Advertisement

ಇಂದಿನ ಗ್ರಹಬಲ :ವೃತ್ತಿರಂಗದಲ್ಲಿ ಯಾರದೋ ತಪ್ಪಿಗೆ ದಂಡ ತೆರಬೇಕಾದ ಪ್ರಸಂಗ ಕಂಡುಬಂದೀತು!

07:39 AM Apr 03, 2021 | Team Udayavani |

03-04-2021

Advertisement

ಮೇಷ: ಸಾಮಾಜಿಕರಂಗದಲ್ಲಿ ದುಷ್ಟ ವೈರಿಗಳು ಸಾಧುತನದ ಸೋಗು ಹಾಕಿ ಎಡೆಬಿಡದೆ ಪೀಡೆ ನೀಡಿಯಾರು. ಜಾಗ್ರತೆ ವಹಿಸಿರಿ. ಅನಂತರ ಪಶ್ಚಾತ್ತಾಪಕ್ಕೆ ಒಳಗಾಗದಿರಿ. ಸಾಂಸಾರಿಕವಾಗಿ ಸುಖದುಃಖ ಸಮ್ಮಿಶ್ರ ಫ‌ಲ ತೋರಲಿದೆ.

ವೃಷಭ: ವ್ಯಾಪಾರ, ವ್ಯವಹಾರಗಳಲ್ಲಿ ಲಾಭಾಂಶ ಕಡಿಮೆಯಾದರೂ ನಷ್ಟವಾಗಲಾರದು. ವೃತ್ತಿರಂಗದಲ್ಲಿ ಉನ್ನತಿ ತೋರಿ ಬಂದರೂ ವಿಘ್ನ ಭೀತಿ ಇದೆ. ಒಳಗೊಳಗೇ ಕತ್ತಿ ಮಸೆಯುವ ವೈರಿಗಳು ನಿಮ್ಮ ಅಭಿವೃದ್ಧಿಯಲ್ಲಿ ಅಡ್ಡ ಕಾಲಿಟ್ಟರು.ಜಾಗ್ರತೆ.

ಮಿಥುನ: ವಿದ್ಯಾರ್ಥಿಗಳ ಪ್ರಯತ್ನಬಲಕ್ಕೆ ಉನ್ನತ ವಿದ್ಯಾಭ್ಯಾಸದ ಅವಕಾಶಗಳು ಕಂಡುಬಂದಾವು. ದೇಹಾರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು. ಹಾಗೇ ಹಣಕಾಸಿನ ವಿಚಾರದಲ್ಲಿ ಮನಸ್ತಾಪವಾಗದಂತೆ ಜಾಗ್ರತೆ ವಹಿಸಿದರೆ ಒಳ್ಳೆಯದು.

ಕರ್ಕ: ಹಣಕಾಸಿನ ವಿಚಾರದಲ್ಲಿ ಮನಸ್ತಾಪಕ್ಕೆ ಕಾರಣವಾಗದಂತೆ ಜಾಗ್ರತೆ ಮಾಡಿರಿ. ವಿವಾಹಾಪೇಕ್ಷಿಗಳಿಗೆ ವೈವಾಹಿಕ ಸಂಬಂಧಗಳು ಹುಡುಕಿ ಬಂದಾವು. ಉದ್ಯೋಗದಲ್ಲಿ ಆರ್ಥಿಕವಾಗಿ ಅಡಚಣೆಗಳು ಎದುರಾಗಲಿದೆ.

Advertisement

ಸಿಂಹ: ನಿಮ್ಮ ಆತ್ಮವಿಶ್ವಾಸ, ಧೈರ್ಯಬಲದಿಂದ ಮುನ್ನಡೆಯಲು ನಿಮಗೆ ಸಾಧ್ಯವಿದೆ. ಸಾಂಸಾರಿಕವಾಗಿ ಕೂಡಾ ಅಸಮಾಧಾನದ ವಾತಾವರಣದಿಂದ ಕಿರಿಕಿರಿಯೆನಿಸಲಿದೆ. ಸ್ಥಳ, ನಿವೇಶನಕ್ಕೆ ಸಂಬಂಧಿಸಿ ದಂತೆ ಆರ್ಥಿಕವಾಗಿ ಋಣಭಾದೆ ಕಂಡು ಬರಲಿದೆ.

ಕನ್ಯಾ: ಮನೆಮಂದಿಗೆಲ್ಲಾ ನಿಮ್ಮ ಸಿಡುಕುತನ ವರ್ತನೆಯ ಪರಿಣಾಮ ಬೀರಲಿದೆ. ಮಹತ್ಕಾರ್ಯ ಸಾಧನೆ ಕೈಖಾಲಿಯಾಗಲಿದೆ. ವೃತ್ತಿರಂಗದಲ್ಲಿ ಯಾರದೋ ತಪ್ಪಿಗೆ ದಂಡ ತೆರಬೇಕಾದ ಪ್ರಸಂಗ ಕಂಡುಬಂದೀತು. ಆಲೋಚಿಸಿ ಮುನ್ನಡೆಯಿರಿ.

