Advertisement

ಮಂಗಳವಾರದ ರಾಶಿ ಭವಿಷ್ಯ: ಈ ರಾಶಿ ಅವರಿಗಿಂದು ಹಣಕಾಸಿನ ವಿಚಾರದಲ್ಲಿ ಪ್ರಗತಿ ಉಂಟಾಗಲಿದೆ

07:18 AM Jan 24, 2023 | Suhan S |

ಮೇಷ: ಅನಿರೀಕ್ಷಿತ ಧನಸಂಪತ್ತು ವೃದ್ಧಿ. ಉದ್ಯೋಗ ವ್ಯವಹಾರದಲ್ಲಿ ಪರರಿಂದ ಸಂದಭಕ್ಕೆ ಸರಿಯಾಗಿ ಸಹಾಯ ಒದಗಿ ಬರುವುದು. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಉತ್ತಮ ಜವಾಬ್ದಾರಿಯುತ ವಾಕ್‌ಚತುರತೆ. ಗುರುಹಿರಿಯರಿಂದ ಸಂತೋಷ .

Advertisement

ವೃಷಭ: ದೂರದ ಮಿತ್ರರ ಭೇಟಿ. ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಗುರಿ ಸಾಧನೆಯಿಂದ ನೆಮ್ಮದಿ. ಉತ್ತಮ ಧನಾರ್ಜನೆ. ಬಂಧು ಮಿತ್ರರ ಸಹಕಾರ. ದಾಂಪತ್ಯದಲ್ಲಿ ಪ್ರೀತಿ ಅನುರಾಗ ವೃದ್ಧಿ. ಆಸ್ತಿ ವಿಚಾರಗಳಲ್ಲಿ ಪರಿಶ್ರಮದಿಂದ ಮುನ್ನಡೆ.

 ಮಿಥುನ:  ಆರೋಗ್ಯ ಗಮನಿಸಿ. ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ. ಸ್ಪಷ್ಟತೆಗೆ ಆದ್ಯತೆ ನೀಡಿ. ದೂರದ ವ್ಯವಹಾರಗಳಲ್ಲಿ ಪಾಲುದಾರಿಕಾ ವೃತ್ತಿಯಲ್ಲಿ ಪ್ರಗತಿ. ನಿರೀಕ್ಷಿತ ಧನಗಮನ. ಸಾಂಸಾರಿಕ ಸುಖ ವೃದ್ಧಿ. ಮಕ್ಕಳ ನಿಮಿತ್ತ ಶ್ರಮ.

ಕರ್ಕ:  ಹೆಚ್ಚಿನ ಸ್ಥಾನ ಗೌರವಕ್ಕಾಗಿ ಪರಿಶ್ರಮ. ಅಗತ್ಯಕ್ಕೂ ಮೀರಿದ ಜವಾಬ್ದಾರಿಯಿಂದ ಮಾನಸಿಕ ಒತ್ತಡ ಎದುರಾದೀತು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಗುರು ಸಮಾನರಿಂದ ಲಾಭ. ಭೂಮ್ಯಾದಿ ವ್ಯವಹಾರ ಗಳಲ್ಲಿ ಅಡೆತಡೆ. ಅನಗತ್ಯ ಖರ್ಚು ಎದುರಾದೀತು.

ಸಿಂಹ: ನಿರೀಕ್ಷೆಗೂ ಮೀರಿದ ಧನ ಲಾಭ. ಉತ್ತಮ ವಾಕ್‌ ಚಾತುರ್ಯದಿಂದ ಕೂಡಿದ ಕಾರ್ಯ ವೈಖರಿ. ವ್ಯವಹಾರಗಳಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡುವುದರಿಂದ ಗೌರವ ಆದರಗಳು ವೃದ್ಧಿ. ಗುರುಹಿರಿಯರ ಆರೋಗ್ಯ ಗಮನಿ.

Advertisement

ಕನ್ಯಾ: ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾದ ಸಂತೋಷ. ದೇವತಾ ಸ್ಥಳ ಸಂದರ್ಶನ. ಗುರುಹಿರಿಯರ ಅವಲಂಭನೆ ಮಾರ್ಗದರ್ಶನದ ಲಾಭ. ದಾಂಪತ್ಯ ಸುಖ ತೃಪ್ತಿದಾಯಕ. ಮಿತ್ರರ ಸಹಕಾರದಿಂದ ಕೆಲಸಗಳಲ್ಲಿ ಪ್ರಗತಿ.

