Advertisement

Daily Horoscope;ಆರೋಗ್ಯದಲ್ಲಿ ಗಮನಿಸಿ. ಅಧ್ಯಯನ ನಿಮಿತ್ತ ದೀರ್ಘ‌ ಪ್ರಯಾಣ ಸಂಭವ

07:14 AM Jun 16, 2023 | Team Udayavani |

ಮೇಷ: ಉತ್ತಮ ಧನಾರ್ಜನೆ. ಉತ್ತಮ ಜನಮನ್ನಣೆ. ಉದ್ಯೋಗ, ವ್ಯವಹಾರಗಳಲ್ಲಿ ಘರ್ಷಣೆಗೆ ಅವಕಾಶ ನೀಡದಿರಿ. ಕಾರ್ಯ ಸಫ‌ಲತೆ ಆಗುವುದು. ಧನವ್ಯಯಕ್ಕೆ ಹಲವು ದಾರಿ ಬಂದಾವು. ಮಕ್ಕಳ ವಿಚಾರದಲ್ಲಿ ಹೆಚ್ಚಿದ ಜವಾಬ್ದಾರಿ.

Advertisement

ವೃಷಭ: ಮನಸ್ಸಿನಲ್ಲಿ ಗೊಂದಲಕ್ಕೆ ಅವಕಾಶ ನೀಡದಿರಿ. ಧೈರ್ಯದಿಂದ ಕಾರ್ಯ ನಿರ್ವಹಿಸಿ. ಅತಿಯಾದ ಆಸೆ ಸಲ್ಲದು. ಭೂಮಿ ಆಸ್ತಿ ಇತ್ಯಾದಿ ವ್ಯವಹಾರಗಳಲ್ಲಿ ಸ್ವಲ್ಪ ಪ್ರಗತಿ. ಗೃಹದಲ್ಲಿ ಸಂತಸದ ವಾತಾವರಣ.

ಮಿಥುನ: ಆರೋಗ್ಯದಲ್ಲಿ ಗಮನಿಸಿ. ಅಧ್ಯಯನ ನಿಮಿತ್ತ ದೀರ್ಘ‌ ಪ್ರಯಾಣ ಸಂಭವ. ಪಾಲುದಾರಿಕಾ ವ್ಯವಹಾರದಲ್ಲಿ ಉತ್ತಮ ಪ್ರಗತಿ. ನೂತನ ಮಿತ್ರರ ಸಮಾಗಮ. ಧನಾರ್ಜನೆಗೆ ಕೊರತೆ ಆಗದು. ಗುರುಹಿರಿಯರ ಉತ್ತಮ ಮಾರ್ಗದರ್ಶನ.

ಕರ್ಕ: ಅತಿಯಾದ ಆತ್ಮವಿಶ್ವಾಸ ಸಲ್ಲದು. ಮಾತನಾಡುವಾಗ ಎಚ್ಚರ ವಹಿಸಿ. ದಾಂಪತ್ಯ ದಲ್ಲಿ ಸಹನೆ ಇರಲಿ. ಧಾರ್ಮಿಕ ವಿಚಾರದಲ್ಲಿ ಭಕ್ತಿ ಶ್ರದ್ಧೆ ಕೊರತೆಯಾಗದಂತೆ ಕಾರ್ಯ ನಿರ್ವಹಿಸಿ. ಧನಾರ್ಜನೆ ಉತ್ತಮ. ಗುರುಹಿರಿಯರಲ್ಲಿ ಬೇಸರ ಮಾಡದಿರಿ.

ಸಿಂಹ: ಅತಿಯಾದ ಕಾರ್ಯ ಒತ್ತಡದಿಂದ ದೇಹಾಯಾಸ ತೋರೀತು. ದೀರ್ಘ‌ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಧನಾರ್ಜನೆ. ವಿದ್ಯಾರ್ಥಿಗಳು ಪರರನ್ನು ಅವಲಂಬಿಸದೇ ಸ್ವಂತ ಪರಿಶ್ರಮದಲ್ಲಿ ಕಾರ್ಯ ಸಾಧಿಸಿಕೊಳ್ಳಿ.

Advertisement

ಕನ್ಯಾ: ಧನಾರ್ಜನೆಗಿಂತಲೂ ಅಧಿಕ ವ್ಯಯದ ಪರಿಸ್ಥಿತಿ. ಆರೋಗ್ಯದಲ್ಲಿ ವೃದ್ಧಿ. ಧಾರ್ಮಿಕ ಚಟುವಟಿಕೆಗಳಿಗಾಗಿ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರದಲ್ಲಿ ಸಮಾಧಾನ ತೃಪ್ತಿ. ಪಾಲುದಾರಿಕಾ ಕ್ಷೇತ್ರದವರಿಗೆ ಸದವಕಾಶ.

