Advertisement

ಸಿದ್ದು ಪಡೆಯ ವಿರುದ್ಧ ಹೈಕಮಾಂಡ್ ಅಸ್ತ್ರ ಪ್ರಯೋಗಿಸಿದ ಡಿಕೆ ಶಿವಕುಮಾರ್

09:33 AM Jul 26, 2022 | Team Udayavani |

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಮಧ್ಯೆ ನಡೆಯುತ್ತಿದ್ದ ಹೋರಾಟ ಈಗ ಮತ್ತೊಂದು ಮಜಲಿಗೆ ಹೊರಳಿದ್ದು, ತಮ್ಮ ವಿರುದ್ಧ ಧ್ವನಿ ಎತ್ತುತ್ತಿದ್ದವರಿಗೆ ಹೈಕಮಾಂಡ್ ಮೂಲಕವೇ ಉತ್ತರ‌‌‌ ಕೊಡಿಸುವುದಕ್ಕೆ ಡಿಕೆ‌ ಶಿವಕುಮಾರ್ ಮುಂದಾಗಿದ್ದಾರೆ.

Advertisement

ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕೆಂದು ನೀಡಿದ ಎಚ್ಚರಿಕೆಯ ಬಳಿಕವೂ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೆ ನೀಡಿದ್ದ ಶಾಸಕ ಜಮೀರ್ ಅಹಮದ್ ಖಾನ್ ಗೆ ಹೈಕಮಾಂಡ್ ನೋಟಿಸ್ ನೀಡಿದ್ದು, ಭವಿಷ್ಯದಲ್ಲಿ ಇಂಥ ಹೇಳಿಕೆ ನೀಡುವವರಿಗೆಲ್ಲ ಇದೊಂದು ಎಚ್ಚರಿಕೆಯ ಗಂಟೆಯಾಗಿದೆ.

ಜಮೀರ್ ಗೆ ಹೈಕಮಾಂಡ್ ನೀಡಿರುವ ನೋಟಿಸ್ ಈಗ ಪಕ್ಷದ ವಲಯದಲ್ಲಿ ಬೇರೆ ಬೇರೆ ಚರ್ಚೆಗೆ ಕಾರಣವಾಗಿದೆ. ಮೂಲ ಕಾಂಗ್ರೆಸಿಗರೆಲ್ಲರೂ ಸೇರಿ ಇಂಥದೊಂದು ಗಟ್ಟಿ ನಿರ್ಧಾರವನ್ನು ಹೈಕಮಾಂಡ್ ಮೂಲಕವೇ ಹೇಳಿಸಿದ್ದಾರೆಂದು ತಿಳಿದು ಬಂದಿದೆ. ಇಲ್ಲವಾದರೆ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಲು ಅವರ ಆಪ್ತರು ಇನ್ನಷ್ಟು ಮುಂದಾಗಬಹುದೆಂದು ಈ ತಡೆ ಹಾಕಲಾಗಿದೆ.

ಇದನ್ನೂ ಓದಿ:ಇನ್ನು ಒಂದು ವರ್ಷ ನೆಮ್ಮದಿ: ಕೇಂದ್ರ ಸಚಿವರನ್ನು ಭೇಟಿಯಾದ ರಾಜ್ಯ ನಿಯೋಗ

ಎಲ್ಲದಕ್ಕಿಂತ ಮುಖ್ಯವಾಗಿ ಸಿದ್ದರಾಮೋತ್ಸವಕ್ಕೆ ರಾಹುಲ್ ಗಾಂಧಿ ಬಂದರೆ ಅವರ ಸಮ್ಮುಖದಲ್ಲಿ‌ ಯಾರೂ ಇಂಥ ಉಪದ್ವ್ಯಾಪ್ಯ ಮಾಡದೇ ಇರಲಿ ಎಂಬ‌ ಕಾರಣಕ್ಕೆ ಹೈಕಮಾಂಡ್ ಈ ಬಿಸಿ‌ ಮುಟ್ಟಿಸಿದೆ. ಮೌನವಾಗಿದ್ದುಕೊಂಡೆ ಸಿದ್ದರಾಮಯ್ಯ ಬಣಕ್ಕೆ ಶಿವಕುಮಾರ್ ಡೋಸ್ ಕೊಟ್ಟಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next