Advertisement
ಮೇಷ: ಉದ್ಯೋಗ ರಂಗದಲ್ಲಿ ನಿಮ್ಮ ದುಡಿಮೆ ಸಲಹೆ, ಸೂಚನೆಗಳಿಗೆ ಭಂಗ ಬಂದೀತು. ಯೋಗ್ಯ ವಯಸ್ಕರಿಗೆ ಪರಿಶ್ರಮದಿಂದಲೇ ವೈವಾಹಿಕ ಯೋಗವು ಒದಗಿ ಬರಲಿದೆ. ಸಾಂಸಾರಿಕವಾಗಿ ಜೀವನದಲ್ಲಿ ಸಂಯಮ ವಹಿಸಿರಿ. ಶುಭವಿದೆ.
Related Articles
Advertisement
ಸಿಂಹ: ವಿದ್ಯಾರ್ಥಿಗಳ ಮನೋಕಾಮನೆಗಳು ಪೂರ್ಣಗೊಂಡಾವು. ಆದಾಯಕ್ಕಿಂತ ಖರ್ಚುಗಳೇ ಹೆಚ್ಚು ಕಂಡು ಬರುವುದು. ಶುಭಮಂಗಲ ಕಾರ್ಯನಿಮಿತ್ತ ಪ್ರಯಾಣವು ಒದಗಿ ಬರಲಿದೆ. ದಿನೇ ದಿನೇ ಅಭಿವೃದ್ಧಿ ಕಂಡುಬಂದೀತು.
ಕನ್ಯಾ: ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರವು ಒದಗಿ ಬಂದೀತು. ಹಿತಶತ್ರುಗಳ ಬಗ್ಗೆ ಜಾಗ್ರತೆ ಮಾಡಿರಿ. ನಿಮ್ಮ ಕೋಪ, ಹಠ, ಸಿಡುಕು ಸ್ವಲ್ಪ ಬಿಟ್ಟು ಮುಂದುವರಿದಲ್ಲಿ ಎಲ್ಲಾ ಹಾದಿಯು ಸುಗಮವಾಗಿ ತೆರೆದೀತು.
ತುಲಾ: ಆರ್ಥಿಕವಾಗಿ ಹಿನ್ನಡೆಯನ್ನು ಅನುಭವಿಸಲಿದ್ದೀರಿ. ಕಾರ್ಯಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ ಕಂಡು ಬರುವುದು. ಪ್ರೀತಿ, ವಿಶ್ವಾಸದಿಂದ ಇತರರ ಗಮನ ನಿಮ್ಮತ್ತ ಸೆಳೆಯಿರಿ. ಜೀವನವು ಅಸ್ತವ್ಯಸ್ತವಾದೀತು.
ವೃಶ್ಚಿಕ: ರಾಜಕೀಯದವರಿಗೆ ತಲೆಚಿಟ್ಟು ಹಿಡಿಯುವ ಪರಿಸ್ಥಿತಿಯು ಕಂಡುಬಂದೀತು. ಕೆಲವೊಂದು ಸಮಸ್ಯೆಗಳು ಕಂಡುಬಂದು ಬೇಸರವಾದೀತು. ಶತ್ರುಗಳ ಪ್ರಭಾವವು ಹೆಚ್ಚಾದೀತು. ಜಾಗ್ರತೆಯಿಂದ ಮುಂದುವರಿಯಿರಿ.
ಧನು: ಅನಿರೀಕ್ಷಿತವಾಗಿ ಅತಿಥಿಗಳು ಬಂದು ಅಚ್ಚರಿ ನೀಡಿಯಾರು. ಅವಿವಾಹಿತರ ವೈವಾಹಿಕ ಸಂಘಟನೆಗೆ ಪ್ರಚೋದನೆ ಲಭಿಸೀತು. ಆಕಸ್ಮಿಕ ಧನಾನುಕೂಲವಿದೆ. ಕೊಟ್ಟ ಸಾಲ ಮರಳಿ ಬಂದು ಸಂತೋಷ ಲಭಿಸಲಿದೆ.
ಮಕರ: ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಕಂಡು ಬಂದರೂ, ನಿಮ್ಮ ಕೆಲಸವು ನಿಧಾನವಾಗಿ ಸಾಗಲಿದೆ. ಸಾಂಸಾರಿಕವಾಗಿ ಆಂತರಿಕ ಸ್ಥಿತಿ-ಗತಿಗಳು ನಿರೀಕ್ಷಿತ ರೀತಿಯಲ್ಲಿ ಸಮಾಧಾನ ತಂದುಕೊಡಲಿದೆ.
ಕುಂಭ: ಕುಟುಂಬದಲ್ಲಿ ಹಲವು ತರಹದ ಎಡರುತೊಡರುಗಳು ಕಂಡುಬಂದರೂ, ಸನಿ¾ತ್ರರ ಸಹಕಾರದಿಂದ ಪ್ರಗತಿ ಹಾಗೂ ಸಮಾಧಾನ ದೊರೆಯುವುದು. ಆಗಾಗ ಕೆಲವೊಂದು ವಿಚಾರಗಳು ನಿಮ್ಮ ಮನಸ್ಸನ್ನು ಕೆಡಿಸಲಿದೆ.
ಮೀನ: ಮನಸ್ಸಿಗೆ ಸಮಾಧಾನವಿರದು. ಆಂತರಿಕ ಹಾಗೂ ಬಾಹ್ಯವಾಗಿ ಹಲವು ಗೊಂದಲದ ಗೂಡಾದೀತು. ನಿಮ್ಮ ಮನಸ್ಸು ಆದಷ್ಟು ಸ್ಥಿಮಿತದಲ್ಲಿಟ್ಟುಕೊಳ್ಳಿರಿ. ದೂರ ಸಂಚಾರದಿಂದ ನಿರೀಕ್ಷಿತ ಕಾರ್ಯಸಿದ್ಧಿಯಾಗಲಿದೆ.
ಎನ್.ಎಸ್. ಭಟ್