ತುಲಾ: ಜ್ಞಾನ ವಿವೇಕ ನಿಷ್ಠೆಯಿಂದ ಕೂಡಿದ ಧಾರ್ಮಿಕ ಚಟುವಟಿಕೆಗಳು. ಗುರುಹಿರಿಯರ ಸೂಕ್ತ ಮಾರ್ಗದರ್ಶನದ ಲಾಭ. ಮಾನಸಿಕ ನೆಮ್ಮದಿ. ತೃಪ್ತಿದಾಯಕ ದಿನ. ಭೂಮಿ ವಾಹನ ಆಸ್ತಿ ವಿಚಾರಗಳಲ್ಲಿ ಪ್ರಗತಿ. ಗೃಹದಲ್ಲಿ ಸಂಭ್ರಮದ ಪರಿಸ್ಥಿತಿ.

ವೃಶ್ಚಿಕ: ಆರೋಗ್ಯ ಗಮನಿಸಿ. ದೈಹಿಕವಾಗಿ ಹೆಚ್ಚು ಶ್ರಮ ವಹಿಸದೇ ಕಾರ್ಯಪ್ರವೃತ್ತರಾಗಿ. ದೀರ್ಘ‌ ಪ್ರಯಾಣ ಸಂಭವ. ಹಣಕಾಸಿನ ವಿಚಾರದಲ್ಲಿ ಪ್ರಗತಿ. ಅಧಿಕ ಚಿಂತಿಸದಿರಿ. ಪರರಿಗೆ ಜವಾಬ್ದಾರಿ ವಹಿಸುವಾಗ ತಿಳಿದು ನಿರ್ಣಯಿಸಿ.

ಧನು: ನಿರೀಕ್ಷಿತ ಸ್ಥಾನಮಾನ ಗೌರವಾದಿ ಸಿಕ್ಕಿದ ಸಂತೋಷ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಪಾಲುದಾರಿಕಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರ. ದಂಪತಿಗಳಿಂದ ಸಾಮರಸ್ಯ ಕಾಪಾಡಲು ಪರಿಶ್ರಮ ಎದು ರಾದೀತು. ಹಣಕಾಸಿನ ವಿಚಾರದಲ್ಲಿ ಕೊರತೆ ಇರದು.

ಮಕರ: ಪರರಿಗೆ ಸಹಾಯ ಮಾಡುವಾಗ ಪೂರ್ವಪರ ತಿಳಿದು ಕಾರ್ಯನಿರ್ವಹಿಸಿ. ದೂರ ಪ್ರಯಾಣ ಅನುಕೂಲಕಾರಿಯಾಗಲಾರದು. ಖರ್ಚಿನಲ್ಲಿ ಹಿಡಿತವಿರಲಿ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಸಫ‌ಲತೆ. ದಾಂಪತ್ಯ ತೃಪ್ತಿಕರ. ಹಿರಿಯರ ಮಾರ್ಗದರ್ಶನದ ಲಾಭ.

ಕುಂಭ: ನಿರೀಕ್ಷಿತ ಧನಾಗಮವಿದ್ದರೂ ಖರ್ಚಿಗೆ ಹಲವಾರು ದಾರಿಗಳು ತೋರಿತು. ನೂತನ ಮಿತ್ರರ ಸಂಪರ್ಕವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದರಿಂದ ಪ್ರಗತಿ. ಪ್ರಯಾಣ ಲಾಭಕರ. ಘರ್ಷಣೆಗೆ ಅವಕಾಶ ನೀಡದಿರಿ.

ಮೀನ: ಮಾನಸಿಕ ಆರೋಗ್ಯ ಸುದೃಢವಾಗಿದ್ದರೂ ದೈಹಿಕ ಆರೋಗ್ಯದ ಬಗ್ಗೆ ಗಮನವಿರಲಿ. ದಾಂಪತ್ಯದಲ್ಲಿ ತೃಪ್ತಿ ಸುಖ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ನಿರಂತರ ಧನಾರ್ಜನೆ. ಆಲೋಚನೆಗೆ ತಕ್ಕಂತೆ ಕಾರ್ಯ ನಿರ್ವಹಿಸಿ ಸಫ‌ಲತೆ. ಉದ್ಯೋಗ ವ್ಯವಹಾರಗಳಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಪ್ರಗತಿ. ಜನ ಮನ್ನಣೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next