Advertisement

ಸೋಮವಾರದ ರಾಶಿಫಲ: ಈ ರಾಶಿ ಅವರಿಗಿಂದು ಗೃಹ ಆಸ್ತಿ ವಿಚಾರದಲ್ಲಿ ಪ್ರಗತಿದಾಯಕ ಮುನ್ನಡೆಯಾಗಲಿದೆ

07:18 AM Feb 06, 2023 | Team Udayavani |

ಮೇಷ: ಪಾಲುದಾರಿಕಾ ಕ್ಷೇತ್ರದಲ್ಲಿ ಪ್ರಗತಿ. ದೀರ್ಘ‌ ಪ್ರಯಾಣದಿಂದ ಲಾಭ. ಉತ್ತಮ ಧನಾರ್ಜನೆ. ಆರೋಗ್ಯದಲ್ಲಿ ಸಣ್ಣ ಕಿರಿಕಿರಿ. ಆಸ್ತಿ ಸಂಚಯನ. ನೂತನ ಮಿತ್ರರ ಭೇಟಿ. ಮಾತೃ ಸಮಾನರಿಂದ ಸಂತೋಷ ವೃದ್ಧಿ. ಸೂಕ್ಷ್ಮ ವಿಚಾರಗಳನ್ನು ತಾಳ್ಮೆಯಿಂದ ನಿಭಾಯಿಸಿ.

Advertisement

ವೃಷಭ: ಆರೋಗ್ಯ ಮಧ್ಯಮ. ಉತ್ತಮ ಚಟುವಟಿಕೆಗಳಿಂದ ಕೂಡಿದ ದಿನ. ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಅಭಿವೃದ್ಧಿ. ಮಕ್ಕಳ ನಿಮಿತ್ತ ಹೆಚ್ಚಿದ ಜವಾಬ್ದಾರಿ. ದಾಂಪತ್ಯ ತೃಪ್ತಿದಾಯಕ. ಕೆಲಸದ ನಿಮಿತ್ತ ಪ್ರಯಾಣ ಸಂಭವ.

ಮಿಥುನ: ಕೆಲಸ ಕಾರ್ಯಗಳಲ್ಲಿ ಚುರುಕುತನ ನೈಪುಣ್ಯತೆ ಉದಾರ ಮನೋಭಾವ ದೈರ್ಯ ಉತ್ಸಾಹ ತೋರೀತು. ಅಭಿವೃದ್ಧಿದಾಯಕ ಬದಲಾವಣೆ. ಧಾರ್ಮಿಕ ಕಾರ್ಯಗಳಲ್ಲಿ ನೇತೃತ್ವ. ದೀರ್ಘ‌ ಪ್ರಯಾಣಕ್ಕೆ ಅವಕಾಶ. ಕೆಲಸ ಕಾರ್ಯಗಳಲ್ಲಿ ಕೀರ್ತಿ ಸಂಪಾದನೆ.

ಕರ್ಕ: ಹಿರಿಯರಿಂದ ಸುಖ. ಸ್ಥಾನ ಸುಖಕ್ಕಾಗಿ ಹೆಚ್ಚಿದ ಪರಿಶ್ರಮ. ಮಕ್ಕಳ ವಿಚಾರದಲ್ಲಿ ನಿರೀಕ್ಷಿತ ಬದಲಾವಣೆ. ದಾಂಪತ್ಯ ಸುಖ ಮಧ್ಯಮ. ಗೃಹ ಆಸ್ತಿ ವಿಚಾರದಲ್ಲಿ ಪ್ರಗತಿದಾಯಕ ಮುನ್ನಡೆ. ಉತ್ತಮ ಆರೋಗ್ಯ.

ಸಿಂಹ: ಆರೋಗ್ಯ ಗಮನಿಸಿ. ಹಣಕಾಸಿನ ವಿಚಾರದಲ್ಲಿ ಪ್ರಗತಿ. ಮಕ್ಕಳ ವಿಚಾರದಲ್ಲಿ ಸಂತೋಷ ವೃದ್ಧಿ. ಭೂಮ್ಯಾದಿ ವ್ಯವಹಾರಗಳಲ್ಲಿ ಪ್ರಗತಿ. ದಾಂಪತ್ಯ ತೃಪ್ತಿಕರ. ಪಾಲುದಾರಿಕಾ ವ್ಯವಹಾರಗಳಲ್ಲಿ ಸಂಯಮವಿರಲಿ.

