Advertisement

Daily horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಶುಭವಾರ್ತೆ ಕೇಳಿ ಬರಲಿದೆ

06:53 PM Aug 16, 2023 | Suhan S |

ಮೇಷ: ಗುರುವನುಗ್ರಹ ಪ್ರಾಪ್ತಿ. ಆರೋಗ್ಯದಲ್ಲಿ ಸುಧಾರಣೆ. ಉದ್ಯೋಗದಲ್ಲಿ ಪ್ರಗತಿ ತೃಪ್ತಿಕರ. ಸತಿಪತಿಗಳಲ್ಲಿ ಸಾಮರಸ್ಯ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಅಧ್ಯಯನದಿಂದ ಯಶಸ್ಸು. ಎಣಿಸಿದ್ದಕ್ಕಿಂತ ಸುಲಭವಾಗಿ ಕಾರ್ಯ ಸಾಧನೆ. ಅತಿಥಿ ಸತ್ಕಾರ ಯೋಗ.

Advertisement

ವೃಷಭ: ಸಹೋದ್ಯೋಗಿಗಳ ಸಹಕಾರದಿಂದ  ಕೆಲಸದಲ್ಲಿ ಮುನ್ನಡೆ. ಸಣ್ಣ ಪ್ರಯಾಣ  ಸಂಭವ.ಸಂಗಾತಿಯ ಆರೋಗ್ಯ ಗಮನಿಸಿ. ಹಿರಿಯರ ಆರೋಗ್ಯ ವೃದ್ಧಿ.ಮಕ್ಕಳಿಂದ ಸಂತೋಷ. ಅನಿರೀಕ್ಷಿತ ಶುಭವಾರ್ತೆ. ಪೂರ್ವ ದಿಕ್ಕಿನತ್ತ  ಪಯಣ. ಆರೋಗ್ಯ ಗಮನಿಸಿ.

ಮಿಥುನ: ಅಪರೂಪದಲ್ಲಿ ಒದಗಿರುವ ಅವಕಾಶ ಕೈತಪ್ಪಿ ಹೋಗದಂತೆ ನೋಡಿಕೊಳ್ಳಿ.ಬಂಧುಗಳ ಆಗಮನ.ಅವಿವಾಹಿತರಿಗೆ ವಿವಾಹ ಯೋಗ.ಆಪ್ತಸಲಹೆಯಿಂದ ಧೈರ್ಯ. ಸಂಸಾರದಲ್ಲಿ ನೆಮ್ಮದಿ. ಪ್ರಶಂಸೆಗೆ ಸೋಲದೆ ಕಾರ್ಯದಲ್ಲಿ  ಮಗ್ನರಾಗಿರಿ.

ಕರ್ಕ: ದ್ವೇಷ ಬಿಟ್ಟು ಪ್ರೀತಿ ತೋರುವುದರಿಂದ ಉದ್ಯೋಗ, ವ್ಯವಹಾರ ರಂಗದಲ್ಲಿ ಅನುಕೂಲ. ಪೂರ್ವದಿಕ್ಕಿನಿಂದ ಶುಭವಾರ್ತೆ. ಹಳೆಯ ಮಿತ್ರರೊಂದಿಗೆ ಸಮಾಗಮ. ಬಂಧುಗಳ ಸಹಕಾರ ಮನೆಯಲ್ಲಿ ಹರ್ಷ.  ಹಳೆಯ ಬಂಧುಮಿತ್ರರ ಭೇಟಿ.

ಸಿಂಹ: ನಿಮ್ಮ ಧೈರ್ಯವೇ ನಿಮ್ಮ ಅಸ್ತ್ರ. ಉದ್ಯೋಗ, ವ್ಯವಹಾರದಲ್ಲಿ ಯಶಸ್ಸು. ಸೋದರಿಯ ಕಡೆಯವರ ಆಗಮನ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ. ವಿದ್ಯಾರ್ಥಿಗಳಿಗೆ ಶುಭ.

Advertisement

ಕನ್ಯಾ: ವ್ಯವಹಾರದಲ್ಲಿ ದಾಕ್ಷಿಣ್ಯಕ್ಕೆ ಒಳಗಾಗಬೇಡಿ.ಹೊಸ ಉದ್ಯಮಕ್ಕೆ ಕೈಹಾಕುವುದನ್ನು ಮುಂದೂಡಿ.ಸಾಲ ಮಾಡದಿರಿ. ದೂರ ಪ್ರಯಾಣದ ಯೋಜನೆ. ದೇವತಾ ಸ್ಥಳಗಳಿಗೆ ಭೇಟಿ.

