Advertisement

Myanmar; ಮೋಚಾ ಚಂಡಮಾರುತ; ಮೃತಪಟ್ಟವರ ಸಂಖ್ಯೆ 41ಕ್ಕೆ ಏರಿಕೆ

10:46 PM May 16, 2023 | Team Udayavani |

ನಾಪಿಥಾ:ರೋಹಿಂಗ್ಯಾ ಮುಸ್ಲಿಮರ ಶಿಬಿರಗಳು ಅಧಿಕ ಸಂಖ್ಯೆಯಲ್ಲಿರುವ ಮಯೆನ್ಮಾರ್‌ ರಖೀನೆ ಪ್ರದೇಶ, ಮೋಚಾ ಚಂಡಮಾರುತದ ಅಬ್ಬರಕ್ಕೆ ಅಕ್ಷರಶಃ ನುಲುಗಿಹೋಗಿದ್ದು, ಪ್ರದೇಶದಲ್ಲಿ ಮೃತಪಟ್ಟವರ ಸಂಖ್ಯೆ ಮಂಗಳವಾರ 41ಕ್ಕೆ ಏರಿಕೆಯಾಗಿದೆ.

Advertisement

ಗಂಟೆಗೆ 195 ಕಿ.ಮೀ.ವೇಗದ ಗಾಳಿ ಮಳೆಯ ಪರಿಣಾಮ ಭಾರೀ ಅವಘಡಗಳು ಸಂಭವಿಸಿವೆ. ಮನೆಗಳು, ಮರಗಳು ಮುರಿದುಬಿದ್ದಿವೆ. , 100ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂತ್ರಸ್ಥರ ಸ್ಥಳಾಂತರ ಕಾರ್ಯಾಚರಣೆಯನ್ನೂ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಚಂಡಮಾರುತದಿಂದಾಗಿ ಮರಗಳು ನೆಲಕ್ಕೆ ಉರುಳಿದ್ದು ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್‌ ಕಡಿತಗೊಂಡಿದೆ.

ಮತ್ತೊಂದೆಡೆ ಬಾಂಗ್ಲಾ-ಮ್ಯಾನ್ಮಾರ್‌ಗೆ ಅಪ್ಪಳಿಸಿರುವ ಮೋಚಾ, ಭಾರತದ ಮಿಜೋರಾಂನಲ್ಲಿಯೂ ತೀವ್ರತರದ ಪರಿಣಾಮ ಉಂಟುಮಾಡಿದೆ. 236 ಕ್ಕೂ ಅಧಿಕ ಮನೆಗಳು ಮಳೆಯಿಂದಾಗಿ ಹಾನಿಗೊಳಗಾಗಿವೆ. ನಿರಾಶ್ರಿತ ಶಿಬಿರಗಳಲ್ಲಿ ನೀರು ಆವರಿಸಿದ್ದು, ಜನರ ಪರಿಸ್ಥಿತಿ ಅತಂತ್ರವಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next