Advertisement

ಡೈಲಿ ಡೋಸ್‌: ಮತದಾರ ಪ್ರಬುದ್ಧ ; ಕೊಟ್ಟಿದ್ದನ್ನು ವಾಪಾಸು ಕೇಳಿಯೇ ಕೇಳುತ್ತಾನೆ

08:55 PM Mar 10, 2023 | Team Udayavani |

ಹಲವು ಬಾರಿ ಪ್ರತಿ ಕ್ಷೇತ್ರದಲ್ಲೂ ಕೆಲವು ಯೋಜನೆಗಳ ಕಡತಗಳಿಗೂ ಸುವರ್ಣ ವರ್ಷದ ದುಃಖಾಚರಣೆಯ ಹೊತ್ತಾಗಿರುತ್ತದೆ. ಈ ಮಾತು ಚುನಾವಣಾ ಸ್ಥಳೀಯ ಪ್ರಣಾಳಿಕೆಗೂ ಅನ್ವಯವಾಗುತ್ತದೆ. ಕೆಲವೊಮ್ಮೆ ಪೂರ್ಣ ಬಹುಮತದೊಂದಿಗೆ ಸರಕಾರಗಳು ಬಂದು, ಸ್ಥಳೀಯವಾಗಿಯೂ ಅದೇ ಪಕ್ಷಗಳ ಶಾಸಕ ರಿದ್ದಾಗಲೂ ಆ ಯೋಜನೆಗಳಿಗೆ ಮುಕ್ತಿ ಸಿಗುವು ದಿಲ್ಲ. ಇದು ಅನೂಚಾನವಾಗಿ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ನಡೆದು ಬಂದಿರುವ ಸಂಗತಿ. ಹಾಗಾಗಿ ಅನುಷ್ಠಾನಕ್ಕೆ ವರ್ಷಗಳು ಕಳೆದು, ಜನರು ಸಮಸ್ಯೆ ಅನುಭವಿಸುತ್ತಾರೆ.

Advertisement

ಇಂತಹ ಅನೇಕ ಯೋಜನೆಗಳು ಎಲ್ಲ ಜಿಲ್ಲೆ ಗಳಲ್ಲೂ ಇವೆ, ನಮ್ಮಲ್ಲೂ ಇವೆ. ತಾಂತ್ರಿಕ ಕಾರಣದ ನೆಪವೊಡ್ಡಿ ಯೋಜನೆಯನ್ನೇ ಮೂಲೆಗುಂಪು ಮಾಡುವುದೂ ಇದೆ. ಇನ್ನು ಕೆಲವು ಚುನಾವಣೆ ಸಂದರ್ಭದಲ್ಲಿ ವೇಗ ಸಿಕ್ಕು, ಶಿಲಾನ್ಯಾಸವಾಗಿ ಬಿಡುತ್ತವೆ. ಆದರೆ ಅವುಗಳ ಭವಿಷ್ಯ ನಿರ್ಧ ರಿಸುವುದು ಅನಂತರದ ಅವಧಿಯಲ್ಲಿ ಬರುವ ಪಕ್ಷ, ಸರಕಾರ ಹಾಗೂ ಪ್ರತಿನಿಧಿಗಳು. ಅದರಿಂದಲೇ ನಮ್ಮಲ್ಲಿ ಎಷ್ಟೋ ಯೋಜನೆಗಳು ಕಡತದಲ್ಲೇ ಸಂಭ್ರಮಾಚರಣೆಯನ್ನು ಅನುಸರಿಸುವಂತಾಗಿದೆ.

ರಸ್ತೆ, ನೀರು, ಸಂಪರ್ಕ ಸೇತುವೆ, ಒಳಚರಂಡಿ ನಿರ್ಮಾಣ, ನದಿದಂಡೆ ನಿರ್ಮಾಣ, ಕಡಲ್ಕೊರೆತ ತಡೆ ಹತ್ತಾರು ಯೋಜನೆಗಳನ್ನು ಪಟ್ಟಿ ಮಾಡಬಹುದು. ಇವು ಚುನಾವಣೆಯಲ್ಲಿ ಆಶ್ವಾಸನೆಯಷ್ಟೇ ಎನಿಸಿಬಿಡುತ್ತವೆ. ಹೀಗಾಗುವುದಕ್ಕೆ ಮೂರೇ ಕಾರಣಗಳು. ಒಂದು ಆ ಯೋಜನೆಯ ಕಾರ್ಯ ಸಾಧ್ಯತೆ ಬಗ್ಗೆ ಸಮರ್ಪಕವಾಗಿ ಯೋಚಿಸದೇ ಘೋಷಿಸಿಬಿಡುವುದು. ಬಳಿಕ ತಾಂತ್ರಿಕವಾಗಿ ಅಪ್ರಯೋಜಯಕ ಎಂದಾಗ ಸುಮ್ಮನಾಗುವುದು, ಎರಡನೆಯದಾಗಿ ಇಚ್ಛಾಶಕ್ತಿಯ ಕೊರತೆ ಹಾಗೂ ಆ ಯೋಜನೆ ಆದ್ಯತೆಯ ಪಟ್ಟಿಯಲ್ಲಿ ಇಲ್ಲದಿ ರುವುದು. ಮೂರನೆಯದಾಗಿ ಸರಕಾರಗಳು ಬದ ಲಾದಾಗ, ಪಕ್ಷಗಳೂ ಬದಲಾದಾಗ ಆ ಪಕ್ಷದ ಯೋಜನೆ ನಾವೇಕೆ ಜಾರಿಗೊಳಿಸಬೇಕು ಎಂದು ಕಡೆಗಣಿಸವುದು. ಇದಕ್ಕೆ ಎಂದಾದರೂ ಒಂದು ದಿನ ಮುಕ್ತಿ ಸಿಗಲೇಬೇಕು, ಆದ ಇನ ಇಂದೇ ಆಗಲಿ.

ಕೊನೆಯ ಡೋಸ್‌ ಎಂದರೆ, ಯೋಜನೆಗಳು ಘೋಷಣೆಗೆ ಸೀಮಿತವಾಗದೇ ನಿರ್ದಿಷ್ಟ ಕಾಲ ಮಿತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವೂ ಆಗಬೇಕು. ಇದರಿಂದ ಮಾತ್ರ ಜನ ಮನ್ನಣೆ ಗಳಿಸಲು ಸಾಧ್ಯ. ಮತದಾರರು ಪ್ರಬುದ್ಧರು, ಒಂದು ದಿನ “ಕೊಟ್ಟದ್ದನ್ನು” ವಾಪಸು ಕೇಳಿಯೇ ಕೇಳುತ್ತಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next