Advertisement

ಬುಧವಾರದ ರಾಶಿಫಲ: ಈ ರಾಶಿ ಅವರಿಗಿಂದು ಪಾಲುದಾರಿಕಾ ವ್ಯವಹಾರಗಳಲ್ಲಿ  ಅನಿರೀಕ್ಷಿತ ಅಭಿವೃದ್ಧಿ

07:20 AM Mar 15, 2023 | Suhan S |

ಮೇಷ:  ಆರೋಗ್ಯ ಗಮನಿಸಿ. ಮಾಡುವಂತಹ ವ್ಯವಹಾರದಲ್ಲಿ ಪಾರದರ್ಶಕತೆ ಹೆಚ್ಚಿನ ಆದ್ಯತೆ ನೀಡುವುದರಿಂದ ನಿರೀಕ್ಷಿತ ಸಫ‌ಲತೆ. ಧನಾರ್ಜನೆ ಉತ್ತಮ. ಏನೋ ಒಂದು ವಿಧದ ಅತೃಪ್ತಿ ತೋರೀತು. ಸಂದರ್ಭಕ್ಕೆ ಸರಿಯಾಗಿ  ಸಹಾಯ ಒದಗಿಬರುವುದು.

Advertisement

ವೃಷಭ: ಪಾಲುದಾರಿಕಾ ವ್ಯವಹಾರಗಳಲ್ಲಿ  ಅನಿರೀಕ್ಷಿತ ಅಭಿವೃದ್ಧಿ. ಮಾಡುವ ಉದ್ಯೋಗದಲ್ಲಿ  ಹೆಚ್ಚಿನ ಗೌರವ ಮನ್ನಣೆ ಪ್ರಾಪ್ತಿ. ಹಣಕಾಸಿನ ವಿಚಾರದಲ್ಲಿ  ಸರಿಯಾದ ದಾಖಲಾತಿಗೆ ಆದ್ಯತೆ ನೀಡಿ.  ಆರೋಗ್ಯ ವೃದ್ಧಿ.

ಮಿಥುನ:  ನಿರೀಕ್ಷಿತ ಸ್ಥಾನ ಸುಖಕ್ಕಾಗಿ ಹೆಚ್ಚಿದ ಶ್ರಮ. ಉದ್ಯೋಗ ವ್ಯವಹಾರಗಳಲ್ಲಿ  ಜವಾಬ್ದಾರಿ. ಸಹೋದ್ಯೋಗಿಗಳಿಂದ ಸಹಕಾರ. ವಿದ್ಯಾರ್ಥಿಗಳಿಗೆ ಅಧ್ಯಯನಶೀಲರಿಗೆ ಪುರಸ್ಕಾರದ ಅವಕಾಶ. ದಾಂಪತ್ಯ ಸುಖ ವೃದ್ಧಿ.

ಕರ್ಕ:  ಆರೋಗ್ಯದಲ್ಲಿ  ಸುಧಾರಣೆ. ಸಣ್ಣ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ  ಹೊಂದಾಣಿಕೆ ಅಗತ್ಯ. ಭೂಮಿ ಆಸ್ತಿ ಇತ್ಯಾದಿ ವಿಚಾರಗಳಲ್ಲಿ  ತಾಳ್ಮೆಯ ನಿರ್ಣಯ ಫ‌ಲಿಸೀತು. ಮಿತ್ರರಲ್ಲಿ  ಗೊಂದಲಕ್ಕೆ ಅವಕಾಶ ನೀಡದಿರಿ.

ಸಿಂಹ: ಆರೋಗ್ಯ ವಿಚಾರದಲ್ಲಿ  ಉದಾಸೀನತೆ ತೋರದಿರಿ. ದೀರ್ಘ‌ ಸಂಚಾರಗಳಲ್ಲಿ  ವಿಳಂಬ ಎದುರಾದೀತು. ದೇವತಾ ಪ್ರಾರ್ಥನೆಯಿಂದ ವಿಘ್ನ ಪರಿಹಾರ. ವಿದ್ಯಾರ್ಥಿಗಳಿಗೆ ಉತ್ತಮ ಸ್ಥಾನ ಸುಖ ಸಂಭವ. ಧನಾರ್ಜನೆಗೆ ಸರಿಸಮವಾದ ಖರ್ಚು.

Advertisement

ಕನ್ಯಾ: ಅಧಿಕ ದೈಹಿಕ ಶ್ರಮದಿಂದ ನಿರೀಕ್ಷಿತ ಸ್ಥಾನ ಪ್ರಾಪ್ತಿ. ಉತ್ತಮ ಧನಸಂಪಾದನೆ. ಪರರ ಸಹಾಯ ನಿರೀಕ್ಷೆ ಮಾಡದೆ ಸ್ವಂತ ನಿರ್ಣಯಗಳಲ್ಲಿ  ಕಾರ್ಯ ತತ್ಪರತೆ. ಭೂಮಿ, ವಾಹನ, ಆಸ್ತಿ ಇತ್ಯಾದಿ ವಿಚಾರಗಳಲ್ಲಿ  ಮುನ್ನಡೆ. ದಾಂಪತ್ಯ ಸುಖ ತೃಪ್ತಿಕರ.

