Advertisement

Horoscope: ಈ ರಾಶಿ ಅವರಿಂದು ಮಾನಸಿಕ ಸಂತೋಷಕ್ಕೆ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಿ

07:24 AM Aug 09, 2023 | Suhan S |

ಮೇಷ: ಆರೋಗ್ಯದಲ್ಲಿ ಸುಧಾರಣೆ ಆದರೂ ದೇಹಾಯಾಸ ಸಂಭವ. ಅಧಿಕ ಒತ್ತಡವಿಲ್ಲದ ಕೆಲಸ ನಿರ್ವಹಿಸಿ. ವಿದ್ಯಾರ್ಥಿಗಳಿಗೆ ಅಭಿವೃದ್ಧಿ. ಗೃಹದಲ್ಲಿ ಸಂತಸದ ವಾತಾವರಣ. ಸಹೋದ್ಯೋಗಿಗಳ ಸಹಕಾರ. ಹಿರಿಯರ ಗುರುಗಳ ಮಾರ್ಗದರ್ಶನ ಲಾಭ.

Advertisement

ವೃಷಭ: ಉದ್ಯೋಗ ವ್ಯವಹಾರಗಳಿಗೆ ಮಗ್ನರಾಗುವರಿ. ಹಿರಿಯರ, ಮೇಲಧಿಕಾರಿ ಗಳ ಸಹಾಯ, ಮಾರ್ಗದರ್ಶನದಿಂದ ಪ್ರಗತಿ. ಉತ್ತಮ ಧನಾರ್ಜನೆ. ಹೊಸ ಪಾಲುಗಾರಿಕೆ ವ್ಯವಹಾರಗಳಿಗೆ ಚಾಲನೆ.ದಾಂಪತ್ಯದಲ್ಲಿ ತೃಪ್ತಿ .

ಮಿಥುನ: ಉದ್ಯೋಗ ವ್ಯವಹಾರ ನಿಮಿತ್ತ ಪ್ರಯಾಣ. ಕಾರ್ಯ ಸಾಧನೆ. ನಿರೀಕ್ಷಿತ ಧನಾಗಮನ. ಪರರ ಸಹಾಯದಿಂದ ಸ್ಥಾನಮಾನದಲ್ಲಿ ಪ್ರಗತಿ. ಅತಿ ಮಾತುಗಾರಿಗೆಯಿಂದ ಧಕ್ಕೆ ಸಂಭವ. ಗೃಹೋಪಯೋಗಿ ವಸ್ತುಗಳ ಖರೀದಿ.

ಕರ್ಕ:  ಸರಿಯಾದ ಯೋಜನೆ, ಆಲೋಚನೆ ಯಿಂದ ಕಾರ್ಯನಿರ್ವಹಿಸುವುದರಿಂದ ಯೋಗ್ಯ ಸ್ಥಾನ ಗೌರವ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ಹೊಸ ಉದ್ಯೋಗ ವ್ಯವಹಾರಗಳಲ್ಲಿ ಅನು ಕೂಲಕರ ಪರಿಸ್ಥಿತಿ. ಹೊಸ ಉದ್ಯೋಗದಲ್ಲಿ ಅವಕಾಶ.

ಸಿಂಹ: ದೂರ ಪ್ರಯಾಣ ಸಂಭವ. ವಿದೇಶಿ ವ್ಯವಹಾರಗಳಲ್ಲಿ ಆಸಕ್ತಿ. ಜನಸಂಪರ್ಕ ಹಲವು ಬಗೆ ಹೂಡಿಕೆಗಳಿಗೆ ಚಿಂತನೆ. ಭೂಮಿ ಆಸ್ತಿ ವಿಚಾರಗಳಲ್ಲಿ ಪ್ರಗತಿ. ಅವಿವಾಹಿತರಿಗೆ ಯೋಗ್ಯ ನೆಂಟಸ್ಥಿಕೆ ಸಂಭವ. ಆಸ್ತಿ ಸಂಚಯನದ ನೂತನ ಮಿತ್ರರ ಭೇಟಿ.

