Advertisement

ದಿನಭವಿಷ್ಯ: ಈ ರಾಶಿಯವರು ಆಹಾರ ಸೇವನೆಯಲ್ಲಿ ಎಚ್ಚರ ವಹಿಸಿ

08:31 AM Aug 04, 2021 | Team Udayavani |

ಮೇಷ:  ಧೈರ್ಯ ಉತ್ಸಾಹದಿಂದ ಕೂಡಿದ ದಿನ. ಭೂಮಿ ವಾಹನಾದಿಗಳಿಂದ ನಿರೀಕ್ಷಿತ ಧನಲಾಭ. ಗುರು ಹಿರಿಯರ ಮಾರ್ಗದರ್ಶನ. ವ್ಯವಹಾರದಲ್ಲಿ ಅಧಿಕ ಶ್ರಮ. ನೂತನ ಮಿತ್ರರ ಸಮಾಗಮ. ದಾಂಪತ್ಯ ತೃಪ್ತಿದಾಯಕ.

Advertisement

ವೃಷಭ: ಉದ್ಯೋಗ ವ್ಯವಹಾರದಲ್ಲಿ ಜವಾಬ್ದಾರಿಯುತ ನಡೆಯಿಂದ ಪ್ರಗತಿ. ಆರೋಗ್ಯ ವೃದ್ಧಿ . ಅಭಿವೃದ್ಧಿದಾಯಕ ಧನಾರ್ಜನೆ. ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ. ಪಾಲುದಾರಿಕಾ ಚಟುವಟಿಕೆಯಲ್ಲಿ ಗೌರವ ಅಧಿಕಾರ ಪ್ರಾಪ್ತಿ.

ಮಿಥುನ:  ಜಲೋತ್ಪನ್ನ ವಸ್ತು, ಆಹಾರ ಉದ್ಯಮ ಪಾಲುದಾರಿಕಾ ವ್ಯವಹಾರ ಗಳಿಂದ ಅನುಕೂಲಕರ ಪರಿಸ್ಥಿತಿ. ನಿರೀಕ್ಷಿತ ಧನಾರ್ಜನೆ. ಉತ್ತಮ ವಾಕ್‌ ಚತುರತೆ. ಸಹೋದ್ಯೋಗಿಗಳಿಂದ ಸಹಕಾರ.

ಕನ್ಯಾ:  ಆತ್ಮೀಯರಲ್ಲಿ ತಾಳ್ಮೆಯಿಂದ ವ್ಯವಹರಿಸಿ ಜ್ಞಾನಾರ್ಜನೆಗೆ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಧನಾರ್ಜನೆಗೆ ಸರಿಸಮನಾದ ಖರ್ಚು.

ಕರ್ಕ:  ಅನಿರೀಕ್ಷಿತ ಗೌರವ ಪ್ರಾಪ್ತಿ. ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರ ಗಳಲ್ಲಿ ಧನಾಗಮ. ಧಾರ್ಮಿಕ ಕೆಲಸಗಳಲ್ಲಿ ಭಾಗಿ. ಸಾರ್ವಜನಿಕ ಸಂಪರ್ಕ ಕಾರ್ಯದಲ್ಲಿ ಶ್ರೇಯಸ್ಸು. ಮಕ್ಕಳು, ಸಂಸಾರದಿಂದ ತೃಪ್ತಿ.

Advertisement

ಸಿಂಹ:  ದೀರ್ಘ‌ ಪ್ರಯಾಣ. ವಿದೇಶ ಮೂಲ ವ್ಯವಹಾರದಲ್ಲಿ ಪ್ರಗತಿ. ಗೃಹೋಪಕರಣ ವಸ್ತುಗಳ ಸಂಗ್ರಹ. ನೂತನ ಉದ್ಯೋಗ ವ್ಯವಹಾರಕ್ಕೆ ಅವಕಾಶ. ಆಹಾರ ಸೇವನೆಯಲ್ಲಿ ಎಚ್ಚರ ವಹಿಸಿರಿ.