Advertisement

ಕನ್ಯಾ: ಗೃಹೋಪಕರಣ ವಸ್ತು ಸಂಗ್ರಹ. ಅನಿರೀಕ್ಷಿತ ಭೂಮ್ಯಾದಿ ಆಸ್ತಿ ವಿಚಾರಗಳಲ್ಲಿ ಬದಲಾವಣೆ. ಬಂಧು ಬಳಗದವರಲ್ಲಿ ತಾಳ್ಮೆಯಿಂದ ವ್ಯವಹರಿಸಿ. ದಾಂಪತ್ಯ ಸುಖ ಮಧ್ಯಮ ಚರ್ಚೆಗೆ ಆಸ್ಪದ ನೀಡದಿರಿ. ಮಕ್ಕಳಿಂದ ತೃಪ್ತಿ.

ತುಲಾ: ಧಾರ್ಮಿಕ ಚಟುವಟಿಕೆಗಳಲ್ಲಿ ನೇತೃತ್ವ. ವೈಭವದಿಂದ ಕೂಡಿದ ದಿನಚರಿ. ದೂರ ಪ್ರಯಾಣ. ಗುರುಹಿರಿಯರೊಂದಿಗೆ ಸಮಾಲೋಚನೆ. ನಿರೀಕ್ಷೆಗೂ ಮೀರಿದ ಧನ ವ್ಯಯ. ಗೃಹೋಪ ವಸ್ತುಗಳ ಖರೀದಿ. ಮಿತ್ರರೊಂದಿಗೆ ಕಾಲಕಳೆಯುವಿಕೆ ವಿಚಾರ ವಿನಿಮಯ.

ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಯೋಚಿತ ವಿಷಯಗಳಲ್ಲಿ ಸಫ‌ಲತೆಯಿಂದ ಮನಃ ಸಂತೋಷ. ಗೌರವ ಆದರ ವೃದ್ಧಿ. ಉತ್ತಮ ಧನಾರ್ಜನೆ. ಗೃಹದಲ್ಲಿ ಸಂತಸದ ವಾತಾವರಣ. ವಿದ್ಯಾರ್ಥಿಗಳಿಗೆ ಅನುಕೂಲಕರ.

ಧನು: ಆರೋಗ್ಯ ಗಮನಿಸಿ. ಪಾರದರ್ಶಕತೆಗೆ ಆದ್ಯತೆ ನೀಡಿ. ಯಾವುದೇ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕೊರಗದಿರಿ. ದೂರ ಪ್ರಯಾಣ ಸಂಭವ.ನಿರೀಕ್ಷಿತ ಸ್ಥಾನಮಾನಕ್ಕಾಗಿ ಹೆಚ್ಚಿದ ಪರಿಶ್ರಮ. ಪಾಲುಗಾರಿಕಾ ವ್ಯವಹಾರಗಳಲ್ಲಿ ಅನಗತ್ಯ ಚರ್ಚೆಗೆ ಅವಕಾಶ ಕಲ್ಪಿಸದಿರಿ.

ಮಕರ: ಗುರು ಹಿರಿಯರ ಉತ್ತಮ ಸಹಕಾರ. ಮಾರ್ಗದರ್ಶನದ ಲಾಭ. ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ. ದೇವತಾ ಸ್ಥಳ ಸಂದರ್ಶನ. ಉದ್ಯೋಗದಲ್ಲಿ ಮೇಲಧಿಕಾರಿಗಳ ಪ್ರೋತ್ಸಾಹ. ಪಾಲುದಾರಿಕಾ ವ್ಯವಹಾರಗಳಲ್ಲಿ ಅಭಿವೃದ್ಧಿ. ಅವಿವಾಹಿತರಿಗೆ ವಿವಾಹ ಯೋಗ.ಕುಂಭ: ಆರೋಗ್ಯ ಗಮನಿಸಿ. ದೇಹಕ್ಕೆ ಅತಿಯಾದ ಶ್ರಮ ನೀಡದೇ ಕಾರ್ಯ ನಿರ್ವಹಿಸಿ. ದಂಪತಿಗಳಲ್ಲಿ ಪರಸ್ಪರ ಸಹಕಾರ ಪ್ರೀತಿ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಬದಲಾವಣೆ. ಪ್ರಯಾಣ ಸಂಭವ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ.

ಮೀನ: ಗೃಹೋಪ ವಸ್ತುಗಳ ಸಂಗ್ರಹ. ಪಾಲುಗಾರಿಕಾ ವ್ಯವಹಾರಗಳಲ್ಲಿ ಪ್ರಗತಿ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾದ ತೃಪ್ತಿ. ನಿಧಾನಗತಿಯಲ್ಲಿ ಧನ ಸಂಚಯನ. ದಾಂಪತ್ಯದಲ್ಲಿ ಸಂತೋಷ ವೃದ್ಧಿ. ಮಕ್ಕಳಿಂದ ಸುಖ ಇತ್ಯಾದಿ ಶುಭ ಫ‌ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next