Advertisement

Daily Horoscope ;ಉದ್ಯೋಗ ವ್ಯವಹಾರಗಳಲ್ಲಿ ವಿವೇಕತೆ, ಶ್ರಮದಿಂದ ಅಭಿವೃದ್ಧಿ

07:15 AM Jun 28, 2023 | Team Udayavani |

ಮೇಷ: ಉದ್ಯೋಗ ವ್ಯವಹಾರ ಗಳಲ್ಲಿ ಸಾಹಸ ಪ್ರವೃತ್ತಿ. ಅಧಿಕ ಪರಿಶ್ರಮದಿಂದ ಸಫ‌ಲತೆ. ಸ್ಥಾನ ಗೌರವಾದಿ ಲಭ್ಯ. ನೆಮ್ಮದಿ ಕಮ್ಮಿ. ಬಂಧುಮಿತ್ರರಿಗೆ ಹೆಚ್ಚಿದ ಒತ್ತಡ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ಸ್ಪಷ್ಟ ನಿರ್ಧಾರದಿಂದ ನಿರೀಕ್ಷಿತ ಫ‌ಲ ಲಭ್ಯ.

Advertisement

ವೃಷಭ: ಮನೋರಂಜನೆಯಲ್ಲಿ ಕಾಲ ಕಳೆಯುವಿಕೆ. ದೀರ್ಘ‌ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಸ್ಥಾನಮಾನ ಗೌರವಾದಿ ಪ್ರಗತಿ. ಅವಿವಾಹಿತರಿಗೆ ವಿವಾಹ ಯೋಗ. ಯೋಗ್ಯ ಸಂಬಂಧ ಒದಗಿ ಬರುವುದು. ಬಹುವಿಧದದಿಂದ ಧನ ಸಂಚಯನ.

ಮಿಥುನ: ಕೆಲಸದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ಸಿಕ್ಕಿದ್ದರಿಂದ ಮನಃ ತೃಪ್ತಿ. ಕೀರ್ತಿ ಸಂಪಾದನೆ. ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ. ಆರೋಗ್ಯದಲ್ಲಿ ಸುಧಾರಿಕೆ. ದಾಂಪತ್ಯ ಸುಖ ವೃದ್ಧಿ. ಅವಿವಾಹಿತರಿಗೆ ವಿವಾಹ ಭಾಗ್ಯ ಒದಗಿಬರುವುದು.

ಕರ್ಕ: ಹಣಕಾಸಿನ ನಿರೀಕ್ಷೆಯಲ್ಲಿ ಸಫ‌ಲತೆ. ಉತ್ತಮ ವಾಕ್‌ ಚತುರತೆಯಿಂದ ಕಾರ್ಯವೈಖರಿ. ದೂರದ, ವಿದೇಶದ ವ್ಯವಹಾರಗಳಲ್ಲಿ ಪ್ರಗತಿ. ಸಹೋದರ ಸಮಾನರಿಂದಲೂ ಸಹೋದ್ಯೋಗಿಗಳಿಂದಲೂ ಉತ್ತಮ ಸಹಕಾರ ಲಭ್ಯ. ಗೃಹದಲ್ಲಿ ಸಂಭ್ರಮದ ವಾತಾವರಣ.

ಸಿಂಹ: ದೂರ ಸಂಚಾರ. ಸ್ಥಾನ ಗೌರವಾದಿ ವಿಚಾರಗಳಲ್ಲಿ ಪ್ರಗತಿದಾಯಕ ಅಭಿವೃದ್ಧಿ. ಗುರುಹಿರಿಯರ ಸಂದರ್ಭೋಚಿತಸಹಾಯ ಸಹಕಾರ ಲಭ್ಯ. ಜವಾಬ್ದಾರಿಯುತ ಮಾತಿನಿಂದ ವ್ಯವಹಾರಗಳಲ್ಲಿ ಶ್ರೇಯಸ್ಸು ಸಂಭವ.

Advertisement

ಕನ್ಯಾ: ಅವಿವಾಹಿತರಿಗೆ ಯೋಗ್ಯ ನೆಂಟಸ್ಥಿಕೆ ಒದಗುವುದು. ಪಾಲುದಾರಿಕಾ ವ್ಯವಹಾರದಲ್ಲಿ ಅಭಿವೃದ್ಧಿ. ಆರೋಗ್ಯದಲ್ಲಿ ಗಣನೀಯ ವೃದ್ಧಿ. ಬಂಧುಮಿತ್ರರ ಸಹಕಾರ. ಗೃಹೋಪಯೋಗಿ ವಸ್ತುಗಳ ಸಂಗ್ರಹ. ಆಸ್ತಿ ವಾಹನಾದಿ ವಿಚಾರಗಳಲ್ಲಿ ಅಭಿವೃದ್ಧಿ.

