Advertisement

ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನ ಲಾಭ, ಆರೋಗ್ಯ ಸುದೃಢವಾಗಲಿದೆ

07:15 AM Mar 25, 2023 | Suhan S |

ಮೇಷ:  ವಿದ್ಯಾರ್ಥಿಗಳಿಗೆ ಅದೃಷ್ಟದ ದಿನ. ಧಾರ್ಮಿಕ ಕಾರ್ಯಗಳಲ್ಲಿ  ನೇತೃತ್ವ. ದೇವತಾ ಸನ್ನಿಧಾನಕ್ಕೆ ಭೇಟಿ. ಗುರುಹಿರಿಯರ ಆಶೀರ್ವಾದದಿಂದ ಸಕಲ ಕಾರ್ಯಗಳಲ್ಲಿ  ಜಯ. ಅನಿರೀಕ್ಷಿತ ಧನ ಲಾಭ. ಆರೋಗ್ಯ ಸುದೃಢ.

Advertisement

ವೃಷಭ: ದೂರ ಸಂಚಾರ. ದೂರದ ವಿದೇಶದ ವ್ಯವಹಾರಗಳಲ್ಲಿ  ಪ್ರಗತಿ. ಹೆಚ್ಚಿದ ಜವಾಬ್ದಾರಿ. ಅನಗತ್ಯ ಸಹಾಯ ಮಾಡಲು ಹೋಗಿ ತೊಂದರೆಗೊಳಗಾಗದಿರಿ. ಸತ್ಕಾರ್ಯಕ್ಕೆ ಧನ ವ್ಯಯ. ಆಸ್ತಿ ವಿಚಾರದಲ್ಲಿ ಹೆಚ್ಚಿದ ಜವಾಬ್ದಾರಿ.

ಮಿಥುನ:  ಧೈರ್ಯ ಉತ್ಸಾಹದಿಂದ ಕೂಡಿದ ಕಾರ್ಯ ವೈಖರಿ.  ಪರರಿಗೆ ಸಹಾಯ ಮಾಡಿದ ತೃಪ್ತಿ. ಉದ್ಯೋಗ, ಪಾಲುಗಾರಿಕಾ ವ್ಯವಹಾರಗಳಲ್ಲಿ  ಪ್ರಗತಿ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ಉತ್ತಮ ವಾಕ್‌ಚತುರತೆಯಿಂದ ಕೂಡಿದ ಕಾರ್ಯವೈಖರಿ.

ಕರ್ಕ:  ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರ ಗಳಲ್ಲಿ  ಕೀರ್ತಿ ಸಂಪಾದನೆ. ಮೆಚ್ಚುಗೆ. ಅನಿರೀಕ್ಷಿತ ಪ್ರಗತಿ. ಗೃಹದಲ್ಲಿ ಧಾರ್ಮಿಕ ಚಟುವಟಿಕೆಗಳು ನಡೆದು ಸಂಭ್ರಮದ ವಾತಾವರಣ. ಬಂಧುಮಿತ್ರರ ಆಗಮನ. ಅವಿವಾಹಿತರಿಗೆ ವಿವಾಹ ಭಾಗ್ಯ.

ಸಿಂಹ: ನಿರೀಕ್ಷಿಸಿದಂತೆ ಎಲ್ಲಾ  ಕೆಲಸ ಕಾರ್ಯ ಗಳಲ್ಲಿ  ಸಫ‌ಲತೆ. ಸ್ಥಾನ ಗೌರವಾದಿ ಪ್ರಾಪ್ತಿ. ಮಕ್ಕಳಿಂದ ಸಂತೋಷ. ಜನಪದರಿಂದ ಮೆಚ್ಚುಗೆ. ಅಧಿಕಾರ ಪ್ರಾಪ್ತಿ. ಸಂದರ್ಭೋಚಿತ ಮಾರ್ಗದರ್ಶನ ದಿಂದ ಜನಮನ್ನಣೆ. ಹೆಚ್ಚಿದ ವರಮಾನ.

Advertisement

ಕನ್ಯಾ: ಉಳಿತಾಯದ ಬಗ್ಗೆ  ಚಿಂತನೆ. ಹೂಡಿಕೆಗಳಲ್ಲಿ ಆಸಕ್ತಿ. ಎಲ್ಲಾ ವಿಚಾರದಲ್ಲಿ  ತಾಳ್ಮೆ ಸಹನೆ ಅಗತ್ಯ. ಅನಗತ್ಯ ವಿಚಾರಗಳಿಗೆ ತಲೆ ಕೊಡದಿರಿ. ಸಾಧ್ಯವಾದಷ್ಟು ಮೌನ ವಹಿಸುವುದು ಉತ್ತಮ. ದೇವತಾ ಸ್ಥಳ ಸಂದರ್ಶನದಿಂದ ನೆಮ್ಮದಿ.

