ನವದೆಹಲಿ: ಹೊಸದಾಗಿ ಬರುವ ಪ್ರಕರಣಗಳು ಅಟೋಮ್ಯಾಟಿಕ್ ಆಗಿ ವಿಚಾರಣೆಗೆ ಲಿಸ್ಟ್ ಆಗುವಂತೆ ನೋಡಿಕೊಳ್ಳಿ ಎಂದು ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ಗೆ ನೂತನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಆದೇಶಿಸಿದ್ದಾರೆ.
Advertisement
“ಸೋಮವಾರ, ಮಂಗಳವಾರ ಮತ್ತು ಬುಧವಾರ ರಿಜಿಸ್ಟರ್ ಆಗುವ ಎಲ್ಲ ಪ್ರಕರಣಗಳೂ ಮುಂದಿನ ಸೋಮವಾರ, ಮಂಗಳವಾರ ವಿಚಾರಣೆಗೆ ಬರುವಂತೆ ಲಿಸ್ಟಿಂಗ್ ಅಟೋಮ್ಯಾಟಿಕ್ ಆಗಿ ಆಗಬೇಕು. ಯಾರಿಗಾದರೂ ತುರ್ತು ಇದ್ದರೆ, ಆಗ ನಾವು ನೋಡಿಕೊಳ್ಳುತ್ತೇವೆ. ಈ ಕುರಿತು ರಿಜಿಸ್ಟ್ರಾರ್ಗೆ ಈಗಾಗಲೇ ಸೂಚಿಸಿದ್ದೇನೆ’ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ.