Advertisement

ದಾಸಕೊಕ್ಕರೆ ಪಕ್ಷಿಗಳ ಹಿಂಡು ಪ್ರತ್ಯಕ್ಷ

04:58 PM Aug 13, 2018 | Team Udayavani |

ಸಿರುಗುಪ್ಪ: ತಾಲೂಕಿನ ಇಟಿಗಿ ಹಾಳು ಹಾಗೂ ಬಿ.ಎಂ.ಸೂಗೂರು ಗ್ರಾಮಗಳಿಗೆ ಸೇರಿದ ಜಮೀನಿನಲ್ಲಿ ಅಪರೂಪದ ದಾಸಕೊಕ್ಕರೆಗಳ ಹಿಂಡು ಕಂಡು ಬಂದಿದೆ. ಈ ಪಕ್ಷಿಯನ್ನು ಆಂಗ್ಲ ಭಾಷೆಯಲ್ಲಿ ಪೆಯಿಂಟೆಡ್‌ ಸ್ಟೋರ್ಕ್‌
ಎಂದು ಕರೆಯಲಾಗುತ್ತಿದ್ದು, ಇವು ಕೊಕ್ಕರೆ ಜಾತಿಗೆ ಸೇರಿದ ಪ್ರಭೇದವಾಗಿದೆ.

Advertisement

ಗಾತ್ರದಲ್ಲಿ ದೊಡ್ಡದಾಗಿದ್ದು ನೀಳವಾದ ಕಾಲು ಮತ್ತು ಕುತ್ತಿಗೆ ಹೊಂದಿದ್ದು, ಬಿಳಿ ಬೂದು ಮಿಶ್ರಿತ ಬಣ್ಣ ಹೊಂದಿವೆ. ತಲೆ, ಕೊಕ್ಕು ಹಳದಿ ಕೆಂಪು ಬಣ್ಣ ಹೊಂದಿದ್ದು, ಮುಂಭಾಗದಲ್ಲಿ ಕೊಂಚ ಕೊಂಕ್‌ ಇದ್ದು ರೆಕ್ಕೆಗಳ ಮೇಲೆ ಕಪ್ಪು ಗೀರುಗಳು, ರೆಕ್ಕೆಯ ಕೆಳಭಾಗದಲ್ಲಿ ತಿಳಿಗುಲಾಬಿ ಬಣ್ಣ ಹೊಂದಿವೆ. ಈ ಪಕ್ಷಿಗಳು ಹೆಚ್ಚಾಗಿ ಗುಂಪುಗಳಾಗಿ ಇರುತ್ತವೆ, ಇವು ಅತಿ ಜೋಗು ಪ್ರದೇಶಗಳಲ್ಲಿ, ಭತ್ತದ ಗದ್ದೆಗಳಲ್ಲಿ, ಹಳ್ಳಗಳ ದಂಡೆಯಲ್ಲಿ, ನದಿ ಪಾತ್ರದಲ್ಲಿ ದೊರೆಯುವ ಕಪ್ಪೆ ಮೀನುಗಳನ್ನು ತಿನ್ನಲು ಹೆಚ್ಚಾಗಿ ಬರುತ್ತವೆ. 

ಜೂನ್‌ನಿಂದ ಆಗಸ್ಟ್‌ ವರೆಗೂ ಒಟ್ಟಾಗಿ ಎತ್ತರದ ಮರಗಿಡಗಳಲ್ಲಿ ಗೂಡು ಕಟ್ಟಿ ಸಂತಾನಾಭಿವೃದ್ಧಿ ಮಾಡುತ್ತವೆ. ನೀರಾವರಿ ಪ್ರದೇಶವಲ್ಲದ ನದಿ ಹಳ್ಳ ಇಲ್ಲದ ಈ ಗ್ರಾಮದ ಖುಷ್ಕಿ ಜಮೀನುಗಳಲ್ಲಿ ಈ ಪಕ್ಷಿಗಳು ಕಾಣಿಸಿಕೊಂಡಿರುವುದು ಅಪರೂಪವಾಗಿದೆ.

ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಈ ನೀರಿನಲ್ಲಿ ಕಪ್ಪೆಮೀನುಗಳು ಹೆಚ್ಚಾಗಿದ್ದು, ಇವುಗಳನ್ನು
ತಿನ್ನಲು ಈ ಭಾಗಕ್ಕೆ ದಾಸಕೊಕ್ಕರರೆ ಪಕ್ಷಿಗಳು ಬಂದಿರಬಹುದೆಂದು ಹವ್ಯಾಸಿ ಪಕ್ಷಿ ಛಯಾಗ್ರಾಹಕ ಅಂದನಗೌಡ ದಾನಪ್ಪಗೌಡರ ಅಭಿಪ್ರಾಯ ಪಟ್ಟಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next