Advertisement

Horoscope: ವೃತ್ತಿರಂಗದಲ್ಲಿ ಮುನ್ನಡೆ. ಸ್ವತಂತ್ರ ಉದ್ಯಮಿಗಳಿಗೆ ಎದುರಾಳಿಗಳಿಂದ ಸ್ಪರ್ಧೆ

07:39 AM Jun 08, 2024 | Team Udayavani |

ಮೇಷ: ಆರೋಗ್ಯ ಸ್ಥಿರ. ಉದ್ಯೋಗಸ್ಥರು ವ್ಯವಹಾರಸ್ಥರಿಗೆ ವಿಪುಲ ಅವಕಾಶ. ಹಲವು ಕಾಲದಿಂದ ಕಾಡುತ್ತಿರುವ ಜಟಿಲ ಸಮಸ್ಯೆಗೆ ಪರಿಹಾರ. ಶುಭ ಕಾರ್ಯಕ್ಕೊದಗಿದ ವಿಘ್ನ ದೂರ. ಗೃಹಿಣಿಯರಿಗೆ, ಮಕ್ಕಳಿಗೆ ಆನಂದದ ದಿನ.

Advertisement

ವೃಷಭ: ವೃತ್ತಿರಂಗದಲ್ಲಿ ಮುನ್ನಡೆ. ಸ್ವತಂತ್ರ ಉದ್ಯಮಿಗಳಿಗೆ ಎದುರಾಳಿಗಳಿಂದ ಸ್ಪರ್ಧೆ. ಗುರುಸಮಾನರ ಅಕಸ್ಮಾತ್‌ ಭೇಟಿ. ಸಂಗಾತಿಯ ಮನೋಗತವನ್ನು ಗೌರವಿಸಿ ನಡೆದುಕೊಂಡರೆ ಕ್ಷೇಮ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

ಮಿಥುನ: ಗಣೇಶ, ದುರ್ಗೆಯರ ಆರಾಧನೆ ಯಿಂದ ವಿಘ್ನ ನಿವಾರಣೆ. ಶುಭ ಕಾರ್ಯ ನಡೆಸುವ ಬಗ್ಗೆ ಚಿಂತನೆ. ಹಿರಿಯರ ಆರೋಗ್ಯದತ್ತ ಗಮನವಿರಲಿ. ಉತ್ತರ ದಿಕ್ಕಿನಿಂದ ಶುಭ ಸಮಾಚಾರ ನಿರೀಕ್ಷೆ. ಗೃಹಿಣಿಯರಿಗೆ ಸಮಾಧಾನ.

ಕರ್ಕಾಟಕ: ನಾಮಸ್ಮರಣೆಯ ಮೂಲಕ ಖನ್ನತೆಯನ್ನು ತೊಲಗಿಸಿ. ವೈವಾಹಿಕ ಜೀವನ ದಲ್ಲಿ ಸಂತೃಪ್ತಿ. ಉದ್ಯೋಗ, ವ್ಯವಹಾರದಲ್ಲಿ ಯಶಸ್ಸಿನತ್ತ ದಾಪುಗಾಲು. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಆನಂದ.

ಸಿಂಹ: ಕಾರ್ಯತತ್ಪರರಿಗೆ ಶ್ಲಾಘನೆ. ಹೊಸ ಅವಕಾಶಗಳ ಅನ್ವೇಷಣೆ. ಗೆಳೆಯರಿಂದ ಸಹಕಾರ. ಅನಿರೀಕ್ಷಿತ ಧನಾಗಮ. ಗುರುಹಿರಿಯರ ಮಾರ್ಗದರ್ಶನದಿಂದ ಕಾರ್ಯ ಯಶಸ್ವಿ. ವ್ಯವಹಾರ ಸಂಬಂಧ ಸಣ್ಣ ಪ್ರಯಾಣ ಸಂಭವ.

Advertisement

ಕನ್ಯಾ: ಆವಶ್ಯಕತೆಗೆ ಸರಿಯಾಗಿ ಧನಾಗಮ. ದೂರದಿಂದ ಶುಭವಾರ್ತೆ. ವಾಹನ ಖರೀದಿ ಯೋಜನೆ ಮುನ್ನಡೆ. ದ್ರವ ಪದಾರ್ಥ ವ್ಯಾಪಾರಿಗಳಿಗೆ ಲಾಭ. ಹಿರಿಯರ ಮತ್ತು ಗೃಹಿಣಿಯರ ಆರೋಗ್ಯ ಗಮನಿಸಿ. ವರ- ವಧು ಅನ್ವೇಷಣೆಯಲ್ಲಿ ಪ್ರಗತಿ.

