Advertisement

ಮೋಚಾ ಭೀತಿ ಬಾಂಗ್ಲಾದಲ್ಲಿ ಹೈ ಅಲರ್ಟ್‌: ಲಕ್ಷಾಂತರ ಜನರಿಗೆ ಸ್ಥಳಾಂತರಕ್ಕೆ ಸೂಚನೆ

11:13 PM May 13, 2023 | Team Udayavani |

ಢಾಕಾ: ಬಾಂಗ್ಲಾದೇಶದಲ್ಲಿ ತೀವ್ರ ಅಪಾಯಕಾರಿ ಮಟ್ಟದಲ್ಲಿ ಮೋಚಾ ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿರುವ ಹಿನ್ನೆಲೆ ದೇಶದ ಆಗ್ನೇಯ ಕರಾವಳಿ ಭಾಗದ ಲಕ್ಷಾಂತರ ಜನರಿಗೆ ಸ್ಥಳಾಂತರಗೊಳ್ಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

Advertisement

ಬಾಂಗ್ಲಾದೇಶ-ಮ್ಯಾನ್ಮಾರ್‌ ಭಾಗದಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಅಲ್ಲದೇ, ವಿಶ್ವದ ಅತೀದೊಡ್ಡ ರೋಹಿಂಗ್ಯಾ ನಿರಾಶ್ರಿತ ಶಿಬಿರಿವಿರುವ ಪ್ರದೇಶಗಳಲ್ಲಿನ ಲಕ್ಷಾಂತರ ಮಂದಿಯ ಸ್ಥಳಾಂತರಕ್ಕೆ ಯೋಜನೆ ರೂಪಿಸಲಾಗಿದೆ ಎಂದು ವಿಪತ್ತು ನಿರ್ವಹಣ ತಂಡದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗಂಟೆಗೆ 175 ಕಿ.ಮೀ.ವೇಗದಲ್ಲಿ ಗಾಳಿ ಬೀಸುತ್ತಿದ್ದು, ತೀವ್ರತರದಲ್ಲಿ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಭಾರತದ ಅಂಡಮಾನ್‌ ನಿಕೋಬಾರ್‌, ಮಿಜೋರಾಂ, ತ್ರಿಪುರಾ, ನಾಗಾ ಲ್ಯಾಂಡ್‌, ಮಣಿಪುರ, ಅಸ್ಸಾಂ, ಒಡಿಶಾ ಹಾಗೂ ಪಶ್ಚಿಮ ಬಂಗಾಲದಲ್ಲೂ ತೀವ್ರ ಮಳೆಯಾಗುವ ಸಾಧ್ಯತೆಗಳಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next