ತುಲಾ:ಉದ್ಯೋಗದಲ್ಲಿ ನಿಮ್ಮ ಭಡ್ತಿಯ ವಿಚಾರ ಹಿಂದೆ ಹೋದೀತು ಆರೋಗ್ಯದ ದೃಷ್ಟಿಯಲ್ಲಿ ಹೆಚ್ಚಿನ ಗಮನವಿರಲಿ. ವ್ಯಾಪಾರ, ವ್ಯವಹಾರಗಳಲ್ಲಿ ಆರ್ಥಿಕವಾಗಿ ಕಷ್ಟನಷ್ಟಗಳು ಕಂಡು ಬರಲಿದೆ. ಅವಿವಾಹಿತರ ವಿವಾಹಕ್ಕೆ ಅಡ್ಡಿ ಆತಂಕ ಎದುರಾಗಲಿದೆ.

ವೃಶ್ಚಿಕ: ಹಿರಿಯರ ಕ್ಲೇಶದಿಂದಾಗಿ ದುಃಖವು ಕಂಡುಬಂದೀತು. ದಾಯಾದಿಗಳ ವಿವಾದ ನ್ಯಾಯಾಲಯದ ಮೆಟ್ಟಿಲು ಏರಲಿದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಖರ್ಚುವೆಚ್ಚ ತಲೆದೋರಲಿದೆ. ನಿರೀಕ್ಷಿತ ಕೆಲಸ ಕಾರ್ಯಗಳು ನಿಧಾನವಾಗಿ ಕೈಗೂಡಲಿದೆ.

ಧನು: ಉದ್ಯೋಗಿಗಳಿಗೆ ಕೈತುಂಬಾ ಕೆಲಸ ಇದ್ದೀತು. ವಿತ್ತಖಾತೆಯ ಉದ್ಯೋಗಿಗಳಿಗೆ ಮುಂಭಡ್ತಿಯ ಅವಕಾಶ ವಿರುತ್ತದೆ. ಮನೆಯಲ್ಲಿ ಶುಭಮಂಗಲ ಕಾರ್ಯಕ್ಕಾಗಿ ಓಡಾಟ ಒದಗಿ ಬರಲಿದೆ. ಈ ಸಮಯದಲ್ಲಿ ಬಂದ ಅವಕಾಶ ಸದುಪಯೋಗಿಸಿರಿ.

ಮಕರ: ಉತ್ತಮ ನಡತೆ, ಸದಾಚಾರ, ದೃಢ ಮನಸ್ಸಿನಿಂದ ಮುಂದುವರಿದಲ್ಲಿ ನಿಮ್ಮ ಕೈ ಹಿಡಿದ ಕಾರ್ಯಸಫ‌ಲ ವಾಗಲಿದೆ. ಯಾವುದೇ ಕಾರ್ಯಗಳನ್ನು ನೋಡುವುದಾದರೆ ಯೋಚಿಸಿ, ಚಿಂತಿಸಿ ಮುನ್ನಡೆಯುವುದು ಅಗತ್ಯವಾಗಿದೆ. ಜಾಗ್ರತೆ ಇರಲಿ.

ಕುಂಭ: ಆರ್ಥಿಕವಾಗಿ ಅಧಿಕ ರೂಪದಲ್ಲಿ ಖರ್ಚುಗಳು ಬರುವುದರಿಂದ ಆದಷ್ಟು ಜಾಗ್ರತೆ ಮಾಡಬೇಕಾಗುತ್ತದೆ. ಈ ಮಧ್ಯೆ ಆಕರ್ಷಕವಾದ ದುಡಿಮೆಗೆ, ನಿಮ್ಮ ಪ್ರಯತ್ನಬಲಕ್ಕೆ , ಕ್ರಿಯಾಶೀಲತೆ ಕೂಡ ಪೂರಕವಾಗಿದೆ. ಅದಮ್ಯ ಉತ್ಸಾಹ ನಿಮ್ಮದು.

ಮೀನ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗಾಗಿ ದೂರ ಪ್ರಯಾಣವು ತೋರಿ ಬರುವುದು. ಅಜೀರ್ಣದ ಉಪದ್ರವ, ಬೆನ್ನುನೋವಿನ ಸಮಸ್ಯೆಗಳು ಕಂಡುಬರಲಿದೆ. ವ್ಯಾಪಾರ, ವ್ಯವಹಾರದಲ್ಲಿ ಚೇತರಿಕೆ ಇದ್ದರೂ ಸ್ಪರ್ಧಾತ್ಮಕ ರೀತಿ ಆತಂಕ ತರಲಿದೆ.

 

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next