ತುಲಾ: ಚಿತ್ತ ಚಾಂಚಲ್ಯಕ್ಕೆ ಎಡೆಗೊಡದಿರಿ. ಪತಿ- ಪತ್ನಿಯರೊಳಗೆ ಪರಸ್ಪರ ಸಹಾಯ. ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ.ಗುರುಹಿರಿಯರ ಮಾರ್ಗದರ್ಶನ ಲಭ್ಯ ಮಕ್ಕಳ ಪ್ರಗತಿಯಿಂದ ಮನೆಯಲ್ಲಿ ಸಂತಸ.

ವೃಶ್ಚಿಕ: ಸತ್ಕರ್ಮಗಳ ಫ‌ಲ ಲಭಿಸುವ ಸಮಯ. ಹಿರಿಯರಿಗೆ ಆರೋಗ್ಯ ಉತ್ತಮ. ತಾಳ್ಮೆಯಿಂದ ಕಾರ್ಯದಲ್ಲಿ ಯಶಸ್ಸು. ದಕ್ಷಿಣ ದಿಕ್ಕಿಗೆ ಪಯಣ ಸಂಭವ. ಗೃಹಿಣಿಯರಿಗೆ, ಮಕ್ಕಳಿಗೆ ಶುಭ. ನಿರೀಕ್ಷಿತ ಸಮಯದಲ್ಲಿ ಧನಾಗಮನದಿಂದ ಸಂತಸ.

ಧನು: ಸಮಾಧಾನದ ವರ್ತನೆಯಿಂದ ಸಕಲ ಕಾರ್ಯಸಿದ್ಧಿ. ವಸ್ತ್ರೋದ್ಯಮಿಗಳಿಗೆ ಲಾಭ. ಉದ್ಯೋಗಸ್ಥರಿಗೆ ಮಂದ ಗತಿಯಲ್ಲಿ ಮುನ್ನಡೆ. ವಿವಾಹ ಮಾತುಕತೆ ಯಶಸ್ವಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಬಂಧುಗಳೊಂದಿಗೆ ಉತ್ತಮ ಸಂಬಂಧ.

ಮಕರ: ಅಭಿಪ್ರಾಯ ವ್ಯಕ್ತಪಡಿಸಲು ಆತುರ ಬೇಡ. ಉದ್ಯೋಗ, ವ್ಯವಹಾರ ಪ್ರಗತಿ. ಸಾಗರೋತ್ಪನ್ನ ವ್ಯಾಪಾರಿಗಳಿಗೆ ಹೇರಳ ಲಾಭ. ಅಧ್ಯಾತ್ಮ, ದೇವತಾರ್ಚನೆಯಲ್ಲಿ ಆಸಕ್ತಿ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಶುಭ.

ಕುಂಭ: ಸೇವಾ ಕಾರ್ಯಗಳಲ್ಲಿ ಆಸಕ್ತಿ ಉದ್ಯೋಗಸ್ಥರಿಗೆ ಹು¨ªೆಯಲ್ಲಿ ಪದೋನ್ನತಿ ಸಂಭವ. ಗೃಹಿಣಿಯರಿಗೆ ದ್ರವ್ಯಲಾಭ. ಉನ್ನತ ವ್ಯಾಸಂಗಾಸಕ್ತರಿಗೆ ಅನುಕೂಲದ ಸನ್ನಿವೇಶ. ಹಿರಿಯ ರಿಗೆ, ಮಕ್ಕಳಿಗೆ ಸಂತಸದ ವಾತಾವರಣ.

ಮೀನ: ದೂರದ ಸ್ಥಳಕ್ಕೆ ಭೇಟಿ ಸಂಭವ. ಹೊಸ ಕಾರ್ಯಾರಂಭಕ್ಕೆ ವಿಘ್ನ. ಹಳೆಯ ವಿವಾದ ಪರಿಹಾರ. ಕೃಷ್ಯುತ್ಪನ್ನಗಳಿಂದ ಲಾಭ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಮುತುವರ್ಜಿ ವಹಿಸಿ. ವಾಹನ ಸಂಬಂಧಿ ವ್ಯವಹಾರದಲ್ಲಿ ಲಾಭ. ಕುಲದೇವರ ಸನ್ನಿಧಾನಕ್ಕೆ ಭೇಟಿ ಸಂಭವ.

Advertisement

Udayavani is now on Telegram. Click here to join our channel and stay updated with the latest news.

Next