Advertisement

ದ.ಕ.: ನಾಲ್ವರಿಗೆ ಒಲಿದ ರಾಷ್ಟ್ರಪತಿ ಭೇಟಿ ಅವಕಾಶ

10:57 PM May 28, 2023 | Team Udayavani |

ಗುತ್ತಿಗಾರು: ರಾಷ್ಟ್ರಪತಿಯವರು ಬುಡಕಟ್ಟು ಜನಾಂಗದ ಸದಸ್ಯರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿದ್ದು, ಈ ಸಲುವಾಗಿ ದಿಲ್ಲಿಯ ರಾಷ್ಟ್ರಪತಿ ಭವನದ ಅಮೃತ ಉದ್ಯಾನಕ್ಕೆ ದೇಶದ ಎಲ್ಲೆಡೆಯಿಂದ ಬುಡಕಟ್ಟು ಜನಾಂಗದ ವಿವಿಧ ವರ್ಗಗಳ ಪುರುಷರು ಹಾಗೂ ಮಹಿಳೆಯರನ್ನು ಆಯ್ಕೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಿಂದಲೂ ಹಲವು ಸಾಧಕರನ್ನು ಆಯ್ಕೆ ಮಾಡಲಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಮಂದಿ ಆಯ್ಕೆಯಾಗಿದ್ದಾರೆ.

Advertisement

ದ.ಕ. ಕೊರಗರ ಜಿಲ್ಲಾ ಸಂಘದ ಅಧ್ಯಕ್ಷ ಮಂಗಳೂರಿನ ಮರಕಡದ ಎಂ. ಸುಂದರ, ಸಂಘಟನೆಯ ಸದಸ್ಯರಾದ ಕಂಕನಾಡಿಯ ರತ್ನಾ, ಕಿನ್ನಿಗೋಳಿಯ ಸುಪ್ರಿಯಾ ಮತ್ತು ಸಂಘಟನೆಯ ಖಜಾಂಚಿ ಸುಳ್ಯ ತಾಲೂಕಿನ ನೆಲ್ಲೂರು ಕೇಮ್ರಾಜೆ ಗ್ರಾಮದ ನಾರ್ಣಕಜೆಯ ರಾಮಚಂದ್ರ ಆಯ್ಕೆಯಾಗಿದ್ದಾರೆ.

ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಬುಡಕಟ್ಟು ಪ್ರತಿನಿಧಿಗಳಿಗೆ ಈ ಅವಕಾಶವಿದ್ದು, ದ.ಕ. ಕೊರಗರ ಜಿಲ್ಲಾ ಸಂಘದಿಂದ ಈ ಹೆಸರು ಸೂಚಿಸಲಾಗಿದೆ.

ಜೂನ್‌ 11ರಿಂದ 13ರ ವರೆಗೆ ದಿಲ್ಲಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು 11ರಂದು ರಾಷ್ಟ್ರಪತಿ ಭೇಟಿ ಮತ್ತು ಎರಡು ದಿನಗಳ ಕಾಲ ಹೊಸದಿಲ್ಲಿ ದರ್ಶನ ಇರಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next