ತುಲಾ: ಎಲ್ಲಾ  ಕೆಲಸ ಕಾರ್ಯಗಳಲ್ಲಿ  ಸಕಲ ವಿಧದ ಲಾಭ. ಪಾಂಡಿತ್ಯ ಸುಖಾದಿಗಳು ವೃದ್ಧಿ. ಸ್ತ್ರೀ ಪುರುಷರಿಗೆ ಪರಸ್ಪರರ ಸಹಕಾರ. ಉತ್ತಮ ಧನ ಸಂಚಯನ. ಆಸ್ತಿ ವಿಚಾರಗಳಲ್ಲಿ ಎಚ್ಚರಿಕೆಯ ನಡೆ ಅಗತ್ಯ. ಗೃಹದಲ್ಲಿ  ಚರ್ಚೆಗೆ ಅವಕಾಶ ನೀಡದಿರಿ.

ವೃಶ್ಚಿಕ: ಆರೋಗ್ಯ ವೃದ್ಧಿ . ಅನಿರೀಕ್ಷಿತ  ಸ್ಥಾನ ಸುಖಾದಿ ಪ್ರಾಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಗಣನೀಯ ಮುನ್ನಡೆ. ಹಿರಿಯ ಅಧಿಕಾರಿಗಳ ಸಹಕಾರ ಪ್ರೋತ್ಸಾಹಾದಿ ಲಾಭ. ಮಾನಸಿಕ ನೆಮ್ಮದಿ. ನೂತನ ಮಿತ್ರರ ಸಮಾಗಮ.

ಧನು: ಉತ್ತಮ ದೈಹಿಕ, ಮಾನಸಿಕ ಆರೋಗ್ಯ. ಉದ್ಯೋಗ ವ್ಯವಹಾರಗಳಲ್ಲಿ  ವಿವೇಕತೆ, ಶ್ರಮ ಅಭಿವೃದ್ಧಿ . ಧನಾರ್ಜನೆಗೆ ಕೊರತೆ ಕಾಣದು. ಪಾಲುದಾರರಲ್ಲಿ  ಸಾಮರಸ್ಯಕ್ಕೆ ಆದ್ಯತೆ ನೀಡಿ. ವಿದ್ಯಾರ್ಥಿ ಗಳಿಗೆ ಸಣ್ಣ  ಪ್ರಯಾಣ ಸಂಭವ.

ಮಕರ: ಧೈರ್ಯ ಪರಾಕ್ರಮ ಸ್ಥಿರ ಬುದ್ಧಿಯಿಂದ ಕೂಡಿದ ಕಾರ್ಯ ವೈಖರಿ. ಬಂಧುಮಿತ್ರರ ಸಹಕಾರ. ಹಣಕಾಸಿನ ವಿಚಾರದಲ್ಲಿ  ಏರಿಳಿತವಾದರೂ ಲಾಭಾಂಶ ವೃದ್ಧಿ. ಪರಊರ ಸಹೋದ್ಯೋಗಿಗಳಿಂದ ಸಹಕಾರ ವೃದ್ಧಿ.  ಮಕ್ಕಳಿಂದ ಸಂತೋಷ.

ಕುಂಭ: ನೂತನ ಮಿತ್ರರ ಸಮಾಗಮ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಸ್ಥಾನ ಲಾಭ. ಅಧಿಕ ಧನ ಲಾಭ. ಸಾಂಸಾರಿಕ ಸುಖ ತೃಪ್ತಿದಾಯಕ. ಧಾರ್ಮಿಕ ಸ್ಥಳಗಳ ಸಂದರ್ಶನ. ವಿದ್ಯಾರ್ಥಿಗಳಿಗೆ ಸಕಲ ಸೌಕರ್ಯಗಳ ಲಾಭ.

ಮೀನ:  ಆರೋಗ್ಯ ವೃದ್ಧಿ.  ದೈನಂದಿನ ಉದ್ಯೋಗ ವ್ಯವಹಾರಗಳಲ್ಲಿ  ಸುದೃಢತೆ. ಸ್ಥಾನ ಗೌರವ ವೃದ್ಧಿ. ಪಾಲುದಾರಿಕಾ ವ್ಯವಹಾರಗಳಲ್ಲಿ  ತಾಳ್ಮೆ ಸಹನೆ ಅಗತ್ಯ. ದೀರ್ಘ‌ ಪ್ರಯಾಣ ಸಂಭವ. ಉತ್ತಮ ಧನಾರ್ಜನೆ. ಸಾಂಸಾರಿಕವಾಗಿ ನೆಮ್ಮದಿಯ ದಿನ. ವಿದ್ಯಾರ್ಥಿಗಳು ಅಭ್ಯಾಸದ ಬಗ್ಗೆ  ಗಮನಹರಿಸಿ. ಹಿರಿಯರ ಆರೋಗ್ಯ ಗಮನಿಸಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next