Advertisement

ಈ ರಾಶಿಯವರಿಂದು ಅಚ್ಚರಿಯ ರೀತಿಯಲ್ಲಿ ಅಧಿಕಾರಿಗಳ ವಕ್ರದೃಷ್ಟಿಯಿಂದ ಪಾರಾಗುವಿರಿ!

07:20 AM May 15, 2021 | Team Udayavani |

15-05-2021

Advertisement

ಮೇಷ: ಉದ್ಯೋಗ ವ್ಯವಹಾರದಲ್ಲಿ ಪ್ರಗತಿ ಕಂಡು ಬರುವುದು. ಆರ್ಥಿಕ ಅಡಚಣೆಯ ನಡುವೆಯೇ ಇಚ್ಛಿಸಿದ ಕೆಲಸ ಕಾರ್ಯರೂಪಕ್ಕೆ ಬರಲಿದೆ. ಗೃಹದಲ್ಲಿ ಶುಭಮಂಗಲ ಕಾರ್ಯನಿಮಿತ್ತ ಸಂಭ್ರಮವು ಕಂಡುಬರುವುದು. ಸಂತಸವಿದೆ.

ವೃಷಭ: ವಿಶೇಷವಾದ ಆಸಕ್ತಿಯಿಂದ ಕಾರ್ಯದಲ್ಲಿ ತೊಡಗಿಸಿಕೊಳ್ಳುವಿರಿ. ಸಕಾಲಕ್ಕೆ ಸರಿಯಾದ ನಿರ್ಧಾರದಿಂದ ಮನತೃಪ್ತಿ ಸಿಗಲಿದೆ. ಬಂಧುಮಿತ್ರರ ಆಗಮನದಿಂದ ಖರ್ಚುವೆಚ್ಚಾದಿಗಳು ಅಲಂಕಾರಿಕ ಸಾಮಾಗ್ರಿಗಳ ಖರೀದಿ ಇದೆ.

ಮಿಥುನ: ಆತ್ಮೀಯರಿಗೆ ನೆರವಿನ ಹಸ್ತ ಕಂಡು ಬರಲಿದೆ. ಖಚಿತ ನಿರ್ಧಾರಕ್ಕೆ ಬರಲಾಗದ ಮನಸ್ಥಿತಿ ಇರುತ್ತದೆ. ಆತಂಕದಿಂದಲೇ ಕಾರ್ಯಸಿದ್ಧಿ ಇರುತ್ತದೆ. ಮಧ್ಯವರ್ತಿಯಾಗ ಬೇಕಾದ ಸಂದಿಗ್ಧತೆ. ಆಪ್ತೇಷ್ಟರ ವಲಯದಲ್ಲಿ ಮಾನ್ಯತೆ ಲಭ್ಯ.

ಕರ್ಕ: ಋಣ ಪರಿಹಾರಾರ್ಥವಾಗಿ ಪ್ರಗತಿಪರ ಚಟುವಟಿಕೆಗಳು ಕಂಡುಬಂದಾವು. ಅಜೀರ್ಣ ಉದರ ಉಪದ್ರವಗಳು ನಿಮ್ಮನ್ನು ಕಾಡಲಿದೆ. ಆತ್ಮೀಕರ ಆಕಸ್ಮಿಕ ಭೇಟಿಯಿಂದ ಸಂತಸವಾದೀತು. ವಿಲಾಸೀ ಜೀವನದಿಂದ ಸಂತೃಪ್ತಿ ಸಿಗಲಿದೆ.

Advertisement

ಸಿಂಹ: ಮನೋಕಾಮನೆ ಪೂರೈಕೆಯಿಂದ ಮನಸ್ಸಿಗೆ ಸಮಾಧಾನ ದೊರೆಯಲಿದೆ. ಔದಾಸೀನ್ಯ ನಿರ್ಲಕ್ಷ್ಯದ ಮನೋಸ್ಥಿತಿಯು ಕಾಡಲಿದೆ. ದುರಸ್ತಿ ಕಾರ್ಯದ ನಿಮಿತ್ತ ಖರ್ಚು ವೆಚ್ಚ ಹೆಚ್ಚಾಗಲಿದೆ. ಮಾನಸಿಕ ಪ್ರಮಾದದಿಂದ ಅಶಾಂತಿ ತಲೆದೋರೀತು.

ಕನ್ಯಾ: ವಿರೋಧಿಗಳಿಂದ ನೆರವು ಪಡೆಯಬೇಕಾದ ಅಸಹಾಯಕತೆ ಕಂಡುಬಂದೀತು. ಗ್ರಹ ನಿರ್ಮಾಣಕ್ಕೆ ಅನುಕೂಲ ತಂದೀತು. ಚಿಂತನೆ ಹಾಗೂ ಕಾರ್ಯಗಳಲ್ಲಿ ವಿರೋಧಾಭಾಸ ಕಂಡುಬಂದೀತು. ಆತ್ಮೀಯರ ಆಗಮನದಿಂದ ಸಂತಸ.