Advertisement

ಕನ್ಯಾ: ಅನಿರೀಕ್ಷಿತ ಧನಾಗಮನ. ಯೋಗ್ಯ ಮಾತುಗಾರಿಕೆಯಿಂದ ಜನಮನ್ನಣೆ. ಮನೋರಂಜನೆಯಲ್ಲಿ ಪಾಲುಗೊಳ್ಳುವಿಕೆ. ನೂತನ ಬಂಧು ಮಿತ್ರರ ಭೇಟಿ. ಉದ್ಯೋಗ ವ್ಯವಹಾರಗಳಲ್ಲಿ ನಷ್ಟ. ಪ್ರಾಮಾಣಿಕತೆ ಪ್ರದರ್ಶನ.

ತುಲಾ: ಮಾನಸಿಕ ಸಂತೋಷಕ್ಕೆ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಿ. ಅನಗತ್ಯ ವಿಚಾರಗಳಲ್ಲಿ ಆಸಕ್ತಿ. ದೇವತಾ ಸ್ಥಳ ಸಂದರ್ಶನ. ಸಹೋದರ ವರ್ಗದವರಿಂದ ಸಹಾಯ. ದಾಂಪತ್ಯ ಸುಖ ವೃದ್ಧಿ.

ವೃಶ್ಚಿಕ: ಅಧ್ಯಯನಶೀಲತೆ, ಉದ್ಯೋಗ ವ್ಯವಹಾರಗಳಲ್ಲಿ ಅಧಿಕ ಧನಾರ್ಜನೆ. ಪರರಿಗೆ ಸಹಾಯ ಮಾಡುವಾಗ ಪೂರ್ವಪರ ತಿಳಿದು ವ್ಯವಹರಿಸಿ. ಗೃಹೋಪಯೋಗಿ ವಸ್ತುಗಳ ಸಂಗ್ರಹ. ಗುರು ಹಿರಿಯರ ಆರೋಗ್ಯ ವೃದ್ಧಿ.

ಧನು: ನಾಯಕತ್ವ ಗುಣ ವೃದ್ಧಿ. ಸಹೋದರ ಸಮಾನರಿಂದ ಸಂದರ್ಭೋಚಿತ ಸಹಾಯ. ಪ್ರಯಾಣದಿಂದ ಲಾಭ. ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಅವಿವಾಹಿತರಿಗೆ ಉತ್ತಮ ಸಂಬಂಧ ಒದಗುವ ಸಂಭವ. ಸಣ್ಣ ಪ್ರಯಾಣ.

ಮಕರ:  ಪ್ರಯಾಣದಿಂದ ದೇಹಾಯಾಸ ಸಂಭವ. ದೂರದ ವ್ಯವಹಾರಗಳಿಂದ ಧನಾರ್ಜನೆ ವೃದ್ಧಿ. ದಾಂಪತ್ಯ ಸುಖ ತೃಪ್ತಿಕರ. ಅಧ್ಯಯನ ಪ್ರವೃತ್ತರಿಗೆ ಉತ್ತಮ ವಾತಾವರಣ ನಿರ್ಮಾಣ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.

ಕುಂಭ: ಧೈರ್ಯ ಪರಾಕ್ರಮ, ಶೌರ್ಯ, ಆತ್ಮಸ್ಥೆರ್ಯದಿಂದ ಕೂಡಿದ ಚಟುವಟಿಕೆ. ಸ್ವಾಭಿಮಾನ ಗುಣದಿಂದ ಗೌರವಾದರ ವೃದ್ಧಿ. ಸಣ್ಣ ಸಂಚಾರ ಸಂಭವ. ಗೃಹದಲ್ಲಿ ಸಂತಸದ ವಾತಾವರಣ. ದೂರದ ವ್ಯವಹಾರಗಳಲ್ಲಿ ಹೆಚ್ಚು ಧನಲಾಭ.

ಮೀನ: ಸ್ವಂತ ಪರಿಶ್ರಮ ಬುದ್ಧಿವಂತಿಕೆಯಿಂದ ಕೂಡಿದ ಕಾರ್ಯವೈಖರಿ. ಗಣ್ಯರಿಂದ ಮನ್ನಣೆ. ಆತ್ಮೀಯರಿಗೆ ಪ್ರೀತಿ ಪಾತ್ರರಾಗುವ ಸಂದರ್ಭ. ಸಂಸಾರ ಸುಖ ವೃದ್ಧಿ. ಭೂಮ್ಯಾದಿ ವಿಚಾರಗಳಲ್ಲಿ ವಿಳಂಬ.

Advertisement

Udayavani is now on Telegram. Click here to join our channel and stay updated with the latest news.

Next