Advertisement

ಪ್ರೊ ಕಬಡ್ಡಿ: ಪಾಟ್ನಾಗೆ ಶಾಕ್‌ ನೀಡಿದ ದಬಾಂಗ್‌ ದಿಲ್ಲಿ

10:44 PM Jan 18, 2022 | Team Udayavani |

ಬೆಂಗಳೂರು: ಅತ್ಯಂತ ರೋಚಕ ಮತ್ತು ಕುತೂಹಲ ಕೆರಳಿಸಿದ ಮಂಗಳವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ ದಬಾಂಗ್‌ ದಿಲ್ಲಿ 32-29 ಅಂತರದಿಂದ ಪಾಟ್ನಾ ಪೈರೇಟ್ಸ್‌ ವಿರುದ್ಧ ಮೇಲುಗೈ ಸಾಧಿಸಿ ಅಗ್ರಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

Advertisement

ದಿಲ್ಲಿ ನಾಯಕ ನವೀನ್‌ ಗೈರಿನಲ್ಲಿ ಮೇಲುಗೈ ಸಾಧಿಸುವ ಇರಾದೆಯೊಂದಿಗೆ ಆಡಲಿಳಿದ ಪಾಟ್ನಾದ ಎಲ್ಲ ಲೆಕ್ಕಾಚಾರವನ್ನು ಹಂಗಾಮಿ ನಾಯಕ ಮಂಜಿತ್‌ ಚಿಲ್ಲರ್‌ ಪಡೆ ತೆಲೆಕೆಳಗಾಗಿಸುವಲ್ಲಿ ಯಶಸ್ವಿಯಾಯಿತು.

ದಿಲ್ಲಿ ಪರ ವಿಜಯ್‌(9) ಸಂದೀಪ್‌ (8), ಅಶು (3) ಉಳಿದಂತೆ ಮಂಜಿತ್‌, ಜೀವಾ, ಕೃಷ್ಣ ತಲಾ 2 ಅಂಕ ಗಳಿಸಿ ಮಿಂಚಿದರು.
ಪಾಟ್ನಾ ಪರ ಪ್ರಶಾಂತ್‌ ರೈ (6), ಸಚಿನ್‌ (5), ನೀರಜ್‌ (4), ಗುಮಾನ್‌ ಸಿಂಗ್‌ 4 ಅಂಕ ಸಂಪಾದಿಸಿದರು.

ಗುಜರಾತ್‌ ಮತ್ತು ಯು ಮುಂಬಾ ನಡುವಿನ ದಿನದ ಮತ್ತೂಂದು ಪಂದ್ಯ 24-24 ಅಂತರದಿಂದ ಡ್ರಾ ಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next