ತುಲಾ: ಧಾರ್ಮಿಕ ಕಾರ್ಯಗಳಲ್ಲಿ  ನೇತೃತ್ವ. ದೀರ್ಘ‌ ಪ್ರಯಾಣ. ಮಾನಸಿಕ ಒತ್ತಡದಿಂದ ಕೂಡಿದ ಜವಾಬ್ದಾರಿ. ಚತುರತೆಯಿಂದ ಮಾಡುವ ಕಾರ್ಯಗಳಲ್ಲಿ ಧನಸಂಪತ್ತು ವೃದ್ಧಿ.  ಗುರುಹಿರಿಯರಿಂದ ಸಂತೋಷ.  ಆಸ್ತಿ ವಿಚಾರಗಳಲ್ಲಿ  ಪ್ರಗತಿ.

ವೃಶ್ಚಿಕ: ದಂಪತಿಗಳಿಗೆ ಪರಸ್ಪರರಿಂದ ಲಾಭ.  ಸರಕಾರಿ ಕೆಲಸ ಕಾರ್ಯಗಳಲ್ಲಿ  ಪ್ರಗತಿ. ಜವಾಬ್ದಾರಿಯುತ ಕಾರ್ಯ ವೈಖರಿ. ಆಸ್ತಿ ವಿಚಾರಗಳಲ್ಲಿ  ಪ್ರಗತಿಯಿಂದ ಕೂಡಿದ ಬದಲಾವಣೆ. ಬಹು ಸಂಪತ್ತು ವೃದ್ಧಿ. ಕೈಗೊಂಡ ಕಾರ್ಯಗಳಲ್ಲಿ  ಯಶಸ್ಸು ಲಭಿಸಿದ ತೃಪ್ತಿ.

ಧನು: ಗೃಹೋಪಕರಣ ವಸ್ತುಗಳ ಸಂಗ್ರಹ. ಹೆಚ್ಚಿದ ಜನ ಸಂಪರ್ಕ. ಗಣ್ಯರ ಭೇಟಿ. ದೂರದ ಬಂಧುಮಿತ್ರರ ಸಹಕಾರ. ಅವಿವಾಹಿತರಿಗೆ ವಿವಾಹ ಯೋಗ. ಮನೆಯಲ್ಲಿ  ಸಂಭ್ರಮದ ವಾತಾವರಣ. ತಾಳ್ಮೆ ಸಹನೆಯಿಂದ ನಿರ್ವಹಿಸಿದ ಕಾರ್ಯದಿಂದ ಕೀರ್ತಿ.

ಮಕರ: ಮಕ್ಕಳ ನಿಮಿತ್ತ ಹೆಚ್ಚಿದ ಜವಾಬ್ದಾರಿ. ಸರಕಾರೀ ಕೆಲಸಗಳಲ್ಲಿ  ಪ್ರಗತಿ. ನಿರೀಕ್ಷಿತ ಸ್ಥಾನಮಾನ ಪ್ರಾಪ್ತಿ. ಸತ್ಕರ್ಮಕ್ಕೆ ಧನವ್ಯಯ.  ಸಂಸಾರದಲ್ಲಿ  ಚರ್ಚೆಗೆ ಅವಕಾಶ ನೀಡದಿರಿ. ಗುರುಹಿರಿಯರಲ್ಲಿ  ತಾಳ್ಮೆ ಸಮಾಧಾನದಿಂದ ವರ್ತಿಸಿ.

ಕುಂಭ: ಆಸ್ತಿ ವಿಚಾರಗಳಲ್ಲಿ  ಪ್ರಗತಿ.ಗೃಹೋಪವಸ್ತುಗಳ ಸಂಗ್ರಹ. ಸಾಂಸಾರಿಕ ಸುಖ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ  ಬಂಧುಮಿತ್ರರ ಸಹಾಯ ಸಹಕಾರದಿಂದ ಅಭಿವೃದ್ಧಿ. ಹೆಚ್ಚಿದ ವರಮಾನ. ವಿದ್ಯಾರ್ಥಿಗಳಿಗೆ  ಶ್ರಮವಹಿಸಿದರಿಂದ ಕೀರ್ತಿ ಗೌರವ ಲಭ್ಯ.

ಮೀನ:  ಆಭರಣಾದಿ ಖರೀದಿಗಳು. ಮನೆಗೆ ಸಂಬಂಧಿಸಿದ ವಸ್ತು ಸಂಗ್ರಹ. ಗೃಹದಲ್ಲಿ  ಸಂತಸದ ವಾತಾವರಣ. ಉದ್ಯೋಗ ವ್ಯವಹಾರಗಳಲ್ಲಿ  ಸಂತೋಷ ವೃದ್ಧಿ. ನಿರೀಕ್ಷೆಗೂ ಮೀರಿದ ಧನಾರ್ಜನೆ. ದಾನ ಧರ್ಮದಲ್ಲಿ  ಆಸಕ್ತಿ. ವಿದ್ಯಾರ್ಥಿಗಳಿಗೆ ಸರ್ವ ವಿಧದ ಸೌಲಭ್ಯ ಪ್ರಾಪ್ತಿ. ಅವಿವಾಹಿತರಿಗೆ ವಿವಾಹ ಯೋಗ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next