ತುಲಾ: ಸ್ಥಿರ ಮನಸ್ಸಿನಿಂದ ಕಾರ್ಯರಂಗಕ್ಕೆ ಇಳಿಯಿರಿ. ಹಿತಶತ್ರುಗಳನ್ನು ದೂರವಿಡಿ.ಬಂಧುವರ್ಗದಿಂದ ಸಹಾಯ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ . ತಕ್ಕಡಿಯಂತೆ  ಏರುಪೇರಾಗಿ ತೂಗುವ ಮನಸ್ಸುÕ.

ವೃಶ್ಚಿಕ: ಸೇಡು ತೀರಿಸುವ ಯೋಚನೆ ಬಿಡಿ. ಕಾರ್ಯಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಅನುಕೂಲದ ವಾತಾವರಣ. ಹತ್ತಿರದ ಪ್ರಯಾಣ ಸಂಭವ.ಹಿರಿಯರ,ಸಂಗಾತಿಯ ಆರೋಗ್ಯ ಸುಧಾರಣೆ.ಗೃಹಾಲಂಕಾರದಲ್ಲಿ ಆಸಕ್ತಿ.

ಧನು: ಹೊಂದಾಣಿಕೆಯಿಂದ ಕಾರ್ಯಸಿದ್ಧಿ. ಆರೋಗ್ಯದ ಕಡೆಗೆ ಗಮನ ಇರಲಿ. ಅನಿರೀಕ್ಷಿತ ಧನಾಗಮ. ಹಳೆಯ ವಸ್ತುಗಳ ವ್ಯಾಪಾರದಲ್ಲಿ ಲಾಭ.ಮನೆಯಲ್ಲಿ ನೆಮ್ಮದಿಯ ವಾತಾವರಣ.ಬಿಲ್ಲಿನಂತೆ  ಬಾಗಿದರೂ ಸ್ವಾಭಿಮಾನ ಕಾಯ್ದುಕೊಳ್ಳಿ.

ಮಕರ: ಸಣ್ಣ ಲಾಭ ದಿಂದ ತೃಪ್ತರಾಗಿರಿ. ಕಾರ್ಯ ರಂಗದಲ್ಲಿ ಯಶಸ್ಸು.ಸಹೋದ್ಯೋಗಿ ಗಳೊಂದಿಗೆ ಹೊಂದಾಣಿಕೆಯಿಂದ   ಸ್ನೇಹಲಾಭ.ಗುರುಹಿರಿಯರ ಸಲಹೆಗೆ ಮನ್ನಣೆ ನೀಡುವುದರಿಂದ ವಿಘ್ನ ದೂರ.ಶುಭವಾರ್ತೆ  ನಿರೀಕ್ಷಿಸಿ .

ಕುಂಭ: ಸದುದ್ದೇಶಕ್ಕೆ ಧನ ವ್ಯಯ. ಪರೋಪಕಾರದಿಂದ ತೃಪ್ತಿ.ದೇವತಾ ಸ್ಥಳ ಸಂದರ್ಶನ.  ದೀರ್ಘ‌ ಕಾಲದ ಕೋರಿಕೆ ಈಡೇರಿಕೆ ಸಂಭವ.ವಿದ್ಯಾರ್ಥಿಗಳಿಗೆ ಮಧ್ಯಮ ಫ‌ಲ.ಆಸ್ತಿ ರಕ್ಷಣೆ, ವಿಸ್ತರಣೆಗೆ ಹೊಸ ಯೋಜನೆ.

ಮೀನ: ಗೃಹಿಣಿಯರಿಗೆ ಒಳ್ಳೆಯ ದಿನ.ವಸ್ತ್ರಾಭರಣ ಖರೀದಿಗೆ ಶುಭಕಾಲ.ಪುರುಷರಿಗೆ ಉದ್ಯೋಗ ರಂಗದಲ್ಲಿ ಆದರ ಪ್ರಾಪ್ತಿ. ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರ. ಮಕ್ಕಳ  ಆರೋಗ್ಯ ವೃದ್ಧಿ.

Advertisement

Udayavani is now on Telegram. Click here to join our channel and stay updated with the latest news.

Next