Advertisement

ಬುಧವಾರದ ರಾಶಿ ಭವಿಷ್ಯ: ಈ ರಾಶಿ ಅವರಿಗಿಂದು ಯೋಗ್ಯ ನೆಂಟಸ್ಥಿಕೆ ಒದಗುವುದು ಬರುವುದು

08:07 AM Jan 11, 2023 | Team Udayavani |

ಮೇಷ: ಉದ್ಯೋಗ ವ್ಯವಹಾರಗಳಲ್ಲಿ ಸಾಹಸ ಪ್ರವೃತ್ತಿ. ಅಧಿಕ ಪರಿಶ್ರಮದಿಂದ ಸಫ‌ಲತೆ. ಸ್ಥಾನ ಗೌರವಾದಿ ಲಭ್ಯ. ನೆಮ್ಮದಿ ಕಮ್ಮಿ. ಬಂಧುಮಿತ್ರರಿಗೆ ಹೆಚ್ಚಿದ ಒತ್ತಡ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ಸ್ಪಷ್ಟ ನಿರ್ಧಾರದಿಂದ ನಿರೀಕ್ಷಿತ ಫ‌ಲ ಲಭ್ಯ.

Advertisement

ವೃಷಭ: ಮನೋರಂಜನೆಯಲ್ಲಿ ಕಾಲಕಳೆಯು ವಿಕೆ. ದೀರ್ಘ‌ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ  ಸ್ಥಾನಮಾನ ಗೌರವಾದಿ ಪ್ರಗತಿ. ಅವಿವಾಹಿತರಿಗೆ ವಿವಾಹ ಯೋಗ. ಯೋಗ್ಯ ಸಂಬಂಧ ಒದಗಿ ಬರುವುದು. ಬಹುವಿಧದಿಂದ ಧನ ಸಂಚಯನ.

ಮಿಥುನ:  ಕೆಲಸದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ಸಿಕ್ಕಿದ್ದರಿಂದ ಮನಃ ತೃಪ್ತಿ. ಕೀರ್ತಿ ಸಂಪಾದನೆ. ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ. ಆರೋಗ್ಯದಲ್ಲಿ ಸುಧಾರಣೆ. ದಾಂಪತ್ಯ ಸುಖ ವೃದ್ಧಿ. ಅವಿವಾಹಿತರಿಗೆ ವಿವಾಹ ಭಾಗ್ಯ ಒದಗಿಬರುವುದು.

ಕರ್ಕ:  ಹಣಕಾಸಿನ ನಿರೀಕ್ಷೆಯಲ್ಲಿ ಸಫ‌ಲತೆ. ಉತ್ತಮ ವಾಕ್‌ ಚತುರತೆಯಿಂದ ಕಾರ್ಯ ವೈಖರಿ. ದೂರದ ವಿದೇಶದ ವ್ಯವಹಾರಗಳಲ್ಲಿ ಪ್ರಗತಿ. ಸಹೋದರ ಸಮಾನರಿಂದ ಸಹೋದ್ಯೋಗಿಗಳಿಗೆ ಉತ್ತಮ ಸಹಕಾರ ಲಭ್ಯ. ಗೃಹದಲ್ಲಿ ಸಂಭ್ರಮದ ವಾತಾವರಣ.

ಸಿಂಹ: ದೂರ ಸಂಚಾರ. ಸ್ಥಾನ‌  ಗೌರವಾದಿ ವಿಚಾರಗಳಲ್ಲಿ  ಅಭಿವೃದ್ಧಿ ಪ್ರಗತಿ. ಗುರುಹಿರಿಯರ ಸಂದರ್ಭೋಚಿತ ಸಹಾಯ ಸಹಕಾರ ಲಭ್ಯ. ಜವಾಬ್ದಾರಿಯುತ ಮಾತಿನಿಂದ ವ್ಯವಹಾರಗಳಲ್ಲಿ ಶ್ರೇಯಸ್ಸು ಸಂಭವ.

Advertisement

ಕನ್ಯಾ: ಅವಿವಾಹಿತರಿಗೆ ಯೋಗ್ಯ ನೆಂಟಸ್ಥಿಕೆ ಒದಗುವುದು. ಪಾಲುದಾರಿಕಾ ವ್ಯವಹಾರಗಳಲ್ಲಿ ಅಭಿವೃದ್ಧಿ. ಆರೋಗ್ಯದಲ್ಲಿ ಗಣನೀಯ ವೃದ್ಧಿ. ಬಂಧುಮಿತ್ರರ ಸಹಕಾರ. ಗೃಹಉಪಕರಣ ವಸ್ತುಗಳ ಸಂಗ್ರಹ. ಆಸ್ತಿ ವಾಹನಾದಿ ವಿಚಾರಗಳಲ್ಲಿ ಅಭಿವೃದ್ಧಿ.

