ವ. ಶಾರೀರಿಕ ಬಲ. ವರ್ಚಸ್ಸು ವೃದ್ಧಿ. ಜನಪದರಿಂದ ಗೌರವ ಅದಿಕಾರಾದಿ ಸುಖ. ಅನಿರೀಕ್ಷಿತ ಧನಾಗಮ. ಉತ್ತಮ ವಾಕ್‌ಚತುರತೆ. ಸರ್ವವರ್ಗದವರಿಂದಲೂ ಸಹಾಯ ಸಹಕಾರ ಪ್ರಾಪ್ತಿ. 
ವೃಷಭ:ಸಾಂಸಾರಿಕ ಸುಖ ವೃದ್ಧಿ. ಎಲ್ಲರಿಂದಲೂ ಮಾನ್ಯತೆ. ಆಥಿಕ ಅಧಿಕ ಧನ ಸಂಪತ್ತು ವೃದ್ಧಿ. ವಿದ್ಯಾರ್ಜನೆಯಲ್ಲಿ ಆಸಕ್ತಿ. ಆಚಾರ ವಿಚಾರದಲ್ಲಿ ಸ್ಪಷ್ಟತೆಯ ವರ್ತನೆ. ಸರ್ವ ಕಾರ್ಯಗಳಲ್ಲಿ ಸಫ‌ಲತೆ. ಗೃಹದಲ್ಲಿ ಸಂತಸದ ವಾತಾವರಣ.
ಮಿಥುನ: ಸುಪುಷ್ಟತೆಯಿಂದ ಕೂಡಿದ ಶಾರೀರಿಕ ಮಾನಸಿಕ ಸ್ಥಿತಿ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಮಕ್ಕಳಿಂದ ಸಂತೋಷ. ವಿದ್ಯಾರ್ಜನೆಯಲ್ಲಿ ಯಶಸ್ಸು ಲಭಿಸಿದ ತೃಪ್ತಿ. ಹಿರಿಯರ ಆರೋಗ್ಯ ಗಮನಿಸಿ. ಸಹೋದ್ಯೋಗಿಗಳ ಸಹಾಯದಿಂದ ಕೆಲಸ ಕಾರ್ಯದಲ್ಲಿ ಜಯ.
ಕಟಕ:ಗೃಹದಲ್ಲಿ ಸಂಭ್ರಮದ ವಾತಾವರಣ. ಧಾರ್ಮಿಕ ಕಾರ್ಯಗಳಿಗೆ ಧನ ವ್ಯಯ. ದೂರದ ಬಂಧುಮಿತ್ರರ ಭೇಟಿ. ಉದ್ಯೋಗ ದೂರದ ವ್ಯವಹಾರಗಳಲ್ಲಿ ಮುನ್ನಡೆ. ಹಿರಿಯರಿಂದ ಸುಖ. ಸರಕಾರಿ ಕಾರ್ಯಗಳಲ್ಲಿ ಪ್ರಗತಿ.
ಸಿಂಹ: ಗುರು ಹಿರಿಯರ ಸಂಪೂರ್ಣ ಪ್ರೀತಿ ಸಹಕಾರ ಲಭ್ಯ. ಸರಕಾರಿ ಕೆಲಸಗಳಲ್ಲಿ ಯಶಸ್ಸು. ಕೀರ್ತಿ ಸಂಪಾದನೆ. ಜನಮನ್ನಣೆ. ದಂಪತಿಗಳಲ್ಲಿ ಹೆಚ್ಚಿನ ಅನುರಾಗ. ಸ್ವಸಾಮರ್ಥ್ಯದಿಂದ ನಿರೀಕ್ಷೆಗೂ ಮೀರಿದ ಧನಸಂಪತ್ತು ಪ್ರಾಪ್ತಿ
ತುಲಾ:ಆಸ್ತಿ ವಿಚಾರದಲ್ಲಿ ತಲ್ಲೀನತೆ ಹಾಗೂ ನಿರೀಕ್ಷಿತ ಅಭಿವೃದ್ಧಿಯಿಂದ ಹೆಚ್ಚಿದ ಸಂತೋಷ. ಬಂಧು ಮಿತ್ರರ ಮಾತೃ ಸಮಾನರಿಂದ ಸಹಕಾರ ಪ್ರೋತ್ಸಾಹ ಲಭ್ಯ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾಯಕ ಬದಲಾವಣೆ. ದಾಂಪತ್ಯ ಸುಖ ಮಧ್ಯಮ.
