Advertisement

ಇಂದು ನಿಮ್ಮ ಗ್ರಹಬಲ: ಈ ರಾಶಿಯವರಿಂದು ಅನಾವಶ್ಯಕ ಸಂಚಾರಕ್ಕೆ ಆಸ್ಪದ ನೀಡದಿರಿ

08:29 AM Apr 11, 2022 | Team Udayavani |

11-04-2022

Advertisement

ಮೇಷ: ಆರೋಗ್ಯ ಗಮನಿಸಿ. ಕೆಲಸ ಕಾರ್ಯಗಳಲ್ಲಿ ಪ್ರಗತಿಗೆ ಅಡ್ಡಿ ಆತಂಕಗಳು. ವಿಘ್ನ , ಅಡಚಣೆ ಆಗದಂತೆ ಸರಿಯಾಗಿ ವಿಚಾರ ಮಾಡಿ ಕಾರ್ಯ ಪ್ರವೃತ್ತರಾಗಿ. ಪರರ ಸಂಪತ್ತನ್ನು ವಿನಿಯೋಗಿಸುವಾಗ ಜಾಗೃತೆ ವಹಿಸಿ. ದೂರದ ವ್ಯವಹಾರಗಳಲ್ಲಿ ಪ್ರಗತಿ.

ವೃಷಭ: ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು. ಅನ್ಯರ ಮಾತನ್ನು ಅವಲಂಬಿಸುವಾಗ ನಿಮ್ಮತನವನ್ನು ಕಳೆದುಕೊಳ್ಳದೇ ಕಾರ್ಯಪ್ರವೃತ್ತರಾಗಿರಿ. ದೂರದ ವಿದೇಶದ ವ್ಯವಹಾರಗಳಲ್ಲಿ ಪ್ರಗತಿ. ನಿರೀಕ್ಷಿತ ಧನಾಗಮ.

ಮಿಥುನ: ಮಕ್ಕಳಿಂದ ಸುಖ. ಬಂಧುಜನರೊಂದಿಗೆ ವಿಲಾಸ. ಸ್ಥಾನ ಮಾನ ಪದವಿ ವೃದ್ಧಿ. ಶ್ರೇಯಸ್ಕರ ಕಾರ್ಯಗಳಿಂದ ಜನಮನ್ನಣೆ. ಆಚಾರ ವಿಚಾರಗಳಲ್ಲಿ ತಲ್ಲೀನತೆ. ಪಾಲುದಾರಿಕಾ ವ್ಯವಹಾರಗಳಲ್ಲಿ ಪ್ರಗತಿ. ಶ್ರಮಕ್ಕೆ ತಕ್ಕ ಪ್ರತಿಫ‌ಲ ಸಿಕ್ಕಿದ್ದರಿಂದ ಸಂತೋಷ.

ಕರ್ಕ: ಕೇವಲ ದೇವತಾರಾದನೆಯಿಂದ ನೆಮ್ಮದಿ ಲಭಿಸೀತು. ಅನಾವಶ್ಯಕ ಸಂಚಾರಕ್ಕೆ ಆಸ್ಪದ ನೀಡದಿರಿ. ಅನ್ಯರ ವಿಚಾರದಲ್ಲಿ ಭಾಗಿಯಾಗದಿರಿ. ಆದಷ್ಟು ವಿಶ್ರಾಂತಿ ಪಡೆದು ದೈಹಿಕ ಮಾನಸಿಕ ಸುಖ ಅನುಭವಿಸಲು ಪ್ರಯತ್ನಿಸಿ.

Advertisement

ಸಿಂಹ: ಆರೋಗ್ಯ ಗಮನಿಸಿ. ದಂಪತಿಗಳು ಪರಸ್ಪರ ಪ್ರೋತ್ಸಾಹಿಸಿ ಸುಖ ಕಾಣಿರಿ. ಸ್ತ್ರೀಪುರುಷರು ಪರಸ್ಪರರ ವಿಚಾರದಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಪ್ರಾಮಾಣಿಕತೆಗೆ ಆದ್ಯತೆ ನೀಡಿ. ಅನಾವಶ್ಯಕ ಸಂಚಾರ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ.

ಕನ್ಯಾ: ಆರೋಗ್ಯ ಉತ್ತಮ. ಕುಟುಂಬ ಸುಖ. ಸಭೆ ಸಮಾರಂಭಗಳಲ್ಲಿ ಭಾಗವಹಿಸುವಿಕೆ ವಾಕ್‌ ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಉತ್ತಮ ಧನಾರ್ಜನೆ. ಸಾಮಾಜಿಕ ಸುಖ ಪ್ರಾಪ್ತಿಗಾಗಿ ಹಿತೋಕ್ತಿ ಬೋದನೆ. ದಾಂಪತ್ಯ ಸುಖ ವೃದ್ಧಿ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ.