ತುಲಾ: ನಿರೀಕ್ಷಿಸಿದ ಹಣಕಾಸಿನ ಪ್ರಗತಿ. ಹೆಚ್ಚಿನ ವರಮಾನ. ದೂರದ ವ್ಯವಹಾರಗಳಲ್ಲಿ ಅಭಿವೃದ್ಧಿ ಪ್ರಗತಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮ ಅಗತ್ಯ. ಗುರುಹಿರಿಯರ ಆಶೀರ್ವಾದದಿಂದ ಸಫ‌ಲತೆ. ವಿಲಾಸೀ ಜೀವನದಲ್ಲಿ ಆಸಕ್ತಿ ಸಂಭವ.

ವೃಶ್ಚಿಕ: ಅನಿರೀಕ್ಷಿತವಾಗಿ ವಿವಾಹ ಸಂಬಂಧ ಒದಗುವುದು. ಉತ್ತಮ ಸ್ಥಾನ ಗೌರವಾದಿ ಪ್ರಾಪ್ತಿ. ಅಧಿಕ ಬಹುವಿಧದ ಧನಲಾಭ. ಜವಾಬ್ದಾರಿಯುತ ವಾಕ್‌ ಚತುರತೆಯಿಂದ ಕೆಲಸ ಕಾರ್ಯಗಳಲ್ಲಿ ಪ್ರಶಂಸೆ. ಜನಮನ್ನಣೆ ಪ್ರಾಪ್ತಿ. ಆಸ್ತಿ ವಿಚಾರಗಳಲ್ಲಿ ಪ್ರಗತಿದಾಯಕ ಬದಲಾವಣೆ.

ಧನು: ನಿರಂತರ ಕಾರ್ಯ ಚಟುವಟಿಕೆಗಳಲ್ಲಿ ಭಾಗಿ. ಆಲೋಚಿಸಿದಂತೆ ಕೆಲಸ ಕಾರ್ಯಗಳು ಯೋಜನಾಬದ್ಧವಾಗಿ ನಡೆದದ್ದರಿಂದ ಮನಃ ತೃಪ್ತಿ. ಕೀರ್ತಿ ಪ್ರಾಪ್ತಿ. ಹಣಕಾಸಿನ ವಿಚಾರದಲ್ಲಿ ವಿಳಂಬದಲ್ಲಿ ಕೈ ಸೇರುವುದು. ಗೃಹದಲ್ಲಿ ಸಂತಸದ ವಾತಾವರಣ.

ಮಕರ: ವಿದ್ಯಾರ್ಜನೆಯಲ್ಲಿ ಆಸಕ್ತಿ. ಯಶಸ್ಸು ಸಾಧಿಸಿದ ತೃಪ್ತಿ. ಮನಃ ಸಂತೋಷ. ಉದ್ಯೋಗ ವ್ಯವಹಾರಗಳಲ್ಲಿ ಜವಾಬ್ದಾರಿಯುತ ನಡೆಯಿಂದ ಪ್ರಗತಿ. ಪಾಲುದಾರಿಕಾ ವ್ಯವಹಾರಗಳಲ್ಲಿ ಒತ್ತಡ ತೋರೀತು. ಗುರುಹಿರಿಯರ ಆಶೀರ್ವಾದದಿಂದ ಸಫ‌ಲತೆ.

ಕುಂಭ: ಗೃಹಉಪಯೋಗೀ ವಸ್ತು ಸಂಗ್ರಹ. ಗೃಹದಲ್ಲಿ ಸಂಭ್ರಮದ ವಾತಾವರಣ. ಬಂಧುಮಿತ್ರರ ಆಗಮನದಿಂದ ಮನಃ ಸಂತೋಷ. ಆರೋಗ್ಯ ವೃದ್ಧಿ. ಹೆಚ್ಚಿದ ಧನಲಾಭ. ವಾಹನಾದಿ ಸೌಕರ್ಯ ಲಭ್ಯ. ಉದ್ಯೋಗ ವ್ಯವಹಾರಗಳಲ್ಲಿ ಪ್ರಶಂಸೆ.

ಮೀನ: ಅವಿವಾಹಿತರಿಗೆ ವಿವಾಹ ಯೋಗ ಕೂಡಿಬರುವುದು. ಪಾಲುದಾರಿಕೆ ವ್ಯವಹಾರಗಳಲ್ಲಿ ಪ್ರಗತಿ. ಆಸ್ತಿ ವಿಚಾರಗಳಲ್ಲಿ ವೃದ್ಧಿದಾಯಕ ಬದಲಾವಣೆ. ಬಂಧುಮಿತ್ರರ ಸಹಕಾರ. ಮಾತೃ ಸಮಾನರಿಂದ ಸಹಾಯ. ಕಲಾವಿದರಿಗೆ ವಿಪುಲ ಅವಕಾಶ ಒದಗಿ ಬರುವುದು.

Advertisement

Udayavani is now on Telegram. Click here to join our channel and stay updated with the latest news.

Next