Advertisement

76 ಸಾವಿರ ಕೋ.ರೂ.ಗಳ ಯುದ್ಧ ಸಲಕರಣೆ; ರಕ್ಷಣ ಸಚಿವರ ಅಧ್ಯಕ್ಷತೆಯ ಡಿಎಸಿ ವತಿಯಿಂದ ಸಮ್ಮತಿ

12:19 AM Jun 07, 2022 | Team Udayavani |

ಹೊಸದಿಲ್ಲಿ: “ಆತ್ಮನಿರ್ಭರ ಭಾರತ’ ಪರಿ ಕಲ್ಪನೆಯಡಿ ಭಾರತೀಯ ಸೇನಾ ಪಡೆಗಳ ಆಧುನೀಕರಣಕ್ಕಾಗಿ ಸಲ್ಲಿಸಲಾಗಿದ್ದ 76 ಸಾವಿರ ಕೋಟಿ ರೂ.ಗಳ ಪ್ರಸ್ತಾವನೆಗೆ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದ ರಕ್ಷಣ ಸಾಮಗ್ರಿ ಖರೀದಿ ಮಂಡಳಿ (ಡಿಎಸಿ) ಒಪ್ಪಿಗೆ ನೀಡಿದೆ. ಈ ಪ್ರಸ್ತಾವನೆಯಲ್ಲಿ, ಭಾರತೀಯ ನೌಕಾಪಡೆಗೆ
ಯುದ್ಧ ಹಡಗುಗಳನ್ನು ಪೂರೈಸುವ ಯೋಜನೆಯೂ ಸೇರಿದೆ.

Advertisement

ಈ ಒಪ್ಪಿಗೆಯಿಂದಾಗಿ, ಯುದ್ಧ ಸಾಮಗ್ರಿ ಗಳಿಗಾಗಿ ಭಾರತ, ವಿದೇಶಗಳ ಮೇಲೆ ಅವಲಂಬಿತವಾಗುವುದು ತಪ್ಪಲಿದೆ ಎಂದು ಮೂಲಗಳು ತಿಳಿಸಿವೆ.

ಯಾವ್ಯಾವುದಕ್ಕೆ ಒಪ್ಪಿಗೆ?
ರಫ್ ಟರೈನ್‌ ಫೋರ್ಕ್‌ ಲಿಫ್ಟ್ ಟ್ರಕ್‌ಗಳು (ಆರ್‌ಟಿಎಫ್ಎಲ್‌ಟಿ), ಬ್ರಿಡ್ಜ್ ಲೇಯಿಂಗ್‌ ಟ್ಯಾಂಕ್‌ಗಳು (ಬಿಎಲ್‌ಟಿ), ವ್ಹೀಲ್ಡ್‌ ಆರ್ಮರ್ಡ್‌ ಫೈಟಿಂಗ್‌ ಟ್ರಕ್‌ಗಳು (ಡಬ್ಲ್ಯುಎಚ್‌ ಎಎಫ್ವಿ), ಆ್ಯಂಟಿ- ಟ್ಯಾಂಕ್ಡ್ ಗೈಡೆಡ್‌ ಕ್ಷಿಪಣಿಗಳು (ಎಟಿಜಿಎಂ), ವೆಪನ್‌ ಲೊಕೇಟಿಂಗ್‌ ರೇಡಾರ್‌ಗಳನ್ನು (ಡಬ್ಲ್ಯುಎಲ್‌ಆರ್‌) ಭಾರತೀಯ ಸೇನೆಗಾಗಿ ದೇಶೀಯ ಕಂಪೆನಿಗಳಿಂದ ಕೊಳ್ಳಲು ಪ್ರಸ್ತಾವನೆ.

ಭಾರತೀಯ ನೌಕಾಪಡೆಗೆ ಮುಂದಿನ ತಲೆಮಾರಿನ ಯುದ್ಧ ನೌಕೆಗಳನ್ನು (ಎನ್‌ಜಿಸಿ) 36 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಯೋಜನೆ. ಅದರ ಜತೆಗೆ ಕಣ್ಗಾವಲಿಗೆ, ಭದ್ರತಾ ಕಾರ್ಯಾಚರಣೆಗೆ, ಸಫೇìಸ್‌ ಆ್ಯಕ್ಷನ್‌ ಗ್ರೂಪ್‌ಗೆ (ಎನ್‌ಎಜಿ), ಸರ್ಚ್‌ ಆ್ಯಂಡ್‌ ಅಟ್ಯಾಕ್‌ಗೆ, ಕೋಸ್ಟಲ್‌ ಡಿಫೆನ್ಸ್‌ಗಾಗಿ ಬೇಕಿರುವ ಸಲಕರಣೆಗಳು.
ಕೇಂದ್ರ ಸರಕಾರದ ನವರತ್ನ ಕಂಪೆನಿಗಳಲ್ಲೊಂದಾದ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ವತಿಯಿಂದ ಡೋರ್ನಿಯರ್‌ ಹಾಗೂ ಸುಖೋಯ್‌ ಯುದ್ಧ ವಿಮಾನಗಳಿಗಾಗಿ ಎಂಜಿನ್‌ ತಯಾರಿಕ ಯೋಜನೆ.
ರಕ್ಷಣ ಇಲಾಖೆಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳನ್ನು ಸಂಪೂರ್ಣವಾಗಿ, ಭೇದಿಸಲು ಅಸಾಧ್ಯವಾದ ಡಿಜಿಟಲ್‌ ತಂತ್ರಜ್ಞಾನದ ಚೌಕಟ್ಟಿನೊಳಗೆ ತರುವ ಡಿಜಿಟಲ್‌ ಕೋಸ್ಟ್‌ ಗಾರ್ಡ್‌ ಯೋಜನೆ.

Advertisement

Udayavani is now on Telegram. Click here to join our channel and stay updated with the latest news.

Next