ವೃಶ್ಚಿಕ:ಆರೋಗ್ಯ ಗಮನಿಸಿ. ಹೆಚ್ಚಿದ ದೇಹಾಯಾಸ. ಗುರುಹಿರಿಯರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಹಣಕಾಸಿನ ವಿಚಾರದಲ್ಲ ಗೊಂದಲವಾಗದಂತೆ ಗಮನಿಸಿ. ಅತೀ ಉದಾರತೆಯಿಂದ ಕಿರಿಕಿರಿ ಆದೀತು. ಆಸ್ತಿ ವಿಚಾರದಲ್ಲಿ ಪರಿಶ್ರಮ.
ಧನು: ಅತಿಯಾದ ಆತ್ಮವಿಶ್ವಾಸ ‌ದಿಂದ ಆರೋಗ್ಯದಲ್ಲಿ ಗಮನ ಹರಿಸದಿರುವುದರಿಂದ ಏರುಪೇರು ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಸ್ವಜನರೊಂದಿಗೆ ಪಾರದರ್ಶಕತೆಯಿಂದ ಕಾರ್ಯೋನ್ಮುಖರಾಗಿ ನಿಷ್ಠುರ ಆಗದಂತೆ ಎಚ್ಚರ ವಹಿಸಿ. 
ಮಕರ: ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ ಸಂತೋಷ. ಭೂ ವಿಚಾರಗಳಲ್ಲಿ ಹೆಚ್ಚಿದ ಪರಿಶ್ರಮ. ಸಾಂಸಾರಿಕ ಸುಖ ಮಧ್ಯಮ. ಮಕ್ಕಳ ಅಭಿವೃದ್ಧಿಗಾಗಿ ಅಧಿಕ ಧನ ವ್ಯಯ. ಆರೋಗ್ಯದಲ್ಲಿ ನಿಗಾ ವಹಿಸಿ.
ಕುಂಭ:ನಾಯಕತ್ವ ಗುಣ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಚರ್ಚೆಯಾದರೂ ಯಶಸ್ಸು ನಿಮ್ಮದಾಗುವ ಸಂಭವ. ಉತ್ತಮ ವರಮಾನ. ವಾಕ್‌ ಚತುರತೆ ಪ್ರದರ್ಶನ. ಸಾಂಸಾರಿಕ ಸುಖಕ್ಕೆ ಹೆಚ್ಚು ಪರಿಶ್ರಮ.
ಮೀನ: ಆರೋಗ್ಯ ವೃದ್ಧಿ. ಸಣ್ಣ ಪ್ರಯಾಣದಿಂದ ಲಾಭ. ಉದ್ಯೋಗದಲ್ಲಿ ಪರಿಶ್ರಮಕ್ಕೆ ಸರಿಯಾದ ಅಭಿವೃದ್ಧಿ. ಧನಾರ್ಜನೆ ತೃಪ್ತಿಕರ. ಅತಿಯಾದ ಉದಾರತೆ ಸಮಸ್ಯೆ ತಂದೀತು. ವಸ್ತುನಿಷ್ಠೆಗೆ ಆದ್ಯತೆ ನೀಡಿ. ಸಾಂಸಾರಿಕ ಸುಖ ಮಧ್ಯಮ.
Advertisement

Udayavani is now on Telegram. Click here to join our channel and stay updated with the latest news.

Next