ಚಿತ್ರದುರ್ಗ: ಬಿಜೆಪಿ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಬಳ್ಳಾರಿಯಲ್ಲಿ ಅವರ ಆಂತರಿಕ ಕಚ್ಚಾಟಗಳನ್ನು ಶ್ರೀರಾಮುಲು ಅಣ್ಣ ಮೊದಲು ಸರಿಪಡಿಸಿಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಕುರ್ಚಿಯ ಗೊಂದಲವಿದೆ ಎನ್ನುವ ಸಚಿವ ಬಿ.ಶ್ರೀರಾಮುಲು ಮೊದಲು ಅವರ ಸಮಸ್ಯೆ ಬಗೆಹರಿಸಿಕೊಳ್ಳಲಿ.
ಚಾಮರಾಜಪೇಟೆಯಲ್ಲಿ ಬಿಜೆಪಿ ನಾಯಕರು ರೌಡಿಶೀಟರ್ ಸೈಲೆಂಟ್ ಸುನೀಲ್ ಜತೆ ಕಾಣಿಸಿಕೊಂಡಿದ್ದು ಬಿಜೆಪಿ ಸಂಸ್ಕೃತಿಯ ಪ್ರತೀಕ. ಸಿದ್ದರಾಮಯ್ಯ ಅಧಿ ಕಾರಕ್ಕೆ ಬಂದರೆ ಹಿಂದೂಗಳ ಮಾರಣಹೋಮ ನಡೆಯುತ್ತದೆ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಭ್ರಷ್ಟಾಚಾರ, ಮತ ಕಳ್ಳತನ ಮುಚ್ಚಿ ಹಾಕಲು ಚುನಾವಣೆ ಹತ್ತಿರವಾದಂತೆ ಕೋಮುಗಲಭೆ ಸೃಷ್ಟಿಸುತ್ತಿದ್ದಾರೆ. ಸಿ.ಟಿ. ರವಿ ಹೇಳಿಕೆ ಆಧರಿಸಿ ಡಿಜಿಪಿ ಹಾಗೂ ಮುಖ್ಯಮಂತ್ರಿಗಳು ದೂರು ದಾಖಲಿಸಬೇಕು. ಕುರ್ಚಿ ಕೊಡುವವರು ಮತದಾರರು. ನಾವು ಅವರ ರಕ್ಷಣೆ, ಉತ್ತಮ ಆಡಳಿತ ಕೊಡುವ ವಿಶ್ವಾಸ ಮೂಡಿಸುತ್ತಿದ್ದೇವೆ ಎಂದರು.
Related Articles