ತುಲಾ: ನಿರೀಕ್ಷಿತ ಸ್ಥಾನ ಪ್ರಾಪ್ತಿ. ದೀರ್ಘ‌ ಪ್ರಯಾಣ. ನೂತನ ಉದ್ಯೋಗ, ವ್ಯವಹಾರ ಲಭ್ಯ. ಪರರ ಧನಸಂಪತ್ತಿನ ವಿಚಾರದಲ್ಲಿ ಹೆಚ್ಚಿದ ಜವಾಬ್ದಾರಿ. ಧನವ್ಯಯ. ದಾಂಪತ್ಯದಲ್ಲಿ ಕಲಹಕ್ಕೆ ಅವಕಾಶ ನೀಡದಿರಿ. ಆರೋಗ್ಯದಲ್ಲಿ ಸುಧಾರಣೆ.

ವೃಶ್ಚಿಕ: ದೂರ ಪ್ರಯಾಣ. ನೂತನ ಮಿತ್ರರ ಸಮಾಗಮ. ಸಂತೋಷ. ಪಾಲುದಾರಿಕಾ ವ್ಯವಹಾರದಿಂದ ಜನಮನ್ನಣೆ. ಬಾಂಧವ್ಯ ವೃದ್ಧಿ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣದಿಂದ ನೆಮ್ಮದಿ. ನಿರೀಕ್ಷಿತ ಫ‌ಲಿತಾಂಶ ಪ್ರಾಪ್ತಿ.

ಧನು: ಗೃಹೋಪಕರಣ ವಸ್ತು ಸಂಗ್ರಹ. ಗೃಹ, ವಾಹನ, ಆಸ್ತಿ ವಿಚಾರದಲ್ಲಿ ಅಭಿವೃದ್ಧಿ. ಗುರುಹಿರಿಯರಿಂದ ಉತ್ತಮ ಮಾರ್ಗದರ್ಶನ ಲಭ್ಯ. ಸ್ಥಾನಮಾನ ವಿಚಾರದಲ್ಲಿ ತಾಳ್ಮೆ ಸಹನೆಯಿಂದ ವರ್ತಿಸಿ. ದಂಪತಿಗಳಲ್ಲಿ ತಾಳ್ಮೆ ಅಗತ್ಯ.

ಮಕರ: ಆರೋಗ್ಯ ವೃದ್ಧಿ. ಸಮಾಜದಲ್ಲಿ ಗೌರವ ವೃದ್ಧಿ. ದೇವತಾ ಸ್ಥಳಗಳಿಗೆ ಸಂದರ್ಶನ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿ ಯಾದ ಸಂತೋಷ. ಸಂಸಾರದಲ್ಲಿ ಸುಖ ವೃದ್ಧಿ. ದೂರದ ವ್ಯವಹಾರಗಳಲ್ಲಿ ತಲ್ಲೀನತೆ. ಗೃಹದಲ್ಲಿ ಸಂತಸದ ವಾತಾವರಣ.

ಕುಂಭ:
ದಾರ್ಮಿಕ ಚಟುವಟಿಕೆ ಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ಮನಃತೃಪ್ತಿ. ನಿರೀಕ್ಷಿತ ಧನ ಸ್ಥಾನಮಾನ ಪ್ರಾಪ್ತಿ. ದೂರದ ಪ್ರಯಾಣದಲ್ಲಿ ಸಫ‌ಲತೆ. ಭೂಮ್ಯಾದಿ ವಿಚಾರಗಳಲ್ಲಿ ಹೆಚ್ಚಿದ ಪರಿಶ್ರಮ. ಗುರುಹಿರಿಯರ ಆರೋಗ್ಯ ಗಮನಿಸಿ.

ಮೀನ: ಆರೋಗ್ಯ ವೃದ್ಧಿ. ನಿರೀಕ್ಷಿತ ಸ್ಥಾನ ಸುಖ ಲಭ್ಯ. ದೇವತಾ ಕಾರ್ಯಗಳಲ್ಲಿ ತಲ್ಲೀನತೆ. ಉದ್ಯೋಗ ವ್ಯವಹಾರಗಳಲ್ಲಿ ಪರರ ಸಹಾಯದಿಂದ ಪ್ರಗತಿ. ಮಕ್ಕಳ ವಿಚಾರದಲ್ಲಿ ಹೆಚ್ಚಿದ ಶ್ರಮ. ಅನಿರೀಕ್ಷಿತ ಧನಲಾಭ.

Advertisement

Udayavani is now on Telegram. Click here to join our channel and stay updated with the latest news.

Next