Advertisement
ಚಂಡಮಾರುತ ಅಪ್ಪಳಿಸಿದ ಸಮಯದಲ್ಲಿ ಗಂಟೆಗೆ 100-130 ಕಿ.ಮೀ ವೇಗದಲ್ಲಿ ಗಾಳಿ ಬೀಸಿದ್ದು, ಚೆನ್ನೈ ನಗರದಿಂದ 115 ಕಿ.ಮೀ ದಕ್ಷಿಣಕ್ಕೆ ಹಾಗೂ ಪುದುಚೇರಿಯಿಂದ 30 ಕಿಮೀ ಉತ್ತರಕ್ಕೆ ಇರುವ ಮರಕ್ಕಣಮ್ ಸಮೀಪ ಚಂಡಮಾರುತ ಅಪ್ಪಳಿಸಿದೆ. ಚೆನ್ನೈ ನಗರದಲ್ಲೂ ಭಾರೀ ಮಳೆಯಾಗುತ್ತಿದ್ದು ಹಲವೆಡೆ ಭೂಕುಸಿತಗೊಂಡಿದೆ. ಚಂಡಮಾರುತದ ಪರಿಣಾಮವಾಗಿ ಇವತ್ತು ಮಧ್ಯಾಹ್ನದವರೆಗೂ ತಮಿಳುನಾಡಿನ ಕೆಲವೆಡೆ ದೊಡ್ಡ ಪ್ರಮಾಣದಲ್ಲಿ ಮಳೆ ಗಾಳಿ ಇರಲಿದೆ. ನಾಳೆ ಶುಕ್ರವಾರದವರೆಗೂ ಮಳೆ ಮುಂದುವರಿಯಲಿದೆ ಎನ್ನಲಾಗಿದೆ.
Related Articles
Advertisement
ರಕ್ಷಣಾ ಕಾರ್ಯಕ್ಕಾಗಿ ಭಾರತೀಯ ಸೇನೆಯಿಂದ ಎಂಟು ತಂಡಗಳು ಇವತ್ತು ಚೆನ್ನೈಗೆ ಬಂದಿಳಿಯುತ್ತಿದ್ದು, ಒಂದೊಂದು ತಂಡದಲ್ಲಿ 10 ಮಂದಿ ಇದ್ದಾರೆ. ಇದರ ಜೊತೆಗೆ ಇನ್ನೂ ಆರು ತಂಡಗಳು ತಿರುಚ್ಚಿಗೆ ಹೋಗುತ್ತಿವೆ. ಹಾಗೆಯೇ, ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆಗಳೂ ಕೂಡ ತಮ್ಮ ಹಲವು ತಂಡಗಳನ್ನ ರಕ್ಷಣಾ ಕಾರ್ಯಕ್ಕಾಗಿ ತಮಿಳುನಾಡಿನಲ್ಲಿ ನಿಯೋಜಿಸಿವೆ.