Advertisement

ಮೊಸರು ಕುಡಿಕೆ ಆಡುವವರಿಗೆ ಕ್ರೀಡಾ ಮೀಸಲಾತಿ!

09:10 PM Aug 18, 2022 | Team Udayavani |

ಮುಂಬೈ: ಮಹಾರಾಷ್ಟ್ರದ ಪ್ರಸಿದ್ಧ ಮೊಸರು ಕುಡಿಕೆ ಆಟವನ್ನು “ಸಾಹಸ ಕ್ರೀಡೆ’ ಎಂದು ಗುರುತಿಸುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಗುರುವಾರ ಘೋಷಿಸಿದ್ದಾರೆ.

Advertisement

ಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ವಿಶೇಷವಾಗಿ ಆಡುವ ಈ ಆಟದಲ್ಲಿ ಪರಿಣತಿ ಪಡೆದವರು ಕ್ರೀಡಾ ಮೀಸಲಾತಿ ಅಡಿಯಲ್ಲಿ ಸರ್ಕಾರಿ ಕೆಲಸಗಳಿಗೆ ಅರ್ಜಿ ಸಲ್ಲಿಸಬಹುದು ಎಂದೂ ತಿಳಿಸಿದ್ದಾರೆ.

ಮೊಸರು ಕುಡಿಕೆ ಆಡುವಾಗ ಆಟಗಾರರು ಕೆಳಕ್ಕೆ ಬಿದ್ದು, ಮರಣ ಹೊಂದಿದರೆ ಅವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಂಭೀರವಾಗಿ ಗಾಯಗೊಂಡವರಿಗೆ 7 ಲಕ್ಷ ರೂ. ಹಾಗೂ ಮೂಳೆ ಮುರಿದುಕೊಂಡವರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಅದಲ್ಲದೆ ಅವರ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನೂ ಸರ್ಕಾರವೇ ಭರಿಸಲಿದೆ ಎಂದು ಸಿಎಂ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next