“ಸಾಹೇಬ’ ಅಂದಾಗ ಮಾಸ್ ಫೀಲ್ ಬರುತ್ತೆ. ಖಂಡಿತಾ ಇದು ಮಾಸ್ ಸಿನಿಮಾ ಅಲ್ಲ. ಎಮೋಶನಲ್ ಜರ್ನಿ ಎನ್ನಬಹುದು. ನಾನಿಲ್ಲಿ ತುಂಬಾ ಸಾಫ್ಟ್ ಕ್ಯಾರೆಕ್ಟರ್ ಮಾಡಿದ್ದೇನೆ. ಎಲ್ಲರಲ್ಲೂ ಕ್ಲೋಸ್ ಆಗಿರುವ, ಇಂಟಲಿಜೆಂಟ್ ಹುಡುಗನ ಪಾತ್ರ. ರವಿಚಂದ್ರನ್ ಅವರ ಮಗ ಅಂದಾಗ ಬೇರೆ ತರಹದ ಇಂಟ್ರೋಡಕ್ಷನ್ ಇರುತ್ತೆ, ತುಂಬಾ ಲ್ಯಾವಿಶ್ ಆಗಿ ಬರ್ತಾನೆ ಎಂದು ಎಲ್ಲರು ಅಂದ್ಕೊಂಡಿರ್ತಾರೆ, ಆದರೆ ನಾನು, ಡ್ಯಾಡಿ ಅವೆಲ್ಲ ಬೇಡ ಎಂದು ನಿರ್ಧರಿಸಿ ಈ ತರಹದ ಪಾತ್ರ ಆಯ್ಕೆ ಮಾಡಿದ್ದೀವಿ.
Advertisement
* ಮೊದಲು ಕಥೆ ಕೇಳಿದ್ದು ನೀವಾ, ನಿಮ್ಮ ಡ್ಯಾಡಿನಾ?ಮೊದಲು ನಾನೇ ಕಥೆ ಕೇಳಿದೆ. ಅದಾದ ನಂತರ ಡ್ಯಾಡಿಗೆ ಹೇಳಿದೆ. ಕೇಳಿದ ಕೂಡಲೇ ಇಷ್ಟಪಟ್ಟು, ಮಾಡು ಅಂದರು.
ಆರಂಭದಲ್ಲಿ ಮ್ಯೂಸಿಕಲ್ ಚೇಂಜ್‌ನಿಂದಾಗಿ ಸ್ವಲ್ಪ ತಡವಾಯಿತು. ಈಗ ಅನಿಮಲ್ ಸೆನ್ಸಾರ್ ಪ್ರಮಾಣ ಪತ್ರ ಸಿಗಬೇಕು. ಚಿತ್ರದಲ್ಲಿ ಎರಡು ಆನೆಗಳನ್ನು ಬಳಸಿದ್ದೇವೆ. ಹಾಗಾಗಿ, ಅನಿಮಲ್ ಬೋರ್ಡ್‌ನಿಂದ ಪ್ರಮಾಣ ಪತ್ರಕ್ಕಾಗಿ ಕಾಯುತ್ತಿದ್ದೇವೆ. ಈ ತಿಂಗಳು ಸಿನಿಮಾ ಬಿಡುಗಡೆಯಾಗುತ್ತಿದೆ. * ಮೊದಲು ಆರಂಭವಾಗಿದ್ದು ನಿಮ್ಮ “ರಣಧೀರ’ ಚಿತ್ರ. ಆದರೆ, ನೀವು ಲಾಂಚ್ ಆಗುತ್ತಿರೋದು ಈಗ “ಸಾಹೇಬ’ ಮೂಲಕ. ಈ ಬಗ್ಗೆ ಏನಂತೀರಿ?
