Advertisement

ಮತ್ತೆ ಒಂದಾದ ಬಡವ ರಾಸ್ಕಲ್‌ ಜೋಡಿ

12:37 PM Apr 24, 2022 | Team Udayavani |

“ಬಡವ ರಾಸ್ಕಲ್‌’ ಚಿತ್ರದ ಮೂಲಕ ಹಿಟ್‌ ಜೋಡಿ ಎನಿಸಿಕೊಂಡಿದ್ದ, ಡಾಲಿ ಧನಂಜಯ್‌ ಹಾಗೂ ಅಮೃತಾ ಅಯ್ಯಂಗಾರ್‌ ಜೋಡಿ ಮತ್ತೆ ಒಂದಾಗಿ ತೆರೆ ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ.

Advertisement

ಅದು “ಹೊಯ್ಸಳ’ ಚಿತ್ರದ ಮೂಲಕ. ಈ ಚಿತ್ರದಲ್ಲಿ ಧನಂಜಯ್‌ ಗೆ ಅಮೃತಾ ಜೋಡಿಯಾಗಿದ್ದಾರೆ. ಇತ್ತೀಚೆಗೆ ಈ ಚಿತ್ರಕ್ಕೆ ಮುಹೂರ್ತ ನಡೆದಿದೆ.

ವಿಜಯ್‌ ಎನ್‌ ಅವರು ಕಥೆ, ಚಿತ್ರಕಥೆ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಮೈಸೂರು, ಬೆಂಗಳೂರು ಹಾಗೂ ಬೆಳಗಾವಿಯಲ್ಲಿ 75 ದಿನಗಳ ಚಿತ್ರೀಕರಣ ನಡೆಯಲಿದೆ. ಅಜನೀಶ್‌ ಲೋಕನಾಥ್‌ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಕಾರ್ತಿಕ್‌ ಎಸ್‌ ಛಾಯಾಗ್ರಹಣವಿದೆ.

ಇದನ್ನೂ ಓದಿ:ನಟ ಸಾರ್ವಭೌಮ ಡಾ. ರಾಜ್‌ಕುಮಾರ್’ರವರಿಗೆ ಜನುಮ ದಿನದ ಶುಭಾಶಯಗಳು!…

ದೀಪು ಎಸ್‌ ಕುಮಾರ್‌ ಸಂಕಲನ, ಮಾಸ್ತಿ ಸಂಭಾಷಣೆ ಚಿತ್ರಕ್ಕಿದೆ. ಅಚ್ಯುತಕುಮಾರ್‌, ನವೀನ್‌ ಶಂಕರ್‌, ಅವಿನಾಶ್‌, ರಾಜೇಶ್‌ ನಟರಂಗ ಹಾಗೂ ನಾಗಭೂಷಣ್‌ ಈ ಚಿತ್ರದ ತಾರಾಬಳಗದಲ್ಲಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next