ಕನ್ಯಾ: ಆತ್ಮೀಯರಲ್ಲಿ ತಾಳ್ಮೆಯಿಂದ ವ್ಯವಹರಿಸಿ, ಜ್ಞಾನಾರ್ಜನೆಗೆ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಧನಾರ್ಜನೆಗೆ ಸರಿಸಮನಾದ ಖರ್ಚು.

ತುಲಾ: ಗೃಹ, ವಾಹನ, ಭೂಮಿ ವಿಚಾರದಲ್ಲಿ ಬದಲಾವಣೆ. ಅವಿವಾಹಿತರಿಗೆ ವಿವಾಹ ಭಾಗ್ಯ. ಉದ್ಯೋಗದಲ್ಲಿ ಹೆಚ್ಚಿನ ಶ್ರಮ. ನಿರೀಕ್ಷಿತ ಸ್ಥಾನ ಲಾಭ. ಉತ್ತಮ ಆರೋಗ್ಯ. ಗುರುಹಿರಿಯರಿಂದ ಸಂತೋಷದ ವಾರ್ತೆ.

ವೃಶ್ಚಿಕ: ಗುರುಹಿರಿಯರ ಸಹಕಾರ ಮಾರ್ಗದರ್ಶನ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಇತ್ಯಾದಿ ಶುಭಫ‌ಲ. ಅಧಿಕ ಧನಾರ್ಜನೆಗೆ ಅವಕಾಶ. ಉದ್ಯೋಗ ವ್ಯವಹಾರದಲ್ಲಿ ಹೆಚ್ಚಿನ ಗಮನ ಹರಿಸಿ.

ಧನು:  ಸಣ್ಣ ಪ್ರಯಾಣದಿಂದ ನಿರೀಕ್ಷಿತ ಸ್ಥಾನ ಸುಖ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ . ಆರೋಗ್ಯದಲ್ಲಿ ಸುಧಾರಣೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮದಿಂದ ಕಾರ್ಯ ಸಫ‌ಲತೆ. ಅಧಿಕ ಧನಾರ್ಜನೆ

ಮಕರ: ಉತ್ತಮ ಧನಾಗಮವಿದ್ದರೂ ಖರ್ಚಿಗೆ ಹಲವು ದಾರಿ. ಆರೋಗ್ಯದಲ್ಲಿ ಸುಧಾರಣೆ. ಮಾತಿನಲ್ಲಿ ತಾಳ್ಮೆಯಿಂದ ಸಫ‌ಲತೆ. ದಾಂಪತ್ಯ ಸುಖ ವೃದ್ಧಿ. ಹಿರಿಯರ ಆರೋಗ್ಯ ಗಮನಿಸಿ. ಪಾಲುದಾರಿಕೆ ವ್ಯವಹಾರದಲ್ಲಿ ಪ್ರಗತಿ.

ಕುಂಭ: ದೀರ್ಘ‌ ಪ್ರಯಾಣದಿಂದ ನಿರೀಕ್ಷಿತ ಸುಖ. ಆಸ್ತಿ ವಿಚಾರಗಳಲ್ಲಿ ಎಚ್ಚರಿಕೆ ನಡೆಯಿಂದ ಪ್ರಗತಿ. ಸಾಂಸಾರಿಕ ವಿಚಾರದಲ್ಲಿ ತಾಳ್ಮೆ ಇರಲಿ. ಹಣಕಾಸಿನ ವಿಚಾರದಲ್ಲಿ ಪ್ರಗತಿ.

ಮೀನ: ಆರೋಗ್ಯ ಗಮನಿಸಿ. ದಾಂಪತ್ಯ ತೃಪ್ತಿದಾಯಕ. ಮಕ್ಕಳಿಂದ ಸಂತೋಷ ವೃದ್ಧಿ . ವಿದ್ಯಾರ್ಥಿಗಳಿಗೆ ವಿಫ‌ುಲ ಅವಕಾಶ. ಉದ್ಯೋಗಸ್ಥರಿಗೆ ಅಧಿಕ ಶ್ರಮದಿಂದ ಧನಾರ್ಜನೆ.

Advertisement

Udayavani is now on Telegram. Click here to join our channel and stay updated with the latest news.

Next