ತುಲಾ: ಆರೋಗ್ಯ ಉತ್ತಮ. ದೂರದ ಕಾರ್ಯವ್ಯವಹಾರಗಳಲ್ಲಿ ಪ್ರಗತಿ. ಅಧಿಕ ಧನಾರ್ಜನೆ. ಗುರುಹಿರಿಯರ, ಮೇಲಾಧಿಕಾರಿಗಳ ಸಹಕಾರ ಮಾರ್ಗದರ್ಶನದ ಲಾಭ. ಸಹೋದ್ಯೋಗಿ, ಸಹೋದರಾದಿ ವರ್ಗದವರಿಂದ ಪ್ರೋತ್ಸಾಹ. ಸಾಂಸಾರಿಕ ಸುಖ ತೃಪ್ತಿದಾಯಕ.

ವೃಶ್ಚಿಕ: ಅಧಿಕ ಕಾರ್ಯ ಚಟುವಟಿಕೆಗಳಿಂದ ಕೂಡಿದ ದಿನ. ಎಲ್ಲಾ ವಿಧದಲ್ಲೂ ಯಶಸ್ಸು ಲಭಿಸುವ ಅವಕಾಶ. ಈ ದಿನವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. ಗೌರವ, ಅಧಿಕ ಧನಾರ್ಜನೆ, ಗುರುಹಿರಿಯರ ಪ್ರೋತ್ಸಾಹ. ಆಸ್ತಿ ವಿಚಾರದಲ್ಲಿ ಮುನ್ನಡೆ. ಶುಭಫ‌ಲ.

ಧನು: ಆರೋಗ್ಯದಲ್ಲಿ ಸುಧಾರಣೆ. ಜವಾಬ್ದಾರಿಯುತ ಕೆಲಸ ಕಾರ್ಯ ವೈಖರಿಯಿಂದ ಜನಮನ್ನಣೆ ಸ್ಥಾನ ಸುಖ ವೃದ್ಧಿ. ಅನ್ಯರ ಸಹಕಾರ ನಿರೀಕ್ಷಿಸದೇ ಕಾರ್ಯಪ್ರವೃತ್ತರಾಗಿ. ಆಸ್ತಿ ವಿಚಾರದಲ್ಲಿ ಮುನ್ನಡೆ. ಹಿರಿಯರ ಆರೋಗ್ಯ ಗಮನಿಸಿ ಅಧ್ಯಯನ ಪ್ರವೃತ್ತರಿಗೆ ಅನುಕೂಲಕರ.

ಮಕರ: ಆರೋಗ್ಯ ಸ್ಥಿರ. ದೂರದ ವ್ಯವಹಾರಗಲ್ಲಿ ಹೆಚ್ಚಿದ ಲಾಭ, ಸ್ಥಾನಾದಿ ಸುಖ. ರಾಜಕೀಯ, ಸರಕಾರಿ ಕ್ಷೇತ್ರದಲ್ಲಿ ಅಭಿವೃದ್ಧಿ. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಸಾಂಸಾರಿಕ ಸುಖ ಹರ್ಷದಾಯಕ. ಮಕ್ಕಳ ವಿಚಾರದಲ್ಲಿ ನೆಮ್ಮದಿ.

ಕುಂಭ: ಉತ್ತಮ ವಾಕ್‌ಚತುರತೆ. ಗಾಂಭೀರ್ಯ ಪ್ರದರ್ಶನದಿಂದ ಎಲ್ಲಾ ವ್ಯವಹಾರಗಳಲ್ಲಿ ಜಯ. ಆಸ್ತಿ ವಾಹನಾದಿ ಲಾಭ. ಅಧಿಕ ಗೌರವದಿಂದ ಕೂಡಿದ ಧನಾರ್ಜನೆ. ಧಾರ್ಮಿಕ ಚಟುವಟಿಕೆಗಳಲ್ಲಿ ನೇತೃತ್ವ. ಆರೋಗ್ಯದಲ್ಲಿ ಗಣನೀಯ ವೃದ್ಧಿ

ಮೀನ: ಉತ್ತಮ ಆರೋಗ್ಯ. ಜವಾಬ್ದಾರಿಯುತ ಉದ್ಯೋಗ ವ್ಯವಹಾರದಿಂದ ಎಲ್ಲರ ಪ್ರಶಂಸೆ ಸಂಭವ. ಸಂದರ್ಭಕ್ಕೆ ಸರಿಯಾದ ಉಪಾಯ ಆಲೋಚನೆಯಿಂದ ಕೂಡಿದ ಕಾರ್ಯವೈಖರಿ. ದೂರಪ್ರಯಾಣದಿಂದ ಧನಾರ್ಜನೆ ಸಂಭವ. ಸಾಂಸಾರಕ್ಕೆ ಗಮನ ನೀಡಿ. ಆಸ್ತಿ, ಭೂಮಿ, ವಾಹನಾದಿ ವಿಚಾರದಲ್ಲಿ ತಾಳ್ಮೆ. ವಿದ್ಯಾರ್ಥಿಗಳಿಗೆ ಹಿರಿಯರಿಂದ ಪ್ರೋತ್ಸಾಹ

Advertisement

Udayavani is now on Telegram. Click here to join our channel and stay updated with the latest news.

Next