Advertisement

ಜಮಾಲಿಗುಡ್ಡದಲ್ಲಿ ಧನಂಜಯ್‌-ಅದಿತಿ ಪ್ರಭುದೇವ

09:04 AM Nov 26, 2021 | Team Udayavani |

“ಒನ್ಸ್‌ ಅಪಾನ್‌ ಎ ಟೈಮ್‌ ಇನ್‌ ಜಮಾಲಿಗುಡ್ಡ’- ಹೀಗೊಂದು ವಿಭಿನ್ನ ಟೈಟಲ್‌ನ ಚಿತ್ರ ಸದ್ದಿಲ್ಲದೇ ಸೆಟ್ಟೇರಿ ಒಂದಷ್ಟು ಚಿತ್ರೀಕರಣ ಕೂಡಾ ಮುಗಿಸಿದೆ. ಡಾಲಿ ಧನಂಜಯ್‌ ಈ ಚಿತ್ರದ ನಾಯಕ. ಈ ಹಿಂದೆ “ಕನ್ನಡಕ್ಕಾಗಿ ಒಂದನ್ನು ಒತ್ತಿ’ ಚಿತ್ರ ನಿರ್ದೇಶಿಸಿರುವ ಕುಶಾಲ್‌ ಗೌಡ ಈ ಚಿತ್ರದ ನಿರ್ದೇಶಕರು.

Advertisement

ಚಿತ್ರದ ಬಗ್ಗೆ ಮಾತನಾಡುವ ಧನಂಜಯ್‌, “ನಿರ್ದೇಶಕರು ಸಾಕಷ್ಟು ತಿಳಿದುಕೊಂಡಿದ್ದಾರೆ. ಜಗತ್ತಿನ ಬೇರೆ ಬೇರೆ ಸಿನಿಮಾ, ಪುಸ್ತಕಗಳನ್ನು ಓದಿಕೊಂಡಿದ್ದಾರೆ. ಈ ಸಿನಿಮಾವನ್ನು ತುಂಬಾ ನೀಟಾಗಿ ಕಟ್ಟಿಕೊಡುತ್ತಿದ್ದಾರೆ. ಇದೊಂದು ಫೀಲ್‌ ಇರುವ ಸಿನಿಮಾ. ಇಡೀ ಸಿನಿಮಾ ಪ್ರಯಾಣದ ಹಾದಿಯಲ್ಲೇ ಸಾಗುತ್ತದೆ. ನನ್ನ ಪಾತ್ರ ಕೂಡಾ ತುಂಬಾ ಸೊಗಸಾಗಿದೆ’ ಎಂದರು.

ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿ. “ಕೆಲವು ಸಿನಿಮಾಗಳನ್ನು ನಾವು ದುಡ್ಡಿಗಾಗಿ, ಇನ್ನು ಕೆಲವನ್ನು ಬ್ಯಾನರ್‌ಗಾಗಿ, ಸ್ಟಾರ್‌ ಕಾಸ್ಟ್‌ಗಾಗಿ ಮಾಡುತ್ತೇವೆ. ಆದರೆ, ಈ ಸಿನಿಮಾದಲ್ಲಿ ಎಲ್ಲವೂ ಇದೆ. ತುಂಬಾ ಖುಷಿಯಿಂದ ಒಪ್ಪಿಕೊಂಡ ಸಿನಿಮಾವಿದು’ ಎನ್ನುತ್ತಾರೆ.

ಇದನ್ನೂ ಓದಿ:ಆಸ್ಟ್ರೇಲಿಯಾ ಟೆಸ್ಟ್ ತಂಡಕ್ಕೆ ನೂತನ ನಾಯಕನ ನೇಮಕ: ಸ್ಮಿತ್ ಗೆ ಉಪನಾಯಕ ಪಟ್ಟ

ಚಿತ್ರದಲ್ಲಿ ಪ್ರಕಾಶ್‌ ಬೆಳವಾಡಿ, ತ್ರಿವೇಣಿ, ಭಾವನಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಪ್ರತಿಯೊಬ್ಬರು ತಮ್ಮ ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು. ಚಿತ್ರಕ್ಕೆ ಮಾಸ್ತಿ ಅವರ ಸಂಭಾಷಣೆ ಇದೆ. ಈ ಚಿತ್ರವಾಗುವಲ್ಲಿ ಮಾಸ್ತಿ ಅವರ ಪಾತ್ರ ಕೂಡಾ ಪ್ರಮುಖವಾಗಿದೆ. ಶ್ರೀಹರಿ ಈ ಚಿತ್ರದ ನಿರ್ಮಾಪಕರು.

Advertisement
Advertisement

Udayavani is now on Telegram. Click here to join our channel and stay updated with the latest news.

Next