ತುಲಾ: ಎಲ್ಲಾ ಕೆಲಸ ಕಾರ್ಯ ಗಳಲ್ಲಿ ಸಕಲ ವಿಧದ ಲಾಭ. ಸ್ತ್ರೀ ಪುರುಷರು ಪರಸ್ಪರ‌ ಸಹಕಾರಿಸಿ. ಉತ್ತಮ ಧನ ಸಂಚಯನ. ಆಸ್ತಿ ವಿಚಾರಗಳಲ್ಲಿ ಎಚ್ಚರಿಕೆಯ ನಡೆ ಅಗತ್ಯ. ಗೃಹದಲ್ಲಿ ಚರ್ಚೆಗೆ ಅವಕಾಶ ನೀಡದಿರಿ. ಸಂತೋಷದಿಂದ ಸಮಯ ಕೆಳೆಯುವ ದಿನ.

ವೃಶ್ಚಿಕ: ಆರೋಗ್ಯ ವೃದ್ಧಿ. ಅನಿರೀಕ್ಷಿತ ಸ್ಥಾನ ಸುಖಾದಿ ಪ್ರಾಪ್ತಿ. ಉದ್ಯೋಗ ವ್ಯವಹಾರ ಗಳಲ್ಲಿ ಗಣನೀಯ ಮುನ್ನಡೆ. ಹಿರಿಯ ಅಧಿಕಾರಿಗಳ ಸಹಕಾರ ಪ್ರೋತ್ಸಾಹ ಲಾಭ್ಯ. ನೂತನ ಮಿತ್ರರ ಸಮಾಗಮ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ ನಿರ್ಮಾಣ.

ಧನು: ಉತ್ತಮ ದೈಹಿಕ ಮಾನಸಿಕ ಆರೋಗ್ಯ. ಉದ್ಯೋಗ ವ್ಯವಹಾರಗಳಲ್ಲಿ ವಿವೇಕತೆ, ಶ್ರಮದಿಂದ ಅಭಿವೃದ್ಧಿ. ಧನಾರ್ಜನೆಗೆ ಕೊರತೆಯಾಗದು. ಗುರುಹಿರಿಯರ ಆರೋಗ್ಯ ಗಮನಿಸಿ. ವಿದ್ಯಾರ್ಥಿಗಳಿಗೆ ಸಣ್ಣ ಪ್ರಯಾಣ ಸಂಭವ.

ಮಕರ: ಧೈರ್ಯ ಪರಾಕ್ರಮ ಸ್ಥಿರ ಬುದ್ಧಿಯಿಂದ ಕೂಡಿದ ಕಾರ್ಯ ವೈಖರಿ. ಬಂಧುಮಿತ್ರರ ಸಹಕಾರ. ಹಣಕಾಸಿನ ವಿಚಾರದಲ್ಲಿ ಏರಿಳಿತವಾದರೂ ಲಾಭಾಂಶ ವೃದ್ಧಿ . ಪರವೂರ ಸಹೋದ್ಯೋಗಿಗಳಿಂದ ಸಹಕಾರ ವೃದ್ಧಿ. ಮಕ್ಕಳಿಂದ ಸಂತೋಷ.

ಕುಂಭ: ನೂತನ ಮಿತ್ರರ ಸಮಾಗಮ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಸ್ಥಾನ ಗೌರವಾದಿ ಸುಖ. ಅಧಿಕ ಧನಲಾಭ. ಸಾಂಸಾರಿಕ ಸುಖ ತೃಪ್ತಿದಾಯಕ. ಧಾರ್ಮಿಕ ಸ್ಥಳಗಳ ಸಂದರ್ಶನ. ವಿದ್ಯಾರ್ಥಿಗಳಿಗೆ ಸಕಲ ಸೌಕರ್ಯಗಳ ಲಾಭ.

ಮೀನ: ದೈನಂದಿನ ಉದ್ಯೋಗ ವ್ಯವಹಾರಗಳಲ್ಲಿ ಸುದೃಢತೆ. ಸ್ಥಾನಮಾನ ಗೌರವ ವೃದ್ಧಿ. ಪಾಲು ದಾರಿಕಾ ವ್ಯವಹಾರಗಳಲ್ಲಿ ತಾಳ್ಮೆ ಸಹನೆ ಅಗತ್ಯ. ದೀರ್ಘ‌ ಪ್ರಯಾಣ ಸಂಭವ. ಆರೋಗ್ಯ ವೃದ್ಧಿ. ಉತ್ತಮ ಧನಾರ್ಜನೆ. ಸಾಂಸಾರಿಕವಾಗಿ ಸುಖ ಸಮೃದ್ಧಿ. ಹಿರಿಯರೊಂದಿಗೆ ತಾಳ್ಮೆಯಿಂದ ಇರಿ.

Advertisement

Udayavani is now on Telegram. Click here to join our channel and stay updated with the latest news.

Next