Advertisement

ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ: ಮಧ್ಯಾಹ್ನವಾದರೂ ಸ್ಥಳಕ್ಕೆ ಆಗಮಿಸದ ದಕ್ಷಿಣ ಕನ್ನಡ ಡಿಸಿ

02:28 PM Mar 20, 2021 | Team Udayavani |

ವಿಟ್ಲ: ರಾಜ್ಯ ಸರ್ಕಾರದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಬೆಳಗ್ಗೆ 9 ಗಂಟೆಗೆ ಬರಬೇಕಾಗಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮಧ್ಯಾಹ್ನವಾದರೂ ಬರದೇ ಇದ್ದ ಕಾರಣ ಜಿ.ಪಂ.ಸದಸ್ಯರು ಮತ್ತು ತಾ.ಪಂ.ಸದಸ್ಯರು ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಕಾಯುವಂತಾಗಿದೆ.

Advertisement

ಈ ಬಾರಿಯ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯವನ್ನು ಜಿಲ್ಲೆಯ ವಿಟ್ಲಪಡ್ನೂರು ಗ್ರಾಮದಲ್ಲಿ ಆಯೋಜಿಸಲಾಗಿದೆ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರ ಗ್ರಾಮವಾಸ್ತವ್ಯವನ್ನು ಇಂದು ಬೆಳಗ್ಗೆ 9.30ರಿಂದ ಸಂಜೆ 5.30ರ ವರೆಗೆ ನಿಗದಿಪಡಿಸಲಾಗಿತ್ತು. ಆದರೆ ಜಿಲ್ಲಾಧಿಕಾರಿ ಆಗಮಿಸುವಾಗ 11 ಗಂಟೆಯಾಗುತ್ತದೆ ಎಂದು ಶುಕ್ರವಾರ ತಿಳಿಸಲಾಗಿತ್ತು. ಆದರೆ ಜಿಲ್ಲಾಧಿಕಾರಿ ಆಗಮಿಸುವಾಗ 11.30 ಆಗಲಿದೆ ಎಂದು ಶನಿವಾರ ಬೆಳಗ್ಗೆ ಹೇಳಲಾಗಿತ್ತು. ಆದರೆ ಗಂಟೆ 12.30 ಆದರೂ ಜಿಲ್ಲಾಧಿಕಾರಿ ಆಗಮಿಸಲಿಲ್ಲ.

ಇದನ್ನೂ ಓದಿ:ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ: ಮೂವರಿಗೆ ಗಂಭೀರ ಗಾಯ

ಹೆಚ್ಚಿನ ಇಲಾಖಾಧಿಕಾರಿಗಳು ಬಂದಿದ್ದು, ಫಲಾನುಭವಿಗಳು, ಗ್ರಾಮಸ್ಥರು ಕಾದು ಕಾದು ಸುಸ್ತಾಗಿದ್ದಾರೆ. ಜಿ.ಪಂ.ಸದಸ್ಯರು ಮತ್ತು ತಾ.ಪಂ.ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತಿತರರು ಕಾಯುತ್ತಿದ್ದಾರೆ.

Advertisement

ಹಲವು ಇಲಾಖೆಗಳ ಸ್ಟಾಲ್ ಗಳನ್ನು ತೆರೆಯಲಾಗಿದೆ. ವಿವಿಧ ಇಲಾಖಾಧಿಕಾರಿಗಳು ಪ್ರತ್ಯೇಕವಾಗಿ ಕಾದಿರಿಸಿದ ಆಸನಗಳಲ್ಲಿ ಆಸೀನರಾಗಿದ್ದಾರೆ. ಕೆಲವು ಇಲಾಖಾಧಿಕಾರಿಗಳು ತಮ್ಮ ಇಲಾಖೆಯ ಸೌಲಭ್ಯಗಳ ವಿವರಗಳನ್ನು ನೀಡುತ್ತಿದ್ದಾರೆ.

ಜಿಲ್ಲಾಧಿಕಾರಿಗಳು ಮಧ್ಯಾಹ್ನ ಒಂದು ಗಂಟೆಗೆ ಸ್ಥಳಕ್ಕೆ ಆಗಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next