“ರಣಧೀರ’ ನಂತರ ಡ್ಯಾಡಿ, “ಅಪೂರ್ವ’ ಲಾಂಚ್ ಮಾಡಿದ್ದರಿಂದ ಸ್ವಲ್ಪ ತಡವಾಯ್ತು. ಅವರು ತುಂಬಾ ಪರ್‌ಫೆಕ್ಷನ್ ಬಯಸುತ್ತಾರೆ. ಅವರಿಗೆ ಇಷ್ಟ ಆಗಿಲ್ಲ ಅಂದ್ರೆ, ಅದು ಎಷ್ಟೇ ಖರ್ಚು ಮಾಡಿ ಚಿತ್ರೀಕರಣ ಮಾಡಿದ್ದರೂ ಅದನ್ನು ಪಕ್ಕಕ್ಕಿಟ್ಟು ಬೇರೇನು ಯೋಚಿಸುತ್ತಾರೆ. ನಾನು ಅವರ ಭಾವನೆಗಳನ್ನು ಗೌರವಿಸುತ್ತೇನೆ. ಅವರ ಚಿಂತನೆಯ ಹಿಂದೆ ಸಿನಿಮಾವನ್ನು ಬೇರೆ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶವಿರುತ್ತದೆ. ಹಾಗಾಗಿ, “ರಣಧೀರ’ ಟೈಮ್ ತೆಗೆದುಕೊಳ್ಳುತ್ತಿದೆ. ಹೀಗಿರುವಾಗ ಜಯಣ್ಣ ಅವರು ಫೋನ್ ಮಾಡಿ, ಹೀಗೊಂದು ಕಥೆ ಇದೆ ಎಂದರು. ಡ್ಯಾಡಿ, ಹೋಗಿ ಕೇಳು, ಯಾರೇ ಕಥೆ ಹೇಳಿದರೂ ಕೇಳಬೇಕು, ಎಲ್ಲಿ ಒಳ್ಳೆಯ ಕಥೆ ಸಿಗುತ್ತೋ ಗೊತ್ತಿಲ್ಲ ಅಂದರು. ಅದರಂತೆ ಕೇಳಿದೆ. ಕಥೆ ಇಷ್ಟವಾಯ್ತು.
Related Articles
ಖಂಡಿತಾ ಬೇಸರವಿಲ್ಲ. ಮೊದಲ ಸಿನಿಮಾದಲ್ಲೇ ಡ್ಯಾಡಿ ಜೊತೆ ಆ್ಯಕ್ಟ್ ಮಾಡೋದು ಭಯನೇ. ಈಗ ಎರಡೂ¾ರು ಸಿನಿಮಾ ಆದ್ಮೇಲೆ ಧೈರ್ಯವಾಗಿ ನಟಿಸಬಹುದು. ಅದಕ್ಕಿಂತ ಹೆಚ್ಚಾಗಿ “ರಣಧೀರ’ ಯಾವತ್ತು ಬೇಕಾದರೂ ಆರಂಭವಾಗಬಹುದು. ನಾಳೆ ಡ್ಯಾಡಿ ಬಂದು, “ಮೇಕಪ್ ಹಾಕಿಕೋ’ ಅಂದ್ರು ನಾನು ರೆಡಿ.
Advertisement
* ಡ್ಯಾಡಿಯಿಂದು ಏನೇನು ಕಲಿತ್ತಿದ್ದೀರಿ?ಇವತ್ತು ಏನೇನು ಕಲಿತಿದ್ದೀನೋ ಅವೆಲ್ಲವೂ ಅವರಿಂದಲೇ. ಬಾಡಿ ಲಾಂಗ್ವೇಜ್ ಹೇಗಿರಬೇಕು, ಲುಕ್ ಹೇಗಿರಬೇಕು, ನಟನೆಯಲ್ಲಿ ನಮ್ಮ ಫೇಸ್ ಹೇಗೆ ಮಾತನಾಡಬೇಕು ಎಂಬುದನ್ನು ಡ್ಯಾಡಿಯಿಂದಲೇ ಕಲಿತಿದ್ದು. ಒಂದೊಂದು ಸಿನಿಮಾ ನೋಡಿದಾಗಲೂ ಡ್ಯಾಡಿ, “ನೋಡು ಆ ನಟ ಎಷ್ಟು ಚೆನ್ನಾಗಿ ನಟಿಸಿದ್ದೇನೆ’ ಎನ್ನುತ್ತಾ ಸೂಕ್ಷ್ಮವಾಗಿ ಗಮನಿಸಲು ಹೇಳುತ್ತಿದ್ದರು. ಅವೆಲ್ಲವೂ ನನಗೆ ದೊಡ್ಡ ಪ್ಲಸ್. *ನಿಮ್ಮ ಡ್ಯಾಡಿ ಅವರ ಸಿನಿಮಾ ಬಗ್ಗೆ ನಿಮ್ಮಲ್ಲೇನಾದರೂ ಮಾತನಾಡುತ್ತಾರಾ?
ಮಾತನಾಡುತ್ತಾರೆ, ನಾವು ಮನೆಯಲ್ಲಿ ಸಿನಿಮಾ ಬಿಟ್ಟು ಬೇರೇನು ಮಾತನಾಡೋದಿಲ್ಲ. ಮೊನ್ನೆ “ರಾಜೇಂದ್ರ ಪೊನ್ನಪ್ಪ’ ಎಡಿಟ್ ಮಾಡಿದ್ದನ್ನು ತೋರಿಸಿ, ಅದರ ಬಗ್ಗೆಯೂ ಮಾತನಾಡಿದ್ದಾರೆ. ನನಗೆ ಅಪ್ಪ ಅಂದ್ರೆ ಗೌರವ ಜಾಸ್ತಿ. ಅವರು ತುಂಬಾ ಪರ್‌ಫೆಕ್ಷನ್ ಬಯಸುತ್ತಾರೆ. ಜೊತೆಗೆ ಏನೇ ಆದರೂ ನೇರವಾಗಿಬೇಕು ಎನ್ನುತ್ತಾರೆ. * ನಿಮ್ಮ ಡ್ಯಾಡಿ “ಕುರುಕ್ಷೇತ್ರ’ದಲ್ಲಿ ಕೃಷ್ಣನಾಗಿ ನಟಿಸುತ್ತಿದ್ದಾರೆ. ನಿರೀಕ್ಷೆ ಎಷ್ಟಿದೆ?
ನಾನಂತೂ ಅವರನ್ನು ಆ ಗೆಟಪ್‌ನಲ್ಲಿ ನೋಡಲು ಕಾತುರನಾಗಿದ್ದೇನೆ. ಕ್ಲೀನ್ ಶೇವ್, ಆ ಗೆಟಪ್ ಡ್ಯಾಡಿ ಹೇಗೆ ಕಾಣುತ್ತಾರೆಂದು ನೋಡಬೇಕು. ಈ ಹಿಂದೆ ಇಂತಹ ಪಾತ್ರ ಅವರು ಮಾಡಿರಲಿಲ್ಲ. ಅವರು ಕೂಡಾ ಈ ಪಾತ್ರದ ಬಗ್ಗೆ ತುಂಬಾ ಎಕ್ಸೆ„ಟ್ ಆಗಿದ್ದಾರೆ. ಅದಕ್ಕಾಗಿ ತಯಾರಾಗುತ್ತಿದ್ದಾರೆ. * ನಿಮ್ಮ ತಮ್ಮ ವಿಕ್ರಮ್ ಕೂಡಾ ಹೀರೋ ಆಗಿದ್ದಾರೆ?
ಅವನು ಬಾರ್ನ್ ಆ್ಯಕ್ಟರ್. ಚಿಕ್ಕ ವಯಸ್ಸಿನಲ್ಲೇ ಡ್ಯಾನ್ಸ್, ಫೈಟ್ ಮಾಡುತ್ತಿದ್ದ. ಟೆಕ್ನಿಕಲಿ ತುಂಬಾ ಸ್ಟ್ರಾಂಗ್ ಇದ್ದಾನೆ. ಈಗ ಆತ ಪರ್‌ಫಾರ್ಮೆನ್ಸ್ ಮಾಡಬೇಕು. ಆತನಿಗೆ ನನ್ನ ಬೆಂಬಲ ಇದ್ದೇ ಇರುತ್ತೆ. ಅವನು ಸ್ವಲ್ಪ ಆಚೀಚೆ ಹೋದ್ರು ನಾನು ಈ ಕಡೆ ಎಳೀತ್ತೇನೆ. ಅವನು ಸಿನಿಮಾ ಮಾಡ್ತಿದ್ದಾನೆ, ನನಗೆ ಟೆನÒನ್ ಜಾಸ್ತಿ. ಏಕೆಂದರೆ ವಿಕ್ರಮ್ ಅಂದ್ರೆ ಚಿತ್ರರಂಗದದಲ್ಲಿ ನಿರೀಕ್ಷೆ ಜಾಸ್ತಿ ಇದೆ. ಆತ ಹೈಟ್ ಇದ್ದಾನೆ, ರಗಡ್ ಲುಕ್ ಇದೆ. ನನ್ನನ್ನು ನೋಡಿದವರು ರವಿಸಾರ್ ತರಹನೇ ಅಂತಾರೆ. ಹಾಗಾಗಿ, ತಮ್ಮನ ಜೊತೆಗೆ ಇರ್ತೇನೆ. * ನೀವು ಯಾವ ಜಾನರ್‌ನಲ್ಲಿ ಗುರುತಿಸಿಕೊಳ್ಳಲು ಇಷ್ಟಪಡುತ್ತೀರಿ?
