Advertisement
ಮೇಷ : ಔದ್ಯೋಗಿಕರಂಗದವರಿಗೆ ಒಳ್ಳೆಯ ಲಾಭಾಂಶವು ದೊರಕಲಿದೆ. ಅದನ್ನು ಸರಿಯಾಗಿ ನಿಭಾಯಿಸುವುದು ಅಗತ್ಯವಿದೆ. ಸಾಮಾಜಿಕವಾಗಿ ಗೌರವ ಘನತೆ ಇದ್ದರೂ ಮನಸ್ಸಿಗೆ ನೆಮ್ಮದಿ ಇರಲಾರದು. ಜಾಗ್ರತೆ.
Related Articles
Advertisement
ಸಿಂಹ : ಪಿತ್ತ, ಪ್ರಕೋಪ, ಅನಾರೋಗ್ಯವು ತೋರಿಬಂದು ಕಿರಿಕಿರಿ ಎನಿಸಲಿದೆ. ವ್ಯವಹಾರದಲ್ಲಿ ಅಭೀಷ್ಟವು ಸಿದ್ದಿಯಾಗಲಿದೆ. ನೂತನ ಕೆಲಸಕ್ಕೆ ಹಣ ತೊಡಗಿಸುವುದು ಬೇಡ. ಗಡಿಬಿಡಿ ಮಾಡದೆ ನಿಧಾನದಿಂದ ಮುನ್ನಡೆಯಿರಿ.
ಕನ್ಯಾ : ಪ್ರವಾಸ, ತೀರ್ಥಯಾತ್ರೆಗಳ ಸಂಭವವು ಕಂಡುಬಂದೀತು. ಕಚೇರಿ ಕೆಲಸದಲ್ಲಿ ಸಣ್ಣಪುಟ್ಟ ತಪ್ಪುಗಳು ನಡೆದು ಮನಸ್ತಾಪ, ಸ್ಥಾನ ಭ್ರಂಶಕ್ಕೂ ಎಡೆಮಾಡಲಿದೆ. ಕ್ರೀಡಾಜಗತ್ತಿನವರಿಗೆ ಸ್ಥಾನ, ಗೌರವ ದೊರಕೀತು.
ತುಲಾ : ಕಫ ದೋಷದಿಂದಲೇ, ಉದರ ವ್ಯಾಧಿ, ಅಜೀರ್ಣ ಉಪದ್ರವದಿಂದಲೋ ಆರೋಗ್ಯವು ಆಗಾಗ ಕೈಕೊಡಲಿದೆ. ಮಕ್ಕಳ ಉದಾಸೀನತೆಯಿಂದ ವಿದ್ಯೆಯಲ್ಲಿ ಕೊರತೆ ಕಾಣಿಸಲಿದೆ. ನಿಮಗೆ ಆದಾಯದಲ್ಲಿ ಲಾಭವಿದೆ.
ವೃಶ್ಚಿಕ : ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಯಶಸ್ಸು ಸಿಗಲಿದೆ. ಪಿತ್ತೋಷ್ಣದಿಂದ ಆರೋಗ್ಯವು ಕೊಂಚ ಹದಗೆಟ್ಟಿàತು. ಹಗಲಿರುಳು ದುಡಿತದ ಅನುಭವ ಹಾಗೂ ಆಯಾಸವು ಕಂಡುಬಂದೀತು. ಜಾಗ್ರತೆ ಇರಲಿ.
ಧನು : ಕೃಷಿ ಕಾರ್ಯದವರಿಗೆ ಹೆಚ್ಚಿನ ಭಾದಕವಿಲ್ಲ. ಜಲ ಪದಾರ್ಥದ ಮಾರಾಟಗಾರರು, ಸಾಗರೋದ್ಯಮಿಗಳು ಸರಿಯಾದ ಲಾಭ ಗಳಿಸಲಾರರು. ಕರಕುಶಲ, ಕಲೆ, ಕಟ್ಟಡ ಸಾಮಾಗ್ರಿ ಮಾರಾಟಗಾರರಿಗೆ ಉತ್ತಮವಾಗಿದೆ.
ಮಕರ: ದೂರದೂರಿಗೆ ಪ್ರಯಾಣವು ಕೂಡಿಬರಲಿದೆ. ವಿದೇಶ ಪ್ರಯಾಣದ ಸಾಧ್ಯತೆಯು ಕಂಡುಬರಬಹುದು. ಔಷದೋಪಚಾರ, ಚಿಕಿತ್ಸಾಲಯದ ದರ್ಶನಾದಿಗಳಿಂದ ಹಣವು ನೀರಿನಂತೆ ಖರ್ಚಾದೀತು. ಕಿರು ಪ್ರಯಾಣವಿದೆ.
ಕುಂಭ ; ಕೆಟ್ಟ ಚಾಳಿಯ ಗೆಳೆಯರ ಸಹವಾಸದಿಂದ ಕೀಳು ಮಟ್ಟದ ಗೀಳು ಸಂಭವಿಸಬಹುದು. ವಾದ. ವಿವಾದದಿಂದ ನ್ಯಾಯಾಲಯದ ದರ್ಶನವಾದೀತು. ಪ್ರಯಾಣದಿಂದ ಹಣವು ನೀರಿನಂತೆ ಖರ್ಚಾದೀತು.
ಮೀನ ; ಸದ್ಯ ಹಿರಿಯರು ಮಾಡಿದ ಪುಣ್ಯದ ಫಲವು ನಿಮಗೆ ದೊರಕಲಿದೆ. ಮನದನ್ನೆಯ ಮಾತು ನಿಮ್ಮನ್ನು ಕಾಪಾಡಲಿದೆ. ಅಧಿಕಾರಿ ವರ್ಗದಲ್ಲಿ ತಿಕ್ಕಾಟವಿದ್ದೀತು. ಖರ್ಚುವೆಚ್ಚಗಳ ಪಟ್ಟಿಯು ಬೆಳೆಯಲಿದೆ.
– ಎನ್.ಎಸ್. ಭಟ್