ತುಲಾ: ಲಾಭ ಕಾರ್ಯದ ಯತ್ನದಲ್ಲಿ ಜಯಶೀಲರಾಗುವಿರಿ. ಶ್ರೀದೇವರ ಅನುಗ್ರಹಕ್ಕಾಗಿ ಪ್ರಾರ್ಥಿಸಿರಿ. ವೃತ್ತಿರಂಗದಲ್ಲಿ ಬಾಹ್ಯ ನೆರವು ಲಭ್ಯವಾಗಲಿದೆ. ಕೀಳರಿಮೆ, ದೌರ್ಬಲ್ಯ ಗಳಿಂದ ಚೇತರಿಸಿಕೊಳ್ಳಲಿರುವ ಸೂಚನೆಗಳು ಕಂಡುಬಂದೀತು.

ವೃಶ್ಚಿಕ: ಕುಟುಂಬದಲ್ಲಿ ಶುಭಮಂಗಲ ಕಾರ್ಯಕ್ಕೆ ಸಂಬಂಧಪಟ್ಟ ಚಟುವಟಿಕೆಗಳು ಕಂಡುಬರಲಿದೆ. ಅಚ್ಚರಿಯ ರೀತಿಯಲ್ಲಿ ಅಧಿಕಾರಿಗಳ ವಕ್ರದೃಷ್ಟಿಯಿಂದ ಪಾರಾಗುವಿರಿ. ಅನಾವಶ್ಯಕವಾಗಿ ಅಜಾಗ್ರತೆಯಿಂದ ಕಳಕೊಳ್ಳುವ ಪ್ರಸಂಗ.

ಧನು: ಅನಗತ್ಯವಾಗಿ ದುಂದುವೆಚ್ಚಗಳು ಕಂಡುಬರಲಿವೆ. ಮಾನಸಿಕವಾಗಿ ಕಿರಿಕಿರಿಯು ನಿಮ್ಮನ್ನು ಕಾಡಲಿದೆ. ಸ್ಥಾನದ ಉಳಿವಿಗಾಗಿ ಹೋರಾಟದ ಅನಿವಾರ್ಯತೆ ಕಂಡುಬರಲಿದೆ. ಶುಭ ಕಾರ್ಯದ ಮಾತುಕತೆ ಮುರಿದು ಬೀಳುವ ಪ್ರಸಂಗವು ಇದೆ.

ಮಕರ: ಲಾಭ ಕಾರ್ಯದ ಯತ್ನದಲ್ಲಿ ಜಯ ಲಭಿಸಲಿದೆ. ನಿರೀಕ್ಷಿತ ಮೂಲದಿಂದ ಧನಾಗಮನ ಸೂಚನೆ ತಂದೀತು. ನಿಮ್ಮ ಭಾವನೆಗೆ ನೋವು ಉಂಟಾಗುವ ಸನ್ನಿವೇಶಗಳು ಎದುರಾಗಲಿದೆ. ಅಸಮರ್ಥನೆಯಿಂದ ಮನೋಚಂಚಲತೆ ಕಾಡಲಿದೆ.

ಕುಂಭ: ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸುವುದು ಮುಖ್ಯವಾಗಿದೆ. ಅನಗತ್ಯ ವಿವಾದವೊಂದು ಎದುರಾಗಲಿರುವ ಸಾಧ್ಯತೆ ಕಂಡುಬರುತ್ತದೆ. ದೈಹಿಕ ಶ್ರಮದ ಕಾರ್ಯದ ದುಡುಕು ವರ್ತನೆಯಿಂದ ಮುಖಭಂಗ ಪ್ರಸಂಗ ಎದುರಾದೀತು.

ಮೀನ: ಬ್ಯಾಂಕ್‌, ವಿತ್ತಖಾತೆಗೆ ಸಂಬಂಧಪಟ್ಟ ಕಾರ್ಯದಲ್ಲಿ ಸಫ‌ಲತೆ ಕಾಣುವಿರಿ. ಮಕ್ಕಳ ಶಿಕ್ಷಣಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಶುಭವಾರ್ತೆಯನ್ನು ಕೇಳಲಿದ್ದೀರಿ. ಸೇವಕರಿಂದ ಇಷ್ಟವಿರೋಧಿ ವರ್ತನೆಗಳು ಕಂಡುಬರುವ ಲಕ್ಷಣವಿದೆ.

ಎನ್.ಎಸ್.ಭಟ್

Advertisement

Udayavani is now on Telegram. Click here to join our channel and stay updated with the latest news.

Next