ನನಗೆ ಯಾವುದೇ ಒಂದು ಜಾನರ್‌ನ ಹೀರೋ ಎಂದು ಬೋರ್ಡ್ ಹಾಕಿಕೊಳ್ಳಲು ಇಷ್ಟವಿಲ್ಲ. ಒಳ್ಳೆಯ ಕಥೆಯಲ್ಲಿ ನಟಿಸಬೇಕು. ಅದು ಲವ್ ಆಗಲಿ, ಆ್ಯಕ್ಷನ್ ಆಗಲಿ, ಅದು ನನಗೆ ಬೇಕಿಲ್ಲ. ಸಿನಿಮಾ ಜನರಿಗೆ ಖುಷಿಕೊಡಬೇಕು ಅಷ್ಟೇ. * ಮನೆಯಲ್ಲಿ ಈಗ ಮೂವರು ಹೀರೋಗಳಿದ್ದೀರಿ. ಹೇಗನಿಸ್ತಾ ಇದೆ?
ನಮ್ಮನ್ನು ಅಪ್ಪ -ಅಮ್ಮ ಆ ತರಹ ಬೆಳೆಸಿಲ್ಲ. ಕ್ಯಾಮರಾ ಮುಂದೆ ಬಂದಾಗಲಷ್ಟೇ ಹೀರೋ. ಅಪ್ಪನಿಗೆ ಖುಷಿ ಇದೆ. ಮೊನ್ನೆ ಮಮ್ಮಿಯತ್ರ ಹೇಳ್ತಾ ಇದ್ರು, ಮನೆಯಲ್ಲಿ ಮೂರು ಜನ ಹೀರೋ ಖುಷಿನಾ ಎಂದು. ಅವರಿಗೆ ಆ ತರಹದ ಹೆಮ್ಮೆ ಇದೆ. * ಮುಂದಿನ ಸಿನಿಮಾ?
ಒಂದಷ್ಟು ಕಥೆ ಕೇಳಿದ್ದೇನೆ. ಯಾವುದನ್ನೂ ಒಪ್ಪಿಲ್ಲ. “ಸಾಹೇಬ’ನಿಗಾಗಿ ಎದುರು ನೋಡುತ್ತಿದ್ದೇನೆ. ನನಗೆ ಆ್ಯಕ್ಟಿಂಗ್ ಬರುತ್ತೆ, ಬರಲ್ಲ ಅನ್ನೋ ಜನರ ಕಾಮೆಂಟ್‌ಗೆ ಕಾಯ್ತಾ ಇದ್ದೇನೆ. ಒಳ್ಳೊಳ್ಳೆ ಕಥೆಗಳನ್ನು ಪಕ್ಕಕ್ಕಿಡುವಾಗ ಬೇಜಾರಾಗುತ್ತೆ. ಆದರೆ ಜನ ನನ್ನ ಬಗ್ಗೆ ಏನ್ ಹೇಳ್ತಾರೆ ಅನ್ನೋದು ಗೊತ್ತಿಲ್ಲ. ಕೋಟಿ ಜನರ ಕಾಮೆಂಟ್ಸ್ ಕೇಳಲು ಕಾಯ್ತಾ ಇದ್ದೀನಿ. “ಸಾಹೇಬ’ ನಂತರ “ವಿಐಪಿ’ ಬರಲಿದೆ. ಅದು ಕೂಡಾ ವಿಭಿನ್ನವಾಗಿದೆ. ಧನುಶ್ ಅವರ 25ನೇ ಚಿತ್ರ, ನನ್ನ 2ನೇ ಚಿತ್ರವಾಗಿದೆ. ಅಲ್ಲಿ ಗಡ್ಡಬಿಟ್ಟು, ಬೇರೆ ತರಹ ಕನ್ನಡ ಮಾತನಾಡಿದ್ದೇನೆ.