Advertisement

ಮೋಚಾ ಚಂಡಮಾರುತ : ಸಾವಿನ ಸಂಖ್ಯೆ 6 ಕ್ಕೆ ಏರಿಕೆ, 700 ಮಂದಿಗೆ ಗಾಯ

11:35 PM May 15, 2023 | Team Udayavani |

ಢಾಕಾ: ಏಷ್ಯಾದಲ್ಲೇ ಅತ್ಯಂತ ಕನಿಷ್ಠ ಪ್ರಗತಿ ಹೊಂದಿದ ದೇಶಗಳಲ್ಲೊಂದಾದ ಮ್ಯಾನ್ಮಾರ್‌ನ ಪಶ್ಚಿಮ ಭಾಗಕ್ಕೆ ಮೋಚಾ ಚಂಡಮಾರುತ ಬಲವಾಗಿ ಅಪ್ಪಳಿಸಿದೆ. ಪರಿಣಾಮ 6 ಮಂದಿ ಮೃತಪಟ್ಟಿದ್ದಾರೆ, 700 ಮಂದಿಗೆ ಗಾಯಗಳಾಗಿವೆ. ಅಲ್ಲಲ್ಲಿ ಸಂಪರ್ಕ ಕಡಿತ­ವಾಗಿದೆ.

Advertisement

ಸೋಮವಾರ 12 ಅಡಿ ಎತ್ತರದ ನೀರಿನಲ್ಲಿ ಸಿಲುಕಿದ್ದ 1,000 ಮಂದಿಯನ್ನು ಸ್ಥಳಾಂತರಿಸ­ಲಾಗಿದೆ. ಮೋಚಾ ಅಪ್ಪಳಿಸುತ್ತದೆಯೆಂಬ ಖಾತ್ರಿಯಿದ್ದಿದ್ದ­ರಿಂದ ಹೆಚ್ಚು ಕಡಿಮೆ 20,000 ಮಂದಿಗೆ ರಖೀನೆ ರಾಜ್ಯದ ಸಿಟೆÌಯಲ್ಲಿ ಬಲವಾದ ಕಟ್ಟಡಗಳಲ್ಲಿ ರಕ್ಷಣೆ ನೀಡಲಾಗಿತ್ತು. ಮಠಗಳು, ಪಗೋಡ­ಗಳು, ಶಾಲೆಗಳಲ್ಲಿ ಸೇರಿದ್ದ ಅವರಿಗೂ ಪರಿಣಾಮ ತಾಗಿದೆ. ಇದರಿಂದ 700ಕ್ಕೂ ಅಧಿಕ ಮಂದಿ ಗಾಯಗೊಂಡಿ­ದ್ದಾರೆ. ರಖೀನೆ ರಾಜ್ಯದ ತಗ್ಗಿನ ಪ್ರದೇಶಗಳಲ್ಲಿರುವ 10 ವಾರ್ಡ್‌ಗಳಿಗೆ ನೀರು ನುಗ್ಗಿದೆ.

Advertisement

Udayavani is now on Telegram. Click here to join our channel